More

  ಜು.6ರ ವರೆಗೆ ‘ಏಕ್​ ಪೇಡ್​ ಮಾ ಕೆ ನಾಮ್​’ ಅಭಿಯಾನ

  ಕಿಶೋರಕುಮಾರ್​ ಮಾಹಿತಿ | ಪಕ್ಷದಿಂದ ಜಿಲ್ಲಾದ್ಯಂತ ಸರಣಿ ಕಾರ್ಯಕ್ರಮ

  ವಿಜಯವಾಣಿ ಸುದ್ದಿಜಾಲ ಉಡುಪಿ
  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಪ್ರಥಮ ಸಂಸತ್​ ಅಧಿವೇಶನ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಸರಣಿ ಕಾರ್ಯ ಚಟುವಟಿಕೆ ಆಯೋಜಿಸಲಾಗಿದೆ. ಪ್ರಮುಖವಾಗಿ ಡಾ. ಶ್ಯಾಮಾ ಪ್ರಸಾದ್​ ಮುಖರ್ಜಿ ಅವರ ಸಂಸ್ಮರಣೆ ನಿಮಿತ್ತ ಏಕ್​ ಪೇಡ್​ ಮಾ ಕೆ ನಾಮ್​ ಅಭಿಯಾನ ಆರಂಭಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್​ ಕುಂದಾಪುರ ಮಾಹಿತಿ ನೀಡಿದರು.

  ಉಡುಪಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೈಲ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಈಗಾಗಲೇ ಪ್ರತಿಭಟಿಸಿದ್ದೇವೆ. ಜಿಲ್ಲೆಯ ಎಲ್ಲ ಮಂಡಲಗಳಲ್ಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗಿದೆ ಎಂದರು.

  ತಾಯಿಯ ಹೆಸರಲ್ಲಿ ಗಿಡ

  ಜೂ.5ರ ವಿಶ್ವ ಪರಿಸರ ದಿನದಂದು ದೆಹಲಿಯಲ್ಲಿ ಬುದ್ಧ ಪಾರ್ಕ್​ನಲ್ಲಿ ಪ್ರಧಾನಿ ಮೋದಿ ಅವರು ಅಶ್ವತ್ಥ ಗಿಡ ನೆಟ್ಟು, ಏಕ್​ ಪೇಡ್​ ಮಾ ಕೆ ನಾಮ್​ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದರ ಮುಂದುವರಿದ ಭಾಗವಾಗಿ ಜೂ.23ರಂದು ಡಾ. ಶ್ಯಾಮಾ ಪ್ರಸಾದ್​ ಮುಖರ್ಜಿ ಅವರ ಸಂಸ್ಮರಣೆ ದಿನದಿಂದ ಜು.6ರ ಅವರ ಜನ್ಮದಿನದ ವರೆಗೆ ಜಿಲ್ಲೆಯ ಮಂಡಲ ಸಹಿತ ಎಲ್ಲ ಬೂತ್​ಗಳಲ್ಲಿ ತಾಯಿಯೊಂದಿಗೆ ತೆರಳಿ ಗಿಡ ನೆಡಲಾಗುವುದು. ತಾಯಿ ಇಲ್ಲದಿದ್ದವರು ತಾಯಿ ಭಾವಚಿತ್ರದೊಂದಿಗೆ ಗಿಡ ನೆಟ್ಟು ಅಬಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

  ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ದಿನಕರ್​ ಶೆಟ್ಟಿ ಹೆರ್ಗ, ರೇಶ್ಮಾ ಯು. ಶೆಟ್ಟಿ, ಶಿವಕುಮಾರ್​ ಅಂಬಲಪಾಡಿ, ನಿಧೀಶ್​ ಅಂಚನ್​, ಶಿವಕುಮಾರ್​ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ, ಜಯಕುಮಾರ್​ ಸಾಲಿಯಾನ್​ ಇದ್ದರು.

  See also  ಬಿಜೆಪಿಯ ಹಿರಿಯ ನಾಯಕ ಕೈಲಾಶ್​ ಸಾರಂಗ್​ ವಿಧಿವಶ: ಪ್ರಧಾನಿ ಮೋದಿ ಸಂತಾಪ

  ಜಿಲ್ಲಾಧಿಕಾರಿ ಕಚೇರಿಗೆ ನಾಳೆ ಮುತ್ತಿಗೆ

  ಸ್ವಚ್ಛ ಭಾರತ್​, ಆರೋಗ್ಯಕರ ಭಾರತಕ್ಕಾಗಿ ಜು.6ರ ವರೆಗೆ ‘ಪ್ಲಾಸ್ಟಿಕ್​ ಮುಕ್ತ ಜಿಲ್ಲೆ’ ಅಭಿಯಾನದಲ್ಲಿ ಕೆರೆ-ಬಾವಿ ಹಾಗೂ ಇತರ ಜಲಮೂಲಗಳ ಸ್ವಚ್ಛತಾ ಕಾರ್ಯ ನಡೆಯಲಿದೆ. 1975ರ ಜೂ.25ರಂದು ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಿಸಲಾಗುತ್ತಿದೆ. ತನ್ನಮಿತ್ತ ವಿಚಾರ ಸಂಕಿರಣ, “ವಿಸಾ ಕಾಯ್ದೆ’ಯಡಿ ಬಂಧಿತರಾದವರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ. ವಾಲ್ಮೀಕಿ ನಿಗಮದ 187 ಕೋಟಿ ರೂ. ದುರ್ಬಳಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡಿಸಿ ಜು.26ರಂದು ಜಿಲ್ಲಾ ಬಿಜೆಪಿ ಎಸ್​ಟಿ ಮೋರ್ಚಾದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುತ್ತಿದೆ ಎಂದು ಕಿಶೋರಕುಮಾರ್​ ಕುಂದಾಪುರ ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts