ಹಳಿಯಾಳ: ತಾಲೂಕಿನ 11 ಸೊಸೈಟಿಗಳ ಪೈಕಿ 9ರಿಂದ 10ರ ಸೊಸೈಟಿಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 11 ಸೊಸೈಟಿಗಳ ಪೈಕಿ ಈಗಾಗಲೇ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಅಭಿವೃದ್ಧಿ ಬ್ಯಾಂಕ್ (ಪಿಎಲ್ಡಿ) ಬ್ಯಾಂಕ್ನಲ್ಲಿ 13 ಜನ ಬಿಜೆಪಿ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು.
ವಿಪ ಮಾಜಿ ಸದಸ್ಯ ಎಸ್.ಎಲ್. ಘೊಟ್ನೇಕರ ಮಾತನಾಡಿ, ಈಗಾಗಲೇ ತಾಲೂಕಿನ ಸಹಕಾರಿ ಸಂಘಗಳ(ಸೊಸೈಟಿ) ಚುನಾವಣೆಗೆ ಕಾಂಗ್ರೆಸ ಪಕ್ಷದವರಿಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ಸನ್ಮಾನಿಸಲಾಯಿತು.
ಆಯ್ಕೆಯಾದವರು:
ಪಿಎಲ್ಡಿ ಬ್ಯಾಂಕ್ನ ಸಾಮಾನ್ಯ ವರ್ಗಕ್ಕೆ ಮೋಹನ ಗೌಡಾ, ಶಿವಾಜಿ ಪಾಟೀಲ, ಮೋಹನ ಬನೋಶಿ, ಪರಶುರಾಮ ರಾಠೋಳಿ, ನಾಮದೇವ ಮಿರಾಶಿ, ಈಶ್ವರ ವಾಟ್ಲೇಕರ, ವಿರುಪಾಕ್ಷ ಕುರುಬಗಟ್ಟಿ, ಎಸ್ಸಿ ವರ್ಗಕ್ಕೆ ಜಯಲಕ್ಷ್ಮೀ ಚವ್ಹಾಣ, ಎಸ್ಟಿ ವರ್ಗಕ್ಕೆ ಸುಶೀಲಾ ಅಮಲಾಮಚ್ಚೆ, ‘ಅ’ ವರ್ಗಕ್ಕೆ ಶೋಭಾ ಸಾಣಿಕೊಪ್ಪ, ಬೀಬಿಜಾನ ರಿಯಾಜ್ ಖಾಜಿ, ಸಾಮಾನ್ಯ ಮಹಿಳಾ ವರ್ಗಕ್ಕೆ ರೇಣುಕಾ ಸುಭಾಸ ಸಾವಂತ, ಸಾಲಗಾರರಲ್ಲದ ಸ್ಥಾನಕ್ಕೆ ಜ್ಞಾನೇಶ ಸುರೇಶ ಮಾನಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಳಿಯಾಳದ ಆರ್ಎಸ್ಎಸ್ ಸೊಸೈಟಿಯ ಸಾಲಗಾರರಲ್ಲದ ಕ್ಷೇತ್ರಕ್ಕೆ ಉದಯ ನಾರಾಯಣ ಜಾಧವ, ಮಂಗಳವಾಡ ಸೊಸೈಟಿಯ ಸಾಮಾನ್ಯ ವರ್ಗಕ್ಕೆ ಶಿವಾಜಿ ಶಿಂಧೆ, ನಾರಾಯಣ ಕುಟ್ರೆ, ಶಾಂತಾ ಸುತಾರ, ‘ಅ’ ವರ್ಗಕ್ಕೆ ರವಿ ಪತ್ತಾರ, ನಿಂಗಪ್ಪ ತಳವಾರ, ಕಾವಲವಾಡ ಸೊಸೈಟಿ ‘ಬ’ ವರ್ಗಕ್ಕೆ ದೇಮಣ್ಣ ಕೆಂಚಪ್ಪಗೌಡ, ‘ಸಾಮಾನ್ಯ ಮಹಿಳೆ’ ವರ್ಗಕ್ಕೆ ಮಂಗಳಾ ಬಾಳು ಶಿಂಧೆ, ಮದ್ನಳ್ಳಿ ಸೊಸೈಟಿಗೆ ಸಾಮಾನ್ಯ ವರ್ಗಕ್ಕೆ ಅರ್ಲವಾಡ ಗ್ರಾಮದ ಸೋಮು ಮಾವಳು ಢೇಪಿ ಹಾಗೂ ಬೆಳವಟಗಿ ಸೊಸೈಟಿಗೆ ಎಸ್ಸಿ ವರ್ಗಕ್ಕೆ ಪರಶುರಾಮ ಮೇತ್ರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಕ್ಷದ ಅಧ್ಯಕ್ಷ ವಿಠ್ಠಲ ಸಿದ್ದನ್ನವರ, ಶಿವಾಜಿ ನರಸಾನಿ, ಸಂತೋಷ ಘಟಕಾಂಬಳೆ, ತಾನಾಜಿ ಪಟ್ಟೇಕರ, ಶ್ರೀನಿವಾಸ ಘೊಟ್ನೇಕರ, ಪುರಸಭೆ ಸದಸ್ಯರಾದ ಉದಯ ಹೂಲಿ, ಚಂದ್ರಕಾಂತ ಕಮ್ಮಾರ, ಇತರರಿದ್ದರು.