More

  ರಾಜ್ಯವನ್ನೇ ಹರಾಜು ಹಾಕುವ ಕಾಲ ದೂರವಿಲ್ಲ

  ತುಮಕೂರು: ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯ ಬೊಕ್ಕಸವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿರುವ ರಾಜ್ಯ ಕಾಂಗ್ರೆಸ್​ ಸರ್ಕಾರ ಇದೀಗ ಬೆಂಗಳೂರು ಸುತ್ತಮುತ್ತಲಿನ ಅಮೂಲ್ಯ ಸರ್ಕಾರಿ ಜಾಗವನ್ನು ಪರಭಾರೆ ಮಾಡಲು ಹೊರಟಿದೆ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳ ಹುಸಿ ಭರವಸೆಯಲ್ಲಿ ಅಧಿಕಾರಕ್ಕೆ ಬದಾಗ ಸಂಭ್ರವಿಸಿದ್ದಕ್ಕೆ ಮಿತಿಯೇ ಇರಲಿಲ್ಲ. ಬುದ್ಧೀಜಿವಿಗಳು ಕೂಡ ಸಿದ್ದರಾಮ್ಯನವರದೇ ಒಂದು ಅರ್ಥಶಾಸ್ತ್ರ ಎಂದು ಕೊಂಡಾಡಿದ್ದರು. ಅಳಿಯನ ಕುರುಡು ಬೆಳಗಾದ ಮೇಲೆ ಎನ್ನುವಂತೆ ಸರ್ಕಾರ ಇನ್ನೂ ಒಂದು ವರ್ಷ ಪೂರೈಸುತ್ತಇದ್ದಂತೆಯೇ ಅದರ ಆರ್ಥಿಕ ಸ್ಥಿತಿಯ ಅಸಲಿಯತ್ತು ಬಟಾ ಬಯಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

  ಎಐಸಿಸಿ ನಾಯಕ ರಾಹುಲ್​ ಗಾಂಧಿ ಎಲ್ಲರ ಖಾತೆಗಳಿಗೆ 8,500 ರೂಪಾಯಿ ಜಮಾ ಮಾಡಿ ಬಡತನವನ್ನು ಟಕಾಟಕ್​ ಎಂದು ನಿವಾರಿಸುವುದಾಗಿ ಹೇಳಿದ್ದರು. ಅವರದೂ ಸಿದ್ದರಾಮಯ್ಯನವರ ಹಾಗೆಯೇ ಮನೆಹಾಳು ಅರ್ಥಶಾಸ್ತ್ರ. ಯಾರ ಖಾತೆಗಾದರೂ ದುಡ್ಡು ಹಾಕಿದರೆ ಅವರ ಬಡತನ ನಿವಾರಣೆಯಾಗುತ್ತದೆಯೇ? ಕಾಂಗ್ರೆಸ್​ನವರ ತಲೆಯಲ್ಲಿ ಬುದ್ಧಿಯಲ್ಲ. ಮೆದುಳೇ ಇಲ್ಲ ಎಂದು ನಾವು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಜನರಿಗೆ ಮಂಕುಬೂದಿ ಎರಚುವಂತವರು ಎಂದು ಪ್ರಕಟಣೆಯಲ್ಲಿ ಹರಿಹಾಯ್ದಿದಿದ್ದಾರೆ.

  ಬಿಜೆಪಿಯನ್ನು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವುದನ್ನೇ ದಂಧೆ ಮಾಡಿಕೊಂಡಿರುವ ಕಾಂಗ್ರೆಸ್ಸಿಗರು ತಲೆಮಾರುಗಳಿಂದ ಉಳಿಸಿಕೊಂಡು ಬಂದಿರುವ ಭೂವಿಯ ಮೇಲೆ ಈಗ ತಮ್ಮ ಕಾಕದೃಷ್ಟಿಯನ್ನು ಬೀರಿದ್ದಾರೆ. ಹಿರಿಯರು ಮಾಡಿದ ಆಸ್ತಿಯನ್ನು ಮಾರಿ ಯಾರೂ ಸುಖಾದ ಸಂಸಾರ ಮಾಡಲು ಸಾಧ್ಯವಿಲ್ಲ. ಅದು ಮತ್ತಷ್ಟು ಸಾಲದ ದವಡೆಗೆ ನೂಕುತ್ತದೆ. ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು. ಸರ್ಕಾರಿ ಭೂಮಿ ಪರಭಾರೆ ಮಾಡುವಂತಹ ಹೊಣಗೇಡಿ ನಿರ್ಧಾರಗಳನ್ನು ಕೈಬಿಡಬೇಕು.
  ಬಿ.ಸುರೇಶಗೌಡ
  ಗ್ರಾಮಾಂತರ ಶಾಸಕ

  See also  ಪ್ರೇಕ್ಷಕರ ಮನಗೆದ್ದ ಸ್ವಸ್ಥ ವಿಶೇಷ ಚೇತನ ಮಕ್ಕಳ ಕಲಾಪ್ರದರ್ಶನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts