ನರೇಗಲ್ಲ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಾಹನ ಸಂಚಾರ ತಡೆದು ಶನಿವಾರ ಪ್ರತಿಭಟನೆ ನಡೆಸಿದರು.
ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದ ಜನರ ಆಶೋತ್ತರ ಈಡೇರಿಸುವಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಬಡವರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ. ನಿತ್ಯದ ವಸ್ತುಗಳ ಬೆಲೆ ಹೆಚ್ಚಳ, ಬಿತ್ತನೆ ಬೀಜದ ಬೆಲೆ ಏರಿಕೆ ಮಾಡಿ ಈಗ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಮಾಡಿ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದರು.
ಬಿಜೆಪಿ ಮುಖಂಡ ಬಸವರಾಜ ಕೊಟಗಿ ಮಾತನಾಡಿ, ಭಾಗ್ಯಗಳ ಆಸೆ ತೋರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಜನತೆಗೆ ಅನ್ಯಾಯ ಮಾಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಕ್ಕೆ ಸಂಬಂಧಿಸಿದ ಪ್ರೋತ್ಸಾಹಧನ ಸ್ವಾರ್ಥಕ್ಕೆ ಬಳಸಿಕೊಂಡಿದೆ ಎಂದರು.
ಪಪಂ ಮಾಜಿ ಸದಸ್ಯ ಶಶಿಧರ ಸಂಕನಗೌಡ್ರ ಮಾತನಾಡಿದರು. ಬಿ.ಕೆ. ಪೊಲೀಸ್‌ಪಾಟೀಲ, ಶಿವನಾಗಪ್ಪ ದೊಡ್ಡಮೇಟಿ, ಆರ್.ಜಿ. ಪಾಟೀಲ, ಶ್ರೀಶೈಲಪ್ಪ ಬಂಡಿಹಾಳ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಕುಮಾರಸ್ವಾಮಿ ಕೋರಧಾನ್ಯಮಠ, ಯಲ್ಲಪ್ಪ ಮಣ್ಣೊಡ್ಡರ, ಪ್ರಕಾಶ ಹತ್ತಿಕಟಗಿ, ಆನಂದ ಕುಲಕರ್ಣಿ, ಮಹೇಶ ಶಿವಶಿಂಪರ, ಮುತ್ತಣ್ಣ ಪಲ್ಲೆದ, ಪ್ರಕಾಶ ಪಾಯಪ್ಪಗೌಡ್ರ, ರಾಜಶೇಖಗೌಡ ಪಾಟೀಲ, ಈರಪ್ಪ ಈಟಿ, ಗಣೇಶ ದಿಂಡೂರ, ಶಿವು ಮುಳಗುಂದ, ಮಂಜುನಾಥ ಕಮಲಾಪುರ, ಹಸನ್ ಕಲೇಗಾರ, ಈರಣ್ಣ ಗುಜಮಾಗಡಿ, ಮಂಜುನಾಥ ಹಡಪದ, ಇದ್ದರು.