ದರ ಏರಿಕೆ ಖಂಡಿಸಿ ಪ್ರತಿಭಟನೆ

ರಬಕವಿ/ಬನಹಟ್ಟಿ: ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಸಿರá-ವ ಕ್ರಮ ಖಂಡಿಸಿ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಜಿಲ್ಲಾಧ್ಯಕ್ಷ, ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಅವಳಿನಗರದಲ್ಲಿ ಭಾನá-ವಾರ ಸಂಜೆ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಎತ್ತಿನ ಗಾಡಿಯಲ್ಲಿ ದ್ವಿಚಕ್ರವಾಹನ ಹೇರಿಕೊಂಡು ಸ್ವತಃ ಶಾಸಕರು ಗಾಡಿಯಲ್ಲಿ ಕುಳಿತು ಸಂಚರಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಎಂ.ಎಂ. ಬಂಗ್ಲೆ ಮುಂದೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾಸಕ ಸಿದ್ದು, ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಹೊರೆಯಾಗ ಬಾರದೆಂದು ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಕಡಿಮೆ ಮಾಡಿದೆ. ಆದರೆ, ಸ್ಮಮಿ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ 2 ರೂ. ತೆರಿಗೆ ಹೆಚ್ಚಿಸಿರುವುದು ಜನರಿಗೆ ಹೊರೆಯಾಗಿದೆ. ಸಾಲಮನ್ನಾ ನೆಪದಲ್ಲಿ ಸಾರ್ವಜನಿಕರ ಮೇಲೆ ಇಲ್ಲಸಲ್ಲದ ತೆರಿಗೆ ಹಾಕá-ತ್ತಿದ್ದು, ಸಾಲಮನ್ನಾನೂ ಮಾಡಿಲ್ಲ. ರೈತರು ಆತ್ಮಹತ್ಯೆಗೆ ಶರಣಾ ಗುತ್ತಿದ್ದಾರೆ ಎಂದು ಆರೋಪಿಸಿದರು.

ಸಚಿವ ಪುಟ್ಟರಂಗಶೆಟ್ಟಿ ಅವರ ಪಿಎ ವಿಧಾನ ಸೌಧದಿಂದ 25.75 ಲಕ್ಷ ರೂ. ಸಾಗಿಸುತ್ತಿರುವಾಗ ಸಿಕ್ಕಿಹಾಕಿಕೊಂಡಿದ್ದು, ರಾಜ್ಯ ಸರ್ಕಾರದಲ್ಲಿ ಯಾವ ಪ್ರಮಾಣದಲ್ಲಿ ಭ್ರಷ್ಟಾಚಾರ ತಾಂಡವವಾಡá-ತ್ತಿದೆ ಎಂಬá-ದನ್ನು ಎತ್ತಿ ತೋರಿಸುತ್ತದೆ. ಸಂಬಂಧಿಸಿದ ಮಂತ್ರಿಯಿಂದ ರಾಜೀನಾಮೆ ಪಡೆಯಬೇಕು. ಇಂತಹ ಭ್ರಷ್ಟ ಸರ್ಕಾರ ತೊಲಗಬೇಕು. ತೈಲ ಮೇಲಿನ ತೆರಿಗೆ ಹೆಚ್ಚಳ ಕೈಬಿಡಬೇಕು ಎಂದು ಆಗ್ರಹಿಸಿದರು.

ನಗರ ಬಿಜೆಪಿ ಘಟಕದ ಅಧ್ಯಕ್ಷ ರಾಜು ಅಂಬಲಿ, ಕುಮಾರ ಕದಂ, ಗೋವಿಂದ ಡಾಗಾ, ಮಹಾವೀರ ಬಿಲವಡಿ, ಸುರೇಶ ಚಿಂಡಕ, ಈಶ್ವರ ಪಾಟೀಲ, ಮಲಕಪ್ಪ ಪಾಟೀಲ, ಧರೆಪ್ಪ ಉಳ್ಳಾಗಡ್ಡಿ, ಪ್ರಭಾಕರ ಮೊಳೇದ, ಮಲ್ಲಿಕಾರ್ಜುನ ಬಾಣಕಾರ, ಬಸವರಾಜ ತೆಗ್ಗಿ, ಸುರೇಶ ಅಕ್ಕಿವಾಟ, ಇಸಾಕ್ ಸವದಿ, ಸದಾಶಿವ ಫರೀಟ್, ದುರ್ಗವ್ವ ಹರಿಜನ, ವಿಜಯ ಕಲಾಲ, ವಿಶ್ವನಾಥ ಸವದಿ, ಅಶೋಕ ರಾವಳ, ಪಿ. ಜಿ. ಕಾಖಂಡಕಿ, ಭೀಮಶಿ ಪೂಜಾರಿ, ನಾಮದೇವ ಆಲಗೂರ ಇತರರಿದ್ದರು.