More

    ಬಿಜೆಪಿಯವರ ತಂತ್ರಗಾರಿಕೆ ಫಲಿಸದು- ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ

    ಮಸ್ಕಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಗಲ್ಲಿ, ಗಲ್ಲಿ ಸುತ್ತುವ ಅವಶ್ಯ ಇರಲಿಲ್ಲ. ಬಿಜೆಪಿ ನಾಯಕರಿಗೆ ಸ್ವಂತ ಬಲವಿಲ್ಲದ್ದರಿಂದ ಮೋದಿ ಜಪದಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮೋದಿ ಸ್ಮರಣೆಯ ತಂತ್ರ ಫಲಿಸುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದರು.

    ಇದನ್ನೂ ಓದಿ: ಖರೀದಿಯಲ್ಲಿ ತಂತ್ರಗಾರಿಕೆ; ರಸಗೊಬ್ಬರ ಆಮದು ರಷ್ಯಾದಿಂದ ಅಧಿಕ

    ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಗಲ್ಲಿ-ಗಲ್ಲಿ ಸುತ್ತಿ ಮತಯಾಚನೆ

    ಬಿಜೆಪಿಯವರ ಪ್ರಣಾಳಿಕೆ ಕೋಮುವಾದದಿಂದ ಕೂಡಿದ್ದು, ಅವರ ಪ್ರಣಾಳಿಕೆಗೆ ಯಾವುದೇ ಮಹತ್ವವಿಲ್ಲ. ಬಿಜೆಪಿ ಮೋದಿ ಹೆಸರಲ್ಲಿ ಮತ ಕೇಳುತ್ತಿದೆ. ಆದರೆ, ಇಲ್ಲಿನ ಮತದಾರರು ಪ್ರಬುದ್ಧರಿದ್ದು, ತಂತ್ರಗಾರಿಕೆ ಫಲಿಸುವುದಿಲ್ಲ. ಇತಿಹಾಸದಲ್ಲಿ ದೇಶದ ಪ್ರಧಾನಿಯೊಬ್ಬರು ಗಲ್ಲಿ-ಗಲ್ಲಿ ಸುತ್ತಿ ಮತಯಾಚನೆ ಮಾಡುತ್ತಿದ್ದಾರೆಂದರೆ ಇದು ದೊಡ್ಡ ದುರಂತ ಎಂದರು.

    ಸಂವಿಧಾನ ವಿರೋಧಿ

    ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಲು ಆಯೋಗ ರಚಿಸಿದ್ದು ಕಾಂಗ್ರೆಸ್ ಸರ್ಕಾರ. ಒಳ ಮೀಸಲಾತಿ ಜಾರಿಗೆ ಮಾಡಬೇಕಾದರೆ ಷೆಡ್ಯೂಲ್ 9 ತಂದು ಅದರ ಪ್ರಕಾರ ಜಾರಿಗೆ ತರಬೇಕು. ಆದರೆ, ಬಿಜೆಪಿಯವರು ಮತ ಲಾಭಕ್ಕಾಗಿ ತಮಗೆ ತಿಳಿದಂತೆ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಮಾಡಿದರಷ್ಟೇ ಅಲ್ಪಸಂಖ್ಯಾತರ ಮೀಸಲಾತಿ ತೆಗೆಯಬಹುದು. ಆದರೆ, ಇವರು ಸಂವಿಧಾನ ವಿರೋಧಿಯಾಗಿ ಮಾಡಿದ್ದಾರೆ ಎಂದು ಹೇಳಿದರು.

    ಕರ್ನಾಟಕಕ್ಕೆ ಮಲತಾಯಿ ಧೋರಣೆ

    ಬಿಜೆಪಿಗೆ ಮತ ನೀಡದಿದ್ದರೆ ಕೇಂದ್ರದ ಅನುದಾನ ನಿಲ್ಲುತ್ತದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ದಾ ಹೇಳಿಕೆ ಕೊಟ್ಟಿದ್ದಾರೆ. ಇದು ಸಂವಿಧಾನ ವಿರೋಧಿ ಹೇಳಿಕೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿದೆ. ಕರ್ನಾಟಕದಲ್ಲಿ ಉತ್ತಮ ಆಡಳಿತಕ್ಕಾಗಿ ಕಾಂಗ್ರೆಸ್‌ಗೆ ಮತ ಕೊಡಿ. ಆರ್.ಬಸನಗೌಡ ತುರ್ವಿಹಾಳಗೆ ಅಲ್ಪಾವಧಿ ಅಧಿಕಾರ ಕೊಟ್ಟಿದ್ದೀರಿ. ಈಗ ಪೂರ್ಣ ಅಧಿಕಾರ ಕೊಡುವಂತೆ ಮನವಿ ಮಾಡಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಪ್ರಮುಖರಾದ ಹನುಮಂತಪ್ಪ ಮುದ್ದಾಪುರ, ವೆಂಕಟರಡ್ಡಿಗೌಡ ಹಾಲಾಪೂರು, ಮಲ್ಲಯ್ಯಬಳ್ಳಾ, ಹನುಮಂತಪ್ಪ ವೆಂಕಟಾಪುರ, ಫಾರೂಕ್ ಸಾಬ್, ಕೃಷ್ಣಾ ಚಿಗರಿ, ಹುಲಗಪ್ಪ ಉಪ್ಪದೊಡ್ಡಿ, ಮಲ್ಲಯ್ಯ ಮುರಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts