More

    ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಒಪ್ಪಲಾಗದು; ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ

    ಬೆಂಗಳೂರು: ಅಡುಗೆ ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಒಪ್ಪಲಾಗದು. ಪಕ್ಷದ ಆಂತರಿಕ ಸಭೆಗಳಲ್ಲಿ ಮಹಿಳಾ ಮೋರ್ಚಾ ನಿಲುವು ಸ್ಪಷ್ಟಪಡಿಸಿ, ಜನರು ಅದರಲ್ಲೂ ಮಹಿಳೆಯರ ಅಭಿಪ್ರಾಯವನ್ನು ನಾಯಕರ ಗಮನಕ್ಕೆ ತಂದಿದ್ದೇವೆ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ ಹೇಳಿದ್ದಾರೆ.

    ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ವಾ ತೈಲ ಬೆಲೆ ಏರಿಕೆಯಿಂದಾಗಿ ಗ್ಯಾಸ್ ಸಿಲಿಂಡರ್ ದರ ಹೆಚ್ಚಳವಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

    ಇದನ್ನೂ ಓದಿ: ಪತ್ರಕರ್ತನ ಮೇಲೆ ದಾಳಿ ಪ್ರಕರಣ; ಇಬ್ಬರು ಹೈಬ್ರಿಡ್​ ಉಗ್ರರ ಬಂಧನ

    ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಚುನಾವಣೆ ಮೇಲೆ ಅಡ್ಡಪರಿಣಾಮ ಉಂಟಾಗದು. ಒಂದರಿಂದ ಉಂಟಾಗುವ ಪರಿಣಾಮದ ಉಳಿದ ಒಂಭತ್ತು ಯೋಜನೆಗಳಿಂದ ತಗ್ಗಿಸಲು ಸಾಧ್ಯವಿದೆ. ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಲಾಭ ಪಡೆದವರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಅಭಿಯಾನ

    ಕೇಂದ್ರ, ರಾಜ್ಯ ಯೋಜನೆಗಳ ಫಲಾನುಭವಿಗಳ ಜತೆಗೆ ಸೆಲ್ಫಿ ಅಭಿಯಾನ ಈ ತಿಂಗಳ ಪೂರ್ತಿ ರಾಜ್ಯದಲ್ಲಿ ನಡೆಯಲಿದೆ. ಫಲಾನುಭವಿಗಳ ಜತೆಗೆ ಫೋಟೋ ತೆಗೆಯಿಸಿಕೊಳ್ಳುವುದಕ್ಕೆ ಈ ಅಭಿಯಾನ ಸೀಮಿತವಲ್ಲ. ಅವರ ಹೆಸರು, ಲಾಭ ಪಡೆದ ಯೋಜನೆ ಹೆಸರು, ಮೊಬೈಲ್ ನಂಬರ್ ಸಹಿತ ನಮೋ ಆ್ಯಪ್ ಗೆ ಅಪ್ಲೋಡ್ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts