ಕಾರವಾರ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿಜೆಪಿ ಪ್ರತಿಭಟನೆ (BJP Protest) ನಡೆಸಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರ ಜಮೀನುಗಳನ್ನುವಕ್ಫ್ ಮಂಡಳಿ ಹೆಸರಿಗೆ ವರ್ಗಾಯಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿದೆ. ಕಾಂಗ್ರೆಸ್ ಸರ್ಕಾರ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ನಾಯಕರು ರೈತರ ಬೆಂಬಲಕ್ಕೆ ನಾವಿದ್ದೇವೆ ಎಂದು ಸಂದೇಶ ಸಾರಿದರು.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಕ್ಷದ ಪ್ರಮುಖರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, `ಕಾಂಗ್ರೆಸ್ ಸರ್ಕಾರವನ್ನು ಕುತಂತ್ರಿ, ದೇಶ ದ್ರೋಹಿ, ಭ್ರಷ್ಟ ಎಂದು ಜರಿದರು. ಸರ್ಕಾರ ಜನರ ಆಸ್ತಿಗಳನ್ನು ವಕ್ಪಗೆ ನೀಡುತ್ತಿದೆ. ಜನ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಅನ್ನ ಬೆಳೆಯುವ ಜಮೀನು ಇಲ್ಲವಾಗಲಿದೆ ಎಂದು ಎಚ್ಚರಿಸಿದರು.ಮುಡಾ ಹಗರಣದಲ್ಲಿ ಮೆಂದು ಘಟ್ಟಿಯಾಗಿರುವ ಸಿದ್ದರಾಮಯ್ಯ ಅವರು ಈಗ ವೋಟ್ ಬ್ಯಾಂಕ್‌ಗಾಗಿ ವಕ್ಫ್ ಅಸ್ತ್ರ ಹಿಡಿದಿದ್ದಾರೆ.ರೈತರು ರಾಜ್ಯದ ಜನರಿಗೆ ಅನ್ನ ನೀಡುವವರು, ನೀವು ಅವರ ಜಮೀನನ್ನು ಕಸಿದುಕೊಂಡರೆ ಅವರ ಶಾಪ ನಿಮಗೆ ತಾಗುತ್ತದೆ ಎಂದು ಎಚ್ಚರಿಸಿದರು. ಈ ಎಲ್ಲ ಅವಾಂತರಕ್ಕೆ ಕಾರಣವಾಗಿರುವ ಸಚಿವ ಜಮೀರ್ ಅಹಮದ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: BJP Protest – https://www.facebook.com/share/p/xqWx9TJ3yfh5qtAX/
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ಬಿಜೆಪಿ ರೈತರ ಪರವಾಗಿದೆ. ಸರ್ಕಾರ ಕೇವಲ ನೋಟಿಸ್ ಹಿಂಪಡೆದರೆ ಸಾಲದು. ಆರ್‌ಟಿಸಿಯಲ್ಲಿ ದಾಖಲಾಗಿರುವ ವಕ್ಪ ಹೆಸರನ್ನು ಕಿತ್ತು ಹಾಕಬೇಕು ಎಂದು ಒತ್ತಾಯಿಸಿದರು. ನಗರ ಘಟಕದ ಅಧ್ಯಕ್ಷ ನಾಗೇಶ ಕುರ್ಡೇಕರ್, ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ ಇತರರು ಇದ್ದರು.
ಹಿಂದು ವಿರೋಧಿ ಧೋರಣೆ ‘ಕೈ’ಬಿಡಲಿhttps://www.vijayavani.net/let-the-anti-hindu-attitude-give-up