ಜೇಕಬ್‌ ನೆರವಿಗೆ ಬಂದ ಕೃನಾಲ್​ ಪಾಂಡ್ಯ; ಅಗತ್ಯವಿರುವಷ್ಟನ್ನು ಬರೆದುಕೊಳ್ಳಿ ಎಂದು ಖಾಲಿ ಚೆಕ್‌ ನೀಡಿದ ಗೆಳೆಯ

ಕೋಲ್ಕತ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ಹೋರಾಟದಲ್ಲಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಜೇಕಬ್ ಮಾರ್ಟಿನ್‌ರ ನೆರವಿಗೆ ಧಾವಿಸಿರುವ ಕ್ರಿಕೆಟಿಗ ಕೃನಾಲ್‌ ಪಾಂಡ್ಯ ಅವರು ಖಾಲಿ ಚೆಕ್‌ ಅನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಹಾರ್ದಿಕ್‌ ಪಾಂಡ್ಯ ಅವರ ಹಿರಿಯ ಸೋದರ ಕೃನಾಲ್‌ ಪಾಂಡ್ಯ ಅವರು ಪಟೇಲ್‌ ಅವರಿಗೆ ಖಾಲಿ ಚೆಕ್‌ ವಿತರಿಸಿದ್ದು, ಸರ್‌, ನಿಮಗೆ ಅಗತ್ಯವಿರುವ ಎಲ್ಲವನ್ನು ಇದರಲ್ಲಿ ತುಂಬಿಕೊಳ್ಳಿ. ಆದರೆ, ಒಂದು ಲಕ್ಷಕ್ಕಿಂತ ಕಡಿಮೆಯಿಲ್ಲ ಎಂದು ಹೇಳಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಮಾಜಿ ನಾಯಕ ಸೌರವ್ ಗಂಗೂಲಿ ಸಹಾಯ ಹಸ್ತ ಚಾಚಿದ್ದು, ಇಂಥ ಕಷ್ಟದ ಸಮಯದಲ್ಲಿ ಅವರ ಕುಟುಂಬ ಏಕಾಂಗಿಯಾಗಿ ನಿಂತಿಲ್ಲ ಎಂದು ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಡಿ. 28ರಂದು ನಡೆದ ಅಪಘಾತದಲ್ಲಿ ಶ್ವಾಸಕೋಶ ಹಾಗೂ ಲಿವರ್​ಗೆ ಗಂಭೀರ ಪ್ರಮಾಣದ ಪೆಟ್ಟು ತಿಂದಿರುವ 46 ವರ್ಷದ ಮಾರ್ಟಿನ್, ವಡೋದರದ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್​ನ ಸಹಾಯದಿಂದ ದಿನ ದೂಡುತ್ತಿದ್ದಾರೆ. ಮಾರ್ಟಿನ್​ರ ಪತ್ನಿ ಮಾಡಿದ ಮನವಿಯಿಂದಾಗಿ ಬಿಸಿಸಿಐ 5 ಲಕ್ಷ ರೂ. ಹಾಗೂ ಬರೋಡ ಕ್ರಿಕೆಟ್ ಸಂಸ್ಥೆಯು 3 ಲಕ್ಷ ರೂ. ನೆರವು ನೀಡಿದೆ.

1999ರ ಸೆಪ್ಟೆಂಬರ್​ನಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ತಂಡಕ್ಕೆ ಪದಾರ್ಪಣೆ ಮಾಡಿದ್ದ ಜೇಕಬ್ ಮಾರ್ಟಿನ್, 10 ಏಕದಿನ ಪಂದ್ಯವಾಡಿದ್ದರು. 22.57ರ ಸರಾಸರಿಯಲ್ಲಿ 158 ರನ್ ಬಾರಿಸಿದ್ದ ಜೇಕಬ್, ಗಂಗೂಲಿ ನಾಯಕತ್ವದಲ್ಲಿ 5 ಪಂದ್ಯ ಹಾಗೂ ಸಚಿನ್ ತೆಂಡುಲ್ಕರ್ ನಾಯಕತ್ವದಲ್ಲಿ 5 ಪಂದ್ಯ ಆಡಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *