More

  ಮನ್ಮುಲ್ ನಿರ್ದೇಶಕಿ ರೂಪಾ ವಿರುದ್ಧ ಷಡ್ಯಂತ್ರ ಆರೋಪ: ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

  ಮಂಡ್ಯ: ಮನ್‌ಮುಲ್ ನಿರ್ದೇಶಕಿ ರೂಪಾ ವಿರುದ್ಧ ಜಿಲ್ಲಾ ಸಹಕಾರ ಯೂನಿಯನ್ ಸಹಾಯಕ ಉಪ ನಿಬಂಧಕರ ಮೂಲಕ ಕಾಂಗ್ರೆಸ್ ನಾಯಕರು ಷಡ್ಯಂತ್ರ ರೂಪಿಸುತ್ತಿದ್ದಾರೆ. ಜತೆಗೆ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
  ಸಹಕಾರ ಒಕ್ಕೂಟದ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ಪ್ರತಿಭಟಿಸಿ, ಕಾಂಗ್ರೆಸ್ ನಾಯಕರು ಹಾಗೂ ಒಕ್ಕೂಟದ ಸಹಾಯಕ ಉಪ ನಿಬಂಧಕಿ ಎ.ಆರ್.ಅನಿತಾ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮನ್‌ಮುಲ್ ನಿರ್ದೇಶಕ ಸ್ಥಾನಕ್ಕೆ ಮದ್ದೂರು ತಾಲೂಕಿನಿಂದ ಬಿಜೆಪಿಯಿಂದ ಸ್ಪರ್ಧಿಸಿ ರೂಪಾ ಆಯ್ಕೆಯಾಗಿದ್ದಾರೆ. ಆದರೆ, ಸ್ಥಳೀಯ ಶಾಸಕರು ಹಾಗೂ ಸಚಿವರು ಷಡ್ಯಂತ್ರ ರೂಪಿಸಿ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
  ಕಾಂಗ್ರೆಸ್ ನಾಯಕರ ಮಾತಿನಂತೆ ಸಹಾಯಕ ಉಪನಿಬಂಧಕಿ ಎ.ಆರ್.ಅನಿತಾ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ನಿರ್ದೇಶಕಿ ರೂಪಾ ಅವರ ಪರ ವಕಾಲತ್ತು ಸ್ವೀಕಾರ ಮಾಡಿಲ್ಲ. ಬದಲಾಗಿ ರಾಜಕೀಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಇದ್ದರೂ ಸಹ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲು ಪಿತೂರಿ ನಡೆಸಲಾಗಿದೆ. ಆದ್ದರಿಂದ ನಿರ್ದೇಶಕ ಸ್ಥಾನದಿಂದ ರೂಪಾ ಅವರನ್ನು ವಜಾ ಮಾಡಬಾರದು. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಏಕ ಪಕ್ಷೀಯವಾಗಿ ವರ್ತಿಸುತ್ತಿರುವ ಉಪ ನಿಬಂಧಕಿ ಎ.ಆರ್.ಅನಿತಾ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
  ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಮನ್‌ಮುಲ್ ನಿರ್ದೇಶಕಿ ರೂಪಾ, ವಿವೇಕ್, ಶಿವಕುಮಾರ್ ಆರಾಧ್ಯ, ಹೊಸಹಳ್ಳಿ ಶಿವು, ಕೆಂಪಬೋರಯ್ಯ, ಸಿ.ಟಿ.ಮಂಜುನಾಥ್, ವಿದ್ಯಾನಾಗೇಂದ್ರ, ಮಮತಾ, ಶಿವಮ್ಮ, ಸರಸ್ವತಿ, ಜಯಮ್ಮ, ಜಯಶೀಲಾ ಇತರರಿದ್ದರು.

  See also  ಜಾತಿವಾರು ಪ್ರಾಧಿಕಾರವಾದರೆ ಬೊಕ್ಕಸಕ್ಕೆ ಹೊರೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts