ಸಮರ್ಥ ನಾಯಕ ಮೋದಿ

ಯಾದಗಿರಿ: ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಪರ ಮಾಜಿ ಸಚಿವ ಡಾ.ಎ.ಬಿ. ಮಾಲಕರಡ್ಡಿ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.

ಡಾ.ವೀರಬಸವಂತರಡ್ಡಿ ಮಾತನಾಡಿ, ವಿಶ್ವದ ಬಲಾಢ್ಯ ರಾಷ್ಟ್ರಗಳು ಮೋದಿ ಅವರ ದಕ್ಷತೆ, ಪ್ರಬುದ್ಧ ಆಡಳಿತ ಮೆಚ್ಚಿ ಭಾರತದೆಡೆಗೆ ಸ್ನೇಹಹಸ್ತ ಚಾಚುತ್ತಿವೆ. ಇಂದು ದೇಶವನ್ನು ಹೊರಜಗತ್ತಿಗೆ ಪ್ರತಿನಿಧಿಸುವ ಸಮರ್ಥ ಪ್ರಧಾನಿ ಕೊಡಬೇಕೆಂದರೆ ಬಿಜೆಪಿಗೆ ಮತ ಹಾಕಬೇಕು ಎಂದರು.

ಡಾ.ಎ.ಬಿ. ಮಾಲಕರಡ್ಡಿ ಮಾತನಾಡಿ, ಉದಾತ್ತ ಚಿಂತನೆ ನಾಯಕ ದೇಶವನ್ನು ನಾಗಾಲೋಟದಿಂದ ಮುನ್ನಡೆಸುತ್ತಾನೆ. ಸಾಮಾನ್ಯ ಜನತೆಗೆ ಪ್ರಧಾನಿ ಮೋದಿ ಅವರ ಕೆಲಸ ಅರ್ಥ ಆಗುತ್ತಿಲ್ಲ. ಆದರೆ ಏನು ಕೆಲಸ ಮಾಡಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಅರ್ಥವಾಗಲಿದೆ. ಇಂಥ ವಿಶ್ವನಾಯಕನನ್ನು ಉಳಿಸಿಕೊಳ್ಳಲು ಕಮಲ ಪಕ್ಷಕ್ಕೆ ಮತ ನೀಡಬೇಕು ಎಂದು ಕೋರಿದರು.

ಪ್ರಮುಖರಾದ ದೇವೇಂದ್ರನಾಥ ನಾದ, ಚೆನ್ನಾರೆಡ್ಡಿ ಬಿಳ್ಹಾರ, ವೆಂಕಟರಡ್ಡಿ ಅಬ್ಬೆತುಮಕೂರು, ಲಲಿತಾ ಅನಪುರ, ಶಶಿಧರರೆಡ್ಡಿ ಹೊಸಳ್ಳಿ, ಹಣಮಂತ ಇಟಗಿ, ಡಾ.ಶರಣರೆಡ್ಡಿ ಕೋಡ್ಲಾ, ಸ್ವಾಮಿದೇವ ದಾಸನಕೇರಿ, ವಿಲಾಸ ಪಾಟೀಲ್, ಸುರೇಶ ಕೊಟಿಮನಿ, ಕಿಟ್ಟು ನಾಯಕ, ಅಂಬಯ್ಯ ಶಾಬಾದಿ, ಚಂದ್ರಕಾಂತ ಮಡ್ಡಿ, ಮಶೆಪ್ಪ, ವೀರುಪಾಕ್ಷಯ್ಯ ಮಠಪತಿ ಹೆಡಿಗಿಮದ್ರ, ಹಣಮಂತ ಮಡ್ಡಿ, ನಾರಾಯಣ ಚವ್ಹಾಣ್, ಸಿದ್ದುರೆಡ್ಡಿ ತಿಪ್ಪರೆಡ್ಡಿ, ರಮೇಶ ದೊಡ್ಮನಿ, ಜಿತೇಂದ್ರ ನವಗಿರೆ, ಮಲ್ಲಿಕಾಜರ್ುನ ಸ್ವಾಮಿ, ರಿಯಾಜ್ ಅಹ್ಮದ್ ಕಲ್ಲೂರ, ಫಯಾಜ್ ಖುರೇಷಿ, ಸರ್ವರ್ ಖಾನ್, ಶರಣಗೌಡ ಅಲ್ಲಿಪುರ, ಯಲ್ಲಾಲಿಂಗರೆಡ್ಡಿ ತಳಕ, ಸೂಗು ಮಾಲಿಪಾಟೀಲ್, ಕ್ರಿಷ್ಣಾರೆಡ್ಡಿ ಬಬಲಾದ, ಪ್ರಜ್ವಲ್ ಇತರರಿದ್ದರು.