ಹುಬ್ಬಳ್ಳಿ : ಅಂಗನವಾಡಿ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ವಿತರಿಸಬೇಕಾದ ಪೌಷ್ಟಿಕ ಆಹಾರಗಳನ್ನು ಅಕ್ರಮವಾಗಿ ಕಳ್ಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿ, ಕಾಂಗ್ರೆಸ್ ನಾಯಕಿಯನ್ನು ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದ ದುರ್ಗದಬೈಲ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಅಂಗನವಾಡಿ ಪೌಷ್ಠಿಕ ಆಹಾರವನ್ನು ಅಕ್ರಮವಾಗಿ ಮಾರಾಟ ಮಾಡಲು ಕಾಂಗ್ರೆಸ್ನ ಕೆಲವು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಿಜೆಪಿ ಹು-ಧಾ ಪೂರ್ವ ಕ್ಷೇತ್ರದ ಅಧ್ಯಕ್ಷ ಮಂಜುನಾಥ ಕಾಟ್ಕರ, ಪ್ರಭು ನವಲಗುಂದಮಠ, ಅರುಣ ಹುದ್ಲಿ, ಜಗದೀಶ ಬಳ್ಳಾನವರ, ರಾಜು ಜರತಾರಘರ, ಪ್ರತಿಭಾ ಪವಾರ, ಸುವರ್ಣ ಜಂಗಮಗೌಡ್ರು, ಲಕ್ಷೀ ಕಾಂತ ಘೋಡಕೆ, ಅಣ್ಣಪ್ಪ ಗೋಕಾಕ, ಜಗದೀಶ ಕಂಬಳಿ, ರಾಜು ಕೊರ್ಯುಣಮಠ, ಗೋಪಾಲ ಕಲ್ಲೂರ, ಭಾರತಿ ಎಲ್ಕಾನ, ವಿನಾಯಕ ಲದವಾ, ಮಾರುತಿ ಚಾಕಲಬ್ಬಿ, ಬಶೀರ್ ಗಿರಣಿ, ಪರಿಮಳ ಕೊಠಾರಿ, ಪದ್ಮಾ ದೇಸಾಯಿ, ಸರೋಜಾ ಶಾಂತಗಿರಿ ಹಾಗೂ ಇತರರು ಪಾಲ್ಗೊಂಡಿದ್ದರು.