Tuesday, 11th December 2018  

Vijayavani

Breaking News

ಸಿಎಂ ಹೇಳಿಕೆಗೆ ಬಿಜೆಪಿ ಉಗ್ರ ಹೋರಾಟ

Saturday, 13.01.2018, 3:02 AM       No Comments

ಬೆಂಗಳೂರು: ಬಿಜೆಪಿ ಮತ್ತು ಆರ್​ಎಸ್​ಎಸ್​ನವರು ಉಗ್ರಗಾಮಿಗಳು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಶುಕ್ರವಾರ ರಾಜ್ಯಾದ್ಯಂತ ಬಿಜೆಪಿ ಬೀದಿಗಿಳಿದು ಪ್ರತಿಭಟಿಸಿದ್ದು, ಜೈಲ್ ಭರೋ ಹೋರಾಟ ನಡೆಸಿದ್ದಾರೆ. 18 ಜಿಲ್ಲೆಯಲ್ಲಿ 4970 ಕಾರ್ಯಕರ್ತರು ಭಾಗವಹಿಸಿದ್ದು, ಅವರಲ್ಲಿ 1650 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು. ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಮುತ್ತಿಗೆ ಹಾಕಲು ಯತ್ನಿಸಿದ ನೂರಾರು ಬಿಜೆಪಿ ಕಾರ್ಯಕರ್ತರನ್ನು ಶುಕ್ರವಾರ ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.

19 ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನು ಉಗ್ರಗಾಮಿ ಎನ್ನುವ ಸಿಎಂ ಸಿದ್ದರಾಮಯ್ಯ ಮಾತು ಅವಿವೇಕ ಹಾಗೂ ತಿಳಿಗೇಡಿತನದ್ದು. ಬಿಜೆಪಿ, ಆರೆಸ್ಸೆಸ್​ನವರು ಉಗ್ರಗಾಮಿಗಳು ಎಂದಾದರೆ, ಇದೇ ಮೂಲದಿಂದ ಆಗಮಿಸಿರುವ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಸೇರಿ ಇನ್ನಿತರ ಸಾಂವಿಧಾನಿಕ ಹುದ್ದೆಗಳಲ್ಲಿರುವವರ ಜತೆ ಸಿದ್ದರಾಮಯ್ಯ ಹೇಗೆ ವ್ಯವಹರಿಸುತ್ತಾರೆ? ಹೇಳಿಕೆ ವಿರುದ್ಧ ಜನಾಂದೋಲನ ಹಾಗೂ ನ್ಯಾಯಾಲಯ ಹೋರಾಟ ನಡೆಯಲಿದೆ. ಬಹಿರಂಗವಾಗಿ ಸಿದ್ದರಾಮಯ್ಯ ಕ್ಷಮೆ ಯಾಚಿಸಬೇಕು.

| ಅನಂತಕುಮಾರ್ ಕೇಂದ್ರ ಸಚಿವ

 

ಬಿಜೆಪಿಯವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಲ್ಲ, ಜೈಲುವಾಸ ಅನುಭವಿಸಿದವರಲ್ಲ. ಈಗಾಲಾದರೂ ನೋಡೋಣ ಎಂದು ಜೈಲಿಗೆ ಹೋಗುತ್ತಿದ್ದಾರೆ.

| ರಾಮಲಿಂಗಾರೆಡ್ಡಿ ಗೃಹಸಚಿವ

 

ಪೆಟ್ರೋಲ್ ಸುರಿದುಕೊಂಡ

ಗದಗ ನಗರದಲ್ಲಿ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತ ಅರವಿಂದ ಹುಲ್ಲೂರ ಎಂಬಾತ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ. ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ತಡೆದರು. ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ವಣವಾಗಿತ್ತು.

 

ಬೆಂಗಳೂರಲ್ಲಿ ಇಂದು

ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಶನಿವಾರ ರಾಜಧಾನಿಯಲ್ಲಿ ಬಿಜೆಪಿ ಜೈಲ್ ಭರೋ ಪ್ರತಿಭಟನೆ ನಡೆಸಲಿದೆ. ಸಿಎಂ ಬಹಿರಂಗವಾಗಿ ಕ್ಷಮೆ ಕೇಳುವವರೆಗೆ ಪ್ರತಿಭಟನೆ ಮುಂದುವರಿಯಲಿದ್ದು, ಸ್ವಯಂ ಬಂಧಿತರಾಗುತ್ತೇವೆ ಎಂದು ಬಿಜೆಪಿ ತಿಳಿಸಿದೆ.

Leave a Reply

Your email address will not be published. Required fields are marked *

Back To Top