ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಅಮಿತ್​ ಷಾ ಆಸ್ಪತ್ರೆಯಿಂದ ಡಿಸ್ಚಾರ್ಜ್

ದೆಹಲಿ:  ಹಂದಿ ಜ್ವರದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ದೆಹಲಿಯ ಏಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರು ಭಾನುವಾರ ಬೆಳಗ್ಗೆ ಬಿಡುಗಡೆಯಾಗಿದ್ದಾರೆ.

ಹಂದಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಜ.16ರಂದು ಆಸ್ಪತ್ರೆಗೆ ದಾಖಲಾಗಿದ್ದರು. ತಮಗೆ ಅನಾರೋಗ್ಯ ಉಂಟಾಗಿರುವುದನ್ನು ಸ್ವತಃ ಅಮಿತ್​ ಷಾ ಅವರೇ ಟ್ವೀಟ್​ ಮಾಡಿ ತಿಳಿಸಿದ್ದರು.
“ದೇವರು ಹಾಗೂ ಜನರ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖನಾಗುವ ವಿಶ್ವಾಸವಿದೆ,” ಎಂದು ಅವರು ಟ್ವೀಟ್ ಮಾಡಿದ್ದರು.

ಆಸ್ಪತ್ರೆಯಿಂದ ಬಿಡುಗಡೆಯಾದ ಕುರಿತು ಇಂದು ಟ್ವೀಟ್​ ಮಾಡಿರುವ ಬಿಜೆಪಿ ಸಂಸದ ಅನಿಲ್​ ಬಲುನಿ, “ಅಮಿತ್​ ಷಾ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಏಮ್ಸ್​ನಿಂದ ಇಂದು ಅವರು ಬಿಡುಗಡೆಯಾಗಿದ್ದು, ನಿವಾಸಕ್ಕೆ ತೆರಳಿದ್ದಾರೆ. ಇದರಿಂದ ನಮಗೆಲ್ಲರಿಗೂ ಬಹಳ ಸಂತೋಷವಾಗಿದೆ,” ಎಂದು ಬರೆದುಕೊಂಡಿದ್ದಾರೆ.

ಇಂದು ಪಶ್ಚಿಮಬಂಗಾಳದಲ್ಲಿ ನಡೆಯಬೇಕಿದ್ದ ಬಿಜೆಪಿಯ ಸರಣಿ ಸಾರ್ವಜನಿಕ ಸಭೆಯನ್ನು ಅಮಿತ್​ ಷಾ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂದಕ್ಕೆ ಹಾಕಲಾಗಿದೆ. ಈ ಸಭೆಗಳನ್ನು ಷಾ ಅವರೇ ಉದ್ಘಾಟಿಸಬೇಕಿತ್ತು.

One Reply to “ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಅಮಿತ್​ ಷಾ ಆಸ್ಪತ್ರೆಯಿಂದ ಡಿಸ್ಚಾರ್ಜ್”

Comments are closed.