ಸಂಸದೆ ಶೋಭಾ ಕರಂದ್ಲಾಜೆ ಬ್ಯಾಂಕ್​ ಖಾತೆಯಿಂದ 20 ಲಕ್ಷ ರೂ. ಎಗರಿಸಿದ ಹ್ಯಾಕರ್​ಗಳು

ದೆಹಲಿ: ವೃತ್ತಿಪರ ಹ್ಯಾಕರ್​ಗಳು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಅಕೌಂಟ್​ ಹ್ಯಾಕ್ ಮಾಡಿ 20 ಲಕ್ಷ ರೂ. ಕಳವು ಮಾಡಿರುವ ಘಟನೆ 4 ದಿನಗಳ ಹಿಂದೆ ನಡೆದಿದ್ದು, ಮಂಗಳವಾರ ತಡವಾಗಿ ಬೆಳಕಿಗೆ ಬಂದಿದೆ.

ದೆಹಲಿ ಪಾರ್ಲಿಮೆಂಟ್​ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 20 ಲಕ್ಷ ರೂ. ಕಳವು ಮಾಡಿದ್ದಾರೆ. ಸಂಸದೆ ಶೋಭಾ ಅವರು ಮೊಬೈಲ್​​ನಿಂದ ತಮ್ಮ ನೆಟ್​ ಬ್ಯಾಂಕಿಂಗ್​ ಖಾತೆಯನ್ನು ನಿರ್ವಹಿಸುವಾಗ ಹ್ಯಾಕ್​ ಮಾಡಿ ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಸಂಸದೆ ಶೋಭಾ ಅವರು ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *