ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರ ಆಕ್ರೋಶ

BJP Raitha Morcha, Muddebihal, Chamarajanagar, Segani, Rangoli, Cow, MLA, Soap and Detergent Corporation President C.S. Nadagowda,

ಬಿಜೆಪಿ ರೈತ ಮೋರ್ಚಾ, ಮುದ್ದೇಬಿಹಾಳ, ಚಾಮರಾಜನಗರ, ಸೆಗಣಿ, ರಂಗೋಲಿ, ಹಸು, ಶಾಸಕ, ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ, BJP Raitha Morcha, Muddebihal, Chamarajanagar, Segani, Rangoli, Cow, MLA, Soap and Detergent Corporation President C.S. Nadagowda,

ಮುದ್ದೇಬಿಹಾಳ: ಬೆಂಗಳೂರಿನ ಚಾಮರಾಜನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಇಲ್ಲಿನ ಶಾಸಕರ ನಿವಾಸಕ್ಕೆ ತೆರಳಿ, ಮನೆಯ ಗೇಟ್ ಮುಂದೆ ಸೆಗಣಿ ಸಾರಿಸಿ ರಂಗೋಲಿ ಹಾಕಲು ಮುಂದಾಗಿದ್ದ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಮಂಗಳವಾರ ಬಂಧಿಸಿದರು.

ಹಸಿರು ಶಾಲು ಹೊದ್ದು 15ಕ್ಕೂ ಹೆಚ್ಚು ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಶಾಸಕ, ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡರ ಹುಡ್ಕೋದಲ್ಲಿರುವ ನಿವಾಸದತ್ತ ನಡೆದಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ತಡೆದು ಬಲವಂತವಾಗಿ ಹಿಂದಕ್ಕೆ ತಳ್ಳತೊಡಗಿದಾಗ ನುಸುಳಿಕೊಂಡು ಹೋದ 2-3 ಕಾರ್ಯಕರ್ತರು ಶಾಸಕರ ಮನೆ ಗೇಟ್ ಮುಂಭಾಗ ಸೆಗಣಿ ಹಾಕಿ ಸಾರಿಸಲು ಮುಂದಾದರು. ಪೊಲೀಸರು ತಡೆಯಲು ಬಂದಾಗ ಓರ್ವ ಕಾರ್ಯಕರ್ತ ಕಾಂಪೌಂಡ್ ಗೇಟ್ ಗೋಡೆಗೆ ಸೆಗಣಿ ಒರೆಸಿದರು. ಈ ವೇಳೆ ಪೊಲೀಸರು, ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ವಿಷಯ ತಿಳಿದು ಶಾಸಕರು ಮನೆಯಿಂದ ಹೊರಗಡೆ ಬಂದು ಈ ಕ್ರಮ ರಾಜಕೀಯ ಪ್ರೇರಿತ. ಕಾನೂನು ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದರು. ತಕ್ಷಣವೇ ಪೊಲೀಸರು ಸ್ಥಳದಿಂದ ನಿರ್ಗಮಿಸುತ್ತಿದ್ದ ಕೆಲ ಕಾರ್ಯಕರ್ತರನ್ನು ಬಂಧಿಸಿ ಠಾಣೆಗೆ ಕರೆತಂದದ್ದು ವಿವಾದ ಭುಗಿಲೇಳಲು ಕಾರಣವಾಯಿತು.

ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ಠಾಣೆಗೆ ಬಂದು ತಮ್ಮ ಕಾರ್ಯಕರ್ತರ ಅಕ್ರಮ ಬಂಧನ ಆಕ್ಷೇಪಿಸಿ ಯಾವ ಕಾಯ್ದೆ, ಕಲಂ ಅಡಿ ಅವರನ್ನು ಬಂಧಿಸಿದ್ದೀರಿ ಕಾರಣ ಕೊಡಿ ಎಂದು ಪ್ರಶ್ನಿಸಿದರು. ಇದಕ್ಕೆ ಸಿಪಿಐ, ಪಿಎಸ್‌ಐ ಸ್ಪಂದಿಸಲಿಲ್ಲ. ಕೋಪಗೊಂಡ ನಡಹಳ್ಳಿ ಅವರು ಠಾಣೆ ಆವರಣದಲ್ಲೇ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಧರಣಿ ಪ್ರಾರಂಭಿಸಿದರು. ವಿಷಯ ತಿಳಿದು ಪಕ್ಷದ ಮುಖಂಡರು, ಕಾರ್ಯಕರ್ತರು ಠಾಣೆಯಲ್ಲಿ ಜಮಾಯಿಸತೊಡಗಿದರು. ಜನರು ಹೆಚ್ಚಾದಂತೆ ಧರಣಿಯ ಕಾವು ಹೆಚ್ಚಾಯಿತು. ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ್ ತಿಪ್ಪರಡ್ಡಿ ನಡಹಳ್ಳಿ ಅವರ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕಾರ್ಯಕರ್ತರನ್ನು ಬಿಡುಗಡೆ ಮಾಡದ ಹೊರತು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.

ಇದೇ ವೇಳೆ ಕಾಂಗ್ರೆಸ್ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಠಾಣೆ ಆವರಣದಲ್ಲಿ ಜಮಾಯಿಸತೊಡಗಿದರು. ಕೆಲವರು ನಡಹಳ್ಳಿ ಅವರ ವಿರುದ್ಧ ಧಿಕ್ಕಾರವನ್ನೂ ಕೂಗಿದರು. ಶಾಸಕರ ಆಪ್ತ ಸಹಾಯಕ ನಾಗರಾಜ ತಂಗಡಗಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎ್ಐಆರ್ ಪ್ರಕ್ರಿಯೆ ಪ್ರಾರಂಭಿಸಿದ್ದು ಧರಣಿ ನಿರತರನ್ನು ಇನ್ನಷ್ಟು ಕೆರಳಿಸಿತು.
ಇವರನ್ನು ನೋಡಿ ಅವರು, ಅವರನ್ನು ನೋಡಿ ಇವರು ತಮ್ಮ ಬೆಂಬಲಿಗರನ್ನು, ಕಾರ್ಯಕರ್ತರನ್ನು ಕರೆಸತೊಡಗಿದಾಗ ಪರಿಸ್ಥಿತಿ ಕೈಮೀರುವುದನ್ನರಿತ ಪೊಲೀಸರು ಕಾಂಗ್ರೆಸ್‌ನವರನ್ನು ಠಾಣೆ ಆವರಣದಿಂದ ಹೊರಗೆ ಕಳಿಸಿ ಪರಿಸ್ಥಿತಿ ತಿಳಿಗೊಳಿಸಿದರು. 3 ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರೂ ಪೊಲೀಸರು ಬಂಧಿಸಿರುವ ಕಾರ್ಯಕರ್ತರ ಮೇಲೆ ಯಾವ ಕಲಂ ಅನ್ವಯ ಕೇಸ್ ಹಾಕಿದ್ದಾರೆ ಎನ್ನುವುದನ್ನು ತಿಳಿಸದೆ ಇರುವುದು ನಡಹಳ್ಳಿ ಅವರು ಕೆರಳುವಂತೆ ಮಾಡಿತು.

ಬಿಜೆಪಿ ಮುಖಂಡರಾದ ಎಂ.ಎಸ್.ಪಾಟೀಲ, ಮುನ್ನಾಧಣಿ ನಾಡಗೌಡ, ಮಲಕೇಂದ್ರಗೌಡ ಪಾಟೀಲ, ಕೆಂಚಪ್ಪ ಬಿರಾದಾರ, ಸೋಮನಗೌಡ ಬಿರಾದಾರ, ಮುತ್ತುಸಾಹುಕಾರ ಅಂಗಡಿ, ಲಕ್ಷ್ಮಣ ಬಿಜ್ಜೂರ, ಅಶೋಕ ರಾಠೋಡ, ಬಸಪ್ಪ ತಟ್ಟಿ, ವಿಜಯಕುಮಾರ ಬಡಿಗೇರ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ ಬಲದಿನ್ನಿ ಇತರರು ಧರಣಿಯಲ್ಲಿದ್ದರು. ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ ಅವರು ಧರಣಿ ಸ್ಥಳಕ್ಕೆ ಬಂದು ಧರಣಿ ಕೈಬಿಟ್ಟು ಪೊಲೀಸರಿಗೆ ಸಹಕರಿಸಿ ಎಂದು ಕೋರಿದರು. ಬಂಧಿಸಿರುವ ಕಾರ್ಯಕರ್ತರನ್ನು ಬಿಡುವವರೆಗೂ ಧರಣಿ ಬಿಡುವುದಿಲ್ಲ ಎಂದು ನಡಹಳ್ಳಿ ಅವರು ಸ್ಪಷ್ಟಪಡಿಸಿದರು.

ಸೆಗಣಿ ಘಟನೆ ಪ್ರಾರಂಭಗೊಂಡದ್ದು ಬೆಳಗ್ಗೆ 11-30ಕ್ಕೆ ಅರ್ಧ ಗಂಟೆಯಲ್ಲೇ ಮುಕ್ತಾಯವಾದರೂ ಪೊಲೀಸರು ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಯುವ ಮೋರ್ಚಾ ಅಧ್ಯಕ್ಷ ಗಿರೀಶಗೌಡ ಪಾಟೀಲ ಹಿರೇಮುರಾಳ, ನಾಗೇಶ ಕವಡಿಮಟ್ಟಿ, ಸಂಜು ಬಾಗೇವಾಡಿ ಅವರನ್ನು ಬಂಧಿಸಿ ಠಾಣೆಗೆ ತಂದರೂ ಸಂಜೆ 5 ಗಂಟೆಯವರೆಗೂ ಎ್ಐಆರ್ ದಾಖಲಿಸುವ ಪ್ರಕ್ರಿಯೆ ಮುಗಿದಿರಲಿಲ್ಲ. ಇದೇ ವೇಳೆ ತಾಳಿಕೋಟೆ ಠಾಣೆ, ಜಿಲ್ಲಾ ಕೇಂದ್ರದಿಂದ ಡಿಆರ್ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಘಟನೆಗೆ ಮತ್ತಷ್ಟು ತಿರುವು ಕೊಟ್ಟಂತಾಯಿತು. ಬಂಧಿತರನ್ನು ಸಂಜೆ ಪೊಲೀಸ್ ಬಂದೋಬಸ್ತ್‌ನಲ್ಲಿ ಬೇರೆಡೆ ಕರೆದೊಯ್ಯಲಾಯಿತು.

Share This Article

ಕುತ್ತಿಗೆ-ತಲೆ ನೋವನ್ನು ನಿರ್ಲಕ್ಷಿಸುತ್ತಿದ್ದೀರಾ?; ಎಚ್ಚರದಿಂದಿರಿ.. ಇದು ಅಪಾಯದ ಮುನ್ಸೂಚನೆ | Health Tips

ಕುತ್ತಿಗೆ ಮತ್ತು ಭುಜದ ಸುತ್ತಲಿನ ಪ್ರದೇಶದಲ್ಲಿನ ನೋವನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ಸರ್ವಿಕಲ್…

ಅಳದಿದ್ದರು ಕಣ್ಣೀರು ಬರುತ್ತಿದೆಯೇ; ತಜ್ಞರು ಸೂಚಿಸಿರುವ ಸಿಂಪಲ್ ಪರಿಹಾರ ಹೀಗಿದೆ.. Health Tips

ಸೌಂದರ್ಯವನ್ನು ಅಳೆಯಲು ಕಣ್ಣುಗಳು ಒಂದು ಪ್ರಮುಖ ಮಾನದಂಡವಾಗಿದೆ. ಇದು ಪ್ರಮುಖ ಇಂದ್ರಿಯಗಳಲ್ಲಿ ಒಂದಾಗಿದೆ. ಅದಿಲ್ಲದೆ ಜೀವನವನ್ನು…

ಮ್ಯಾರೇಜ್​ಗೆ ಸರಿಯಾದ ವಯಸ್ಸೇಷ್ಟು ಗೊತ್ತೆ?; ತಡವಾಗಿ ಮದುವೆಯಾಗುವುದರಿಂದ ಅನುಕೂಲ, ಅನಾನೂಕುಲಗಳೇನು? | Marriage

marriage: ಕೆಲ ದಶಕಗಳ ಹಿಂದೆ ಬಾಲ್ಯ ವಿವಾಹ ನಡೆಯುವುದು ಸಾಮಾನ್ಯವಾಗಿತ್ತು. ಬಳಿಕ ಕಾನೂನು ಕಣ್ತಪ್ಪಿಸಿ ಕದ್ದು…