Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಸಂಕಟದಲ್ಲಿ ರಾಜ್ಯದ ಕಾಳಧನಿಕರು

Saturday, 20.01.2018, 3:05 AM       No Comments

ಬೆಂಗಳೂರು: ನೋಟು ಅಮಾನ್ಯೀಕರಣದ ನಂತರ ಕಂಗಾಲಾಗಿದ್ದ ಕಾಳಧನಿಕರು ಈಗ ಮತ್ತೆ ಗೊಂದಲದಲ್ಲಿ ಸಿಲುಕಿದ್ದಾರೆ. 2 ಸಾವಿರ ರೂ. ಮುಖಬೆಲೆಯ ನೋಟು ರದ್ದಾಗಲಿದೆ ಎಂಬ ವದಂತಿ ಜೀವ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಈ ನೋಟುಗಳನ್ನು ಕಮಿಷನ್ ಆಧಾರದಲ್ಲಿ ಸಣ್ಣ ಬೆಲೆಯ ನೋಟುಗಳಿಗೆ ಬದಲಾಯಿಸಿಕೊಡುವ ದಂಧೆ ರಾಜ್ಯಾದ್ಯಂತ ಸದ್ದಿಲ್ಲದೆ ಆರಂಭವಾಗಿದೆ.

500 ಮತ್ತು 1 ಸಾವಿರ ರೂ. ಮುಖಬೆಲೆ ನೋಟುಗಳ ಅಮಾನ್ಯೀಕರಣದ ನಂತರ 2 ಸಾವಿರ ರೂ. ಮುಖಬೆಲೆ ನೋಟು ಚಲಾವಣೆಗೆ ಬಂದಾಗಿನಿಂದಲೂ ಇದು ಕೂಡ ಕೆಲ ದಿನಗಳ ಬಳಿಕ ನಿಷೇಧಗೊಳ್ಳುತ್ತದೆ ಎಂಬ ಊಹಾಪೋಹಗಳು ಹರಿದಾಡುತ್ತಲೇ ಇವೆ. ಅಂಥ ಯಾವುದೇ ಯೋಚನೆ ಇಲ್ಲ ಎಂದು ಆರ್​ಬಿಐ ಪದೇಪದೆ ಸ್ಪಷ್ಟಪಡಿಸುತ್ತಿದ್ದರೂ ಕಾಳಧನಿಕರು ಅದನ್ನು ನಂಬುವ ಸ್ಥಿತಿಯಲ್ಲಿಲ್ಲ. ಕರ್ನಾಟಕ ವಿಧಾನಸಭೆ ಚುನಾವಣೆ ಹೊತ್ತಿಗೆ 2 ಸಾವಿರ ರೂ. ನೋಟು ರದ್ದಾಗಲಿದೆ ಎಂಬ ಗಾಳಿಸುದ್ದಿ ಸುನಾಮಿ ಸ್ವರೂಪ ಪಡೆದುಕೊಂಡಿರುವುದರಿಂದ ಅಪಾಯಕ್ಕೆ ಆಸ್ಪದವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬ್ಲ್ಯಾಕ್ ಆಂಡ್ ವೈಟ್ ದಂಧೆಗೆ ಕೈಹಾಕಿದ್ದಾರೆ.

97 ಕೋಟಿಗೆ ರಾಜ್ಯ ನಂಟು!: ಉತ್ತರ ಪ್ರದೇಶದ ಕಾನ್ಪುರದ ಮನೆಯಲ್ಲಿ 97 ಕೋಟಿ ರೂ. ಮೌಲ್ಯದ ಹಳೇ ನೋಟು ಪತ್ತೆ ಪ್ರಕರಣಕ್ಕೆ ಕರ್ನಾಟಕದ ಲಿಂಕ್ ಇರುವುದು ತನಿಖೆಯಿಂದ ಸಾಬೀತಾಗಿದೆ. ಬೆಂಗಳೂರು ಮೂಲದ ಹರಿಕೃಷ್ಣ ಎಂಬಾತ ಶೇ.40 ಕಮಿಷನ್​ಗೆ ಹಳೇ ನೋಟುಗಳನ್ನು ವೈಟ್​ವುನಿಗೆ ಬದಲಾಯಿಸಿಕೊಡುವುದಾಗಿ ಭರವಸೆ ನೀಡಿದ್ದ ಎಂದು ಬಂಧಿತ ಆರೋಪಿಗಳು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಳು ತನಿಖೆಯಿಂದ ಹೊರಬೀಳಬೇಕಿವೆ. ಹಳೇ ನೋಟುಗಳ ಬದಲಾವಣೆಗೆ ಯತ್ನಿಸುತ್ತಿರುವ ಪ್ರಕರಣಗಳು ಆಗಿಂದಾಗ್ಗೆ ಬೆಳಕಿಗೆ ಬರುತ್ತಲೇ ಇವೆ. ಆದರೆ, ಯಾವ ರೀತಿಯಲ್ಲಿ ಹಳೇ ನೋಟು ಬದಲಾವಣೆ ಮಾಡುತ್ತಾರೆ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.

ಯಾವ ನೋಟಿಗೆ ಬೇಡಿಕೆ?

ಕಾಳಧನಿಕರು ಮಧ್ಯವರ್ತಿಗೆ ಶೇ.10-15 ಕಮಿಷನ್ ಕೊಟ್ಟು 2000 ರೂ. ನೋಟನ್ನು 500, 200, 100 ರೂ. ನೋಟುಗಳಿಗೆ ಬದಲಿಸಿಕೊಳ್ಳುತ್ತಿದ್ದಾರೆ. ಬಹುತೇಕರು 500 ರೂ. ನೋಟುಗಳಿಗೆ ಮುಗಿಬಿದ್ದಿದ್ದಾರೆನ್ನಲಾಗುತ್ತಿದೆ.

ಶೇ.5-8 ಕಮಿಷನ್

ಸಿಂಡಿಕೇಟ್ ಕಟ್ಟಿಕೊಳ್ಳುವ ದಲ್ಲಾಳಿಗಳು 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಟ್ಟರೆ ಪ್ರತಿ ಸದಸ್ಯರಿಗೂ ಶೇ.5 ರಿಂದ 8 ಕಮಿಷನ್ ಕೊಡುವ ಆಮಿಷವೊಡ್ಡಿ ಎಕ್ಸ್​ಚೇಂಜ್ ಮಾಡಿಸುತ್ತಿದ್ದಾರೆ. ಸಿಂಡಿಕೆೇಟ್ ಸದಸ್ಯರು ತಮಗೆ ಪರಿಚಯವಿರುವ ಖಾಸಗಿ, ಸರ್ಕಾರಿ ಬ್ಯಾಂಕ್, ಸಹಕಾರ ಬ್ಯಾಂಕ್ ಮತ್ತು ಪೆಟ್ರೋಲ್ ಬಂಕ್, ವಾಣಿಜ್ಯ ಮಳಿಗೆ ಸೇರಿದಂತೆ ದಿನನಿತ್ಯ ದೊಡ್ಡ ಪ್ರಮಾಣದ ಹಣಕಾಸಿನ ವ್ಯವಹಾರ ನಡೆಸುವ ಸಂಸ್ಥೆಗಳ ಕ್ಯಾಷಿಯರ್ ಮತ್ತು ಮಾಲೀಕರ ಜತೆಗೆ ಸಂಪರ್ಕವಿಟ್ಟುಕೊಂಡು ಅವರಿಗೆ ಶೇ. 4 ಕಮಿಷನ್ ಕೊಟ್ಟು ನೋಟು ಬದಲಾವಣೆ ಮಾಡುತ್ತಿದ್ದಾರೆ. ದಲ್ಲಾಳಿಗಳು ಕಾಳಧನಿಕರಿಂದ ಶೇ.10-15 ರವರೆಗೆ ಕಮಿಷನ್ ಪಡೆಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ದೊಡ್ಡ ನೋಟು ಸಂಗ್ರಹ ಸುಲಭ

ಪ್ರಧಾನಿ ನರೇಂದ್ರ ಮೋದಿ 2016 ನ. 8ರಂದು 500, 1 ಸಾವಿರ ರೂ. ನೋಟು ಚಲಾವಣೆಯನ್ನು ಹಿಂತೆಗೆದುಕೊಂಡಿರುವುದಾಗಿ ಘೋಷಿಸಿದ ನಂತರ ಕಾಳಧನಿಕರು ಕಪ್ಪುಹಣವನ್ನು ಸಾಧ್ಯವಾದ ಮಟ್ಟಿಗೆ 2 ಸಾವಿರ ರೂ. ಮುಖಬೆಲೆಯ ನೋಟಾಗಿ ಬದಲಾಯಿಸಿಕೊಂಡು ರಕ್ಷಣೆ ಮಾಡಿಕೊಂಡಿದ್ದಾರೆ. ಆದರೆ 2 ಸಾವಿರ ರೂ. ನೋಟು ಸಹ ಬ್ಯಾನ್ ಆಗಿಬಿಟ್ಟರೆ ಎಂಬ ಆತಂಕ ಅವರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರೀಗ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ ಆ ನೋಟುಗಳನ್ನು 500 ರೂ.ಗಳಿಗೆ ಬದಲಾಯಿಸಿಕೊಳ್ಳಲು ಹರಸಾಹಸ ಮಾಡತೊಡಗಿದ್ದಾರೆ.

10-15 ಸದಸ್ಯರ ಸಿಂಡಿಕೇಟ್

ಬ್ಲ್ಯಾಕ್ ಆಂಡ್ ವೈಟ್ ದಂಧೆಯಲ್ಲಿ ತೊಡಗಿರುವ ಪ್ರತಿ ದಲ್ಲಾಳಿ 10 ರಿಂದ 15 ಮಂದಿ ಸದಸ್ಯರ ಸಿಂಡಿಕೇಟ್ ರಚಿಸಿಕೊಂಡಿರುತ್ತಾನೆ. ಕಾಳಧನಿಕರಿಂದ ಕೋಟ್ಯಂತರ ರೂ. ಕಪ್ಪು ಹಣ ಪಡೆಯುವ ದಲ್ಲಾಳಿಗಳು ತಮ್ಮ ಸಿಂಡಿಕೇಟ್ ಸದಸ್ಯರಿಗೆ ಕೊಟ್ಟು ಅವರ ಮೂಲಕ ಬದಲಾಯಿಸಿಕೊಳ್ಳುತ್ತಾರೆ. ಒಂದು ವೇಳೆ ಆದಾಯ ತೆರಿಗೆ ಅಧಿಕಾರಿಗಳಿಗೆ ಸೆರೆಸಿಕ್ಕರೂ ಬ್ಲಾ್ಯಕ್​ವುನಿ ವಾರಸುದಾರ ಯಾರೆಂಬುದು ಬೆಳಕಿಗೆ ಬರುವುದಿಲ್ಲ.

7 ವರ್ಷ ಜೈಲು ಶಿಕ್ಷೆ

ಕಪ್ಪುಹಣ ಸಂಗ್ರಹಿಸಿರುವುದು ಬೆಳಕಿಗೆ ಬಂದರೆ ಪತ್ತೆಯಾದ ಮೊತ್ತದ ಶೇ.90 ದಂಡ ವಿಧಿಸಲಾಗುವುದು. ಜೊತೆಗೆ ಆರೋಪಿತರ ವಿರುದ್ಧ ಆದಾಯ ತೆರಿಗೆ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಲಾಗುತ್ತದೆ. ಕಾಯ್ದೆ ಅನ್ವಯ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

Leave a Reply

Your email address will not be published. Required fields are marked *

Back To Top