ಮೋದಿಗೆ ಮತ ನೀಡಿ ಪ್ರಬುದ್ಧತೆ ಮೆರೆದ ದೇಶದ ಜನ

ಔರಾದ್: ಬೀದರ್ ಮತ್ತು ದೇಶದಲ್ಲಿ ಬಿಜೆಪಿ ಜಯ ಸಾಧಿಸಿದಕ್ಕೆ ಶಾಸಕ ಪ್ರಭು ಚವ್ಹಾಣ್ ಸಾರಥ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಪ್ರಭು ಚವ್ಹಾಣ್, ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಬೆಂಬಲ ಸೂಚಿಸುವ ಮೂಲಕ ದೇಶದ ಜನರು ಪ್ರಬುದ್ಧತೆ ಮೆರೆದಿದ್ದಾರೆ. ಬಿಜೆಪಿಯ ಐತಿಹಾಸಿಕ ಗೆಲುವಿನಿಂದ ಭಾರತ ಸಧೃಡ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಮೋದಿ ಗೆಲುವು ಅಂದರೆ ಭಾರತದ ಗೆಲುವು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಂಡೆಪ್ಪ ಕಂಟೆ, ತಾಲೂಕು ಅಧ್ಯಕ್ಷ ಸತೀಶ ಪಾಟೀಲ್, ಮುಖಂಡರಾದ ಸಚಿನ್ ರಾಠೋಡ್, ಸುನೀಲಕುಮಾರ ದೇಶಮುಖ್, ಪ್ರಕಾಶ ಅಲ್ಮಾಜೆ, ಮಹಾದಪ್ಪ ಖೂಬಾ, ಪ್ರವೀಣ ಬುಟ್ಟೆ, ವಿಲಾಸ ಪಾಟೀಲ್ ಇತರರಿದ್ದರು.
ಕೊಳ್ಳೂರ್ನಲ್ಲಿ ವಿಜಯೋತ್ಸವ: ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ವಿಜಯೋತ್ಸವ ಆಚರಿಸಿದರು. ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರದ ಅದ್ದೂರಿ ಮೆರವಣಿಗೆ ಮಾಡಿದರು.
ಗ್ರಾಪಂ ಸದಸ್ಯ ಅಶೋಕ ಕೊಳ್ಳೂರ್, ಶಿವಕುಮಾರ್ ಮಾಲಿಪಾಟೀಲ್, ಕಾಶಿನಾಥ ಧಬಾಡೆ, ಸಿದ್ದಪ್ಪ ಶೆಂಬೆಳ್ಳೆ, ಖಂಡೇರಾವ ಪಾಟೀಲ್, ಈರಪ್ಪ ಒಡೆಯರ್, ನಾಗನಾಥ ನರುವಾ, ಶಿವಾಜಿ ಶೆಟ್ಟೆ, ಮಾರುತಿ ಶೆಟ್ಟೆ, ನರಸಪ್ಪ ಅತನೂರೆ ಇತರರಿದ್ದರು.

Leave a Reply

Your email address will not be published. Required fields are marked *