ಕರೊನಾ ಸೋಂಕು: ಬಿಜೆಪಿ ವಕ್ತಾರ ಸಂಬಿತ್​ ಪಾತ್ರಾ ಆಸ್ಪತ್ರೆಗೆ

ನವದೆಹಲಿ: ಕರೊನಾ ವೈರಸ್​ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ ಎಂದು ವರದಿಗಳು ಹೇಳಿವೆ. ಬಿಜೆಪಿಯಲ್ಲಿ ಪ್ರಮುಖ ನಾಯಕರಾಗಿರುವ ಸಂಬಿತ್ ಪಾತ್ರಾ, ಪಕ್ಷದ ಪ್ರಚಾರ ಕಾರ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದಾರೆ. 46 ವರ್ಷದ ಪಾತ್ರಾ ಅವರು, ವೃತ್ತಿಯಲ್ಲಿ ವೈದ್ಯರು. ಜತೆಗೆ, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್ (ಒಎನ್‌ಜಿಸಿ) ಮಂಡಳಿಯ ನಾನ್​ ಆಫೀಷಿಯಲ್​ ರ್ದೇಶಕರು ಕೂಡ. … Continue reading ಕರೊನಾ ಸೋಂಕು: ಬಿಜೆಪಿ ವಕ್ತಾರ ಸಂಬಿತ್​ ಪಾತ್ರಾ ಆಸ್ಪತ್ರೆಗೆ