ಗಾಂಧೀಜಿಯನ್ನು ಪಾಕಿಸ್ತಾನದ ತಂದೆ ಎಂದ ಬಿಜೆಪಿ ಮುಖಂಡನಿಗೆ ಸಿಕ್ಕ ಉಡುಗೊರೆ ಏನು?

ನವದೆಹಲಿ: ಮಹಾತ್ಮ ಗಾಂಧೀಜಿಯನ್ನು ‘ಪಾಕಿಸ್ತಾನದ ತಂದೆ’ ಎಂದು ಕರೆದ ಮಧ್ಯಪ್ರದೇಶದ ಭಾರತೀಯ ಜನತಾ ಪಾರ್ಟಿಯಾ ವಕ್ತಾರ ಅನಿಲ್​ ಸೌಮಿತ್ರ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ.

ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿರುವ ಸೌಮಿತ್ರ ಅವರು ಮಹಾತ್ಮ ಗಾಂಧಿ ಪಾಕಿಸ್ತಾನದ ತಂದೆ, ಏಕೆಂದರೆ ಪಾಕಿಸ್ತಾನ ಮಹಾತ್ಮಗಾಂಧಿ ಅವರ ಆಶೀರ್ವಾದದಿಂದ ಜನಿಸಿದೆ. ಹೀಗಾಗಿ ಅವರನ್ನು ಪಾಕಿಸ್ತಾನದ ಜನಕ ಎಂದು ಕರೆಯಬಹುದಾಗಿದೆ ಎಂದು ವಿವಾದಾತ್ಮಕ ಪೋಸ್ಟ್​ ಮಾಡಿದ್ದರು.

ಮಧ್ಯಪ್ರದೇಶದ ಬಿಜೆಪಿ ಘಟಕದ ಮುಖ್ಯಸ್ಥ ರಾಕೇಶ್​ಸಿಂಗ್​ ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಆದೇಶಿಸಿದ್ದು, ಅನಿಲ್​ ಸೌಮಿತ್ರಗೆ ಏಳು ದಿನಗಳಲ್ಲಿ ಉತ್ತರಿಸುವಂತೆ ತಿಳಿಸಿದ್ದಾರೆ.

ಬಿಜೆಪಿಯ ಭೋಪಾಲ್ ಲೋಕಸಭಾ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಕೂಡ ಮಹಾತ್ಮಾ ಗಾಂಧಿಯವರ ಹತ್ಯೆಗೈದ ನಥೂರಾಮ್ ಗೋಡ್ಸೆ ಅವರನ್ನು ನಿಜವಾದ ದೇಶಭಕ್ತ ಎಂದು ಶ್ಲಾಘಿಸಿ ವಿವಾದಕ್ಕೀಡಾಗಿದ್ದಾರೆ.

ನಟ ಕಮಲ್​ ಹಸನ್​ ಅವರು ಇತ್ತೀಚೆಗೆ ಸ್ವತಂತ್ರ್ಯ ಭಾರತದ ಮೊದಲ ಭಯೋತ್ಪಾದಕ ನಾಥೂರಾಮ್​ ಗೂಡ್ಸೆ ಎಂದು ಹೇಳಿದ್ದರು. ಇದಕ್ಕೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರು ಅವರು ಪ್ರತಿಕ್ರಿಯಿಸಿದ್ದು ಇಡೀ ದೇಶದಾದ್ಯಂತ ವಿವಾದಕ್ಕೀಡುಮಾಡಿದೆ. (ಏಜೆನ್ಸೀಸ್​)