ನವದೆಹಲಿ: ಕರ್ನಾಟಕದಲ್ಲಿ ಬಾಕಿವುಳಿದಿದ್ದ 3 ಕ್ಷೇತ್ರಗಳು ಸೇರಿ ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳ ಒಟ್ಟು 11 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಒಳಗೊಂಡ 12ನೇ ಪಟ್ಟಿಯನ್ನು ಬಿಜೆಪಿ ಶುಕ್ರವಾರ ಬಿಡುಗಡೆ ಮಾಡಿದೆ.
ರಾಯಚೂರು (ಎಸ್ಟಿ) ಕ್ಷೇತ್ರಕ್ಕೆ ರಾಜಾ ಅಮರೇಶ್ ನಾಯಕ್, ಕೊಪ್ಪಳ ಕ್ಷೇತ್ರಕ್ಕೆ ಸಂಗಣ್ಣ ಕರಡಿ ಮತ್ತು ಚಿಕ್ಕೋಡಿ ಕ್ಷೇತ್ರಕ್ಕೆ ಅಣ್ಣಾ ಸಾಹೇಬ್ ಜೊಲ್ಲೆ ಅವರ ಹೆಸರು ಅಂತಿಮಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಲಡಾಖ್ನಲ್ಲಿ ಜಾಮ್ಯಾಂಗ್ ತ್ಸೇರಿಂಗ್ ನಂಗ್ಯಾಲ್ ಸ್ಪರ್ಧಿಸಲಿದ್ದಾರೆ. (ಏಜೆನ್ಸೀಸ್)