ಬಿಜೆಪಿಗೆ ರಿವರ್ಸ್​ ಆಪರೇಷನ್​ ಭೀತಿ: ಮಧ್ಯಾಹ್ನ 3 ಗಂಟೆಗೆ ನಾಲ್ಕು ತಂಡಗಳಲ್ಲಿ ರೆಸಾರ್ಟ್​ಗೆ ತೆರಳಲು ಸಿದ್ಧತೆ?

ಬೆಂಗಳೂರು: ಸಿಎಂ ಎಚ್​.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲು ತಾವು ಸಿದ್ಧ ಎಂದು ವಿಧಾನಸಭೆ ಕಲಾಪದಲ್ಲಿ ಸ್ವಪ್ರೇರಿತ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಾಳೆಯದಲ್ಲಿ ರಿವರ್ಸ್​ ಆಪರೇಷನ್​ ಭೀತಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಶಾಸಕರನ್ನು ರಿವರ್ಸ್​ ಆಪರೇಷನ್​ನಿಂದ ಕಾಪಾಡಿಕೊಳ್ಳಲು ರೆಸಾರ್ಟ್​ಗೆ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಒಂದು ಮೂಲದ ಪ್ರಕಾರ ಗುರುವಾರ ಮಧ್ಯಾಹ್ನ 3 ಗಂಟೆಗೆ ನಾಲ್ಕು ತಂಡಗಳಲ್ಲಿ ಶಾಸಕರನ್ನು ರೆಸಾರ್ಟ್​ಗೆ ರವಾನಿಸಲಾಗುತ್ತಿದೆ ಎನ್ನಲಾಗಿದೆ.

ನಾಲ್ವರು ಶಾಸಕರಿಗೆ ಬುದ್ಧಿವಾದ
ಕನಕಗಿರಿ ಕ್ಷೇತ್ರದ ಬಸವರಾಜ ದಡಸುಗೂರ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್​, ಹೊಸದುರ್ಗದ ಗೂಳಿಹಟ್ಟಿ ಶೇಖರ್​ ಮತ್ತು ಮೈಸೂರು ಜಿಲ್ಲೆಯ ಶಾಸಕರೊಬ್ಬರು ರಿವರ್ಸ್​ ಆಪರೇಷನ್​ಗೆ ಒಳಗಾಗಬಹುದು ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆ ನಾಲ್ವರನ್ನು ಕರೆಯಿಸಿಕೊಂಡು ಪಕ್ಷದ ಮುಖಂಡರು ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *