ಮೂಡಿಗೆರೆ: ವಕ್ಫ್ ಮಂಡಳಿ ಮತ್ತು ರೈತರ ಜಮೀನು ವಿಚಾರವಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದು, ಬಿಜೆಪಿ ಸರ್ಕಾರದಲ್ಲೂ ಉತ್ತರ ಕರ್ನಾಟಕ ಭಾಗದ ರೈತರಿಗೆ ನೋಟಿಸ್ ನೀಡಿದ್ದನ್ನು ಬಿಜೆಪಿ ನಾಯಕರು ಮರೆತುಬಿಟ್ಟಿದ್ದಾರೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆರೋಪಿಸಿದರು.
ಹಿಂದಿನ ಕಾಲದಲ್ಲಿ ದೇವದಾನ ಪದ್ದತಿ ಪ್ರಕಾರ ದೇವಸ್ಥಾನಕ್ಕೆ, ಬ್ರಹ್ಮದಾನ ಪದ್ದತಿ ಪ್ರಕಾರ ಬ್ರಾಹ್ಮಣರಿಗೆ ಜಮೀನು ದಾನ ನೀಡುತ್ತಿದ್ದರು. ಆಂಧ್ರಪ್ರದೇಶದ ನಿಜಾಮಾಬಾದ್ ಜಿಲ್ಲೆಯ ಬಡರಾಮಚಂದ್ರ ದೇವಸ್ಥಾನದ 400 ಎಕರೆ ಜಾಗದ ಬಗ್ಗೆ ವಿವಾದ ಬುಗಿಲೆದ್ದಿದ್ದೆ. ಮಂತ್ರಾಲಯ ಮಠದ 200 ಎಕರೆ ಜಮೀನಿನಲ್ಲಿ ಬೆಳೆ ಕಟಾವಿಗೆ ಬಿಡದೆ ಅಲ್ಲಿನ ಸರ್ಕಾರ ಎಲ್ಲವನ್ನು ಖುಲ್ಲಾಗೊಳಿಸಿದೆ. ಅದರ ವ್ಯಾಜ್ಯ ಈಗ ನ್ಯಾಯಾಲಯದಲ್ಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಂಧ್ರದ ವಿವಿಧ ದೇವಸ್ಥಾನಕ್ಕೆ ಸೇರಿದ 4.50 ಲಕ್ಷ ಎಕರೆ ಭೂಮಿ ಪೈಕಿ 87 ಸಾವಿರ ಎಕರೆ ಒತ್ತುವರಿಯಾಗಿದೆ. ಅ ಎಲ್ಲ ಜಮೀನನ್ನು ಖುಲ್ಲಾಗೊಳಿಸುವುದಾಗಿ ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತಿಳಿಸಿದ್ದಾರೆ. ಜಮೀನು ಖುಲ್ಲಾಗೊಳಿಸಿದಲ್ಲಿ 2 ಲಕ್ಷ ರೈತರು ಬೀದಿ ಪಾಲಾಗಲಿದ್ದಾರೆ. ಒಡಿಸಾ ರಾಜ್ಯದ 13 ದೇವಸ್ಥಾನಕ್ಕೆ ಸೇರಿದ 4 ಸಾವಿರ ಎಕರೆ ಭೂಮಿ ರೈತರಿಗೆ ಸೇರಿದೆ ಎಂಬ ವಿವಾದವಿದೆ. ಅದನ್ನು ಖುಲ್ಲಾಗೊಳಿಸಲು ಅಲ್ಲಿನ ಸರ್ಕಾರ ತಯಾರಿ ನಡೆಸಿದೆ. ಈ ಎಲ್ಲ ವಿವಾದದ ಬಗ್ಗೆ ತುಟಿ ಬಿಚ್ಚದ ಬಿಜೆಪಿ ನಾಯಕರು ಕರ್ನಾಟಕದಲ್ಲಿ ರಾಜಕೀಯ ಉದ್ದೇಶಕ್ಕಾಗಿ ವಕ್ಫ್ ಜಮೀನಿನ ಬಗ್ಗೆ ವಿವಾದ ಸೃಷ್ಟಿಸಿದ್ದಾರೆ ಎಂದು ದೂರಿದರು.
ವಕ್ಫ್ ಮಂಡಳಿ 1927ರಲ್ಲಿ, ಮುಜರಾಯಿ ಇಲಾಖೆ 1934ರಲ್ಲಿ ರಚನೆಯಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಮುಸ್ಲಿಮರು ತಮ್ಮ ಜಮೀನನ್ನು ವಕ್ಫ್ ಮಂಡಳಿಗೆ ದಾನ ನೀಡಿದ್ದಾರೆ. ವಕ್ಫ್ ಆಸ್ತಿಗೆ ಹಿಂದಿನ ಕಾಲದಲ್ಲಿಯೇ ಖಾತೆಯಾಗಿದೆ. ಈಗಿನ ಕಾಂಗ್ರೆಸ್ ಸರ್ಕಾರಕ್ಕೂ ವಕ್ಫ್ ಮತ್ತು ರೈತರ ಜಮೀನು ವಿವಾದಕ್ಕೂ ಸಂಬಂಧವಿಲ್ಲ. ಹಿಂದು ರೈತರ ಜಮೀನನ್ನು ಮುಸ್ಲಿಮರು ಕಬಳಿಸಿಲ್ಲ ಎಂದು ತಿಳಿಸಿದರು.
ವಕ್ಫ್ ಬೋರ್ಡ್ ಹೆಸರಿನಲ್ಲಿ ಬಿಜೆಪಿ ರಾಜಕೀಯ
Spirituality: ಇರುವೆಗಳಿಗೆ ಆಹಾರ ನೀಡಿದರೆ ಶನಿದೇವನ ಪ್ರಭಾವ ಇರುವುದಿಲ್ಲವೇ?
Spirituality: ನಮ್ಮಲ್ಲಿರುವ ವಸ್ತು ಅಥವಾ ಯಾವುದೇ ಪದಾರ್ಥವನ್ನು ಇಲ್ಲದವರಿಗೆ ದಾನ ಮಾಡಿದರೆ ದೇವರ ಅನುಗ್ರಹ ಸದಾ…
2025ರಲ್ಲಿ ಸಾಲದ ಸುಳಿಗೆ ಸಿಲುಕಲಿದ್ದಾರಂತೆ ಈ 3 ರಾಶಿಯವರು!? ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರ | Money
Money : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…
30 ನೇ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆಯೇ? White Hair ಆಗಿದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ
White Hair : ಇಂದಿನ ಕಾಲದಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಇನ್ನು ಕೆಲವರು…