‘ಹರತಾಳು ಹಾಲಪ್ಪ ಥರ್ಡ್​​ ಕ್ಲಾಸ್​ ಎಂಎಲ್​​ಎ’ ಎಂದು ಕಿಡಿಕಾರಿದ ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ: ‘ಹರತಾಳು ಹಾಲಪ್ಪ ಥರ್ಡ್​​ ಕ್ಲಾಸ್​ ಎಂಎಲ್​​ಎ’. ದುಡ್ಡು ಸಿಕ್ಕಿಲ್ಲವೆಂದು ಮರಳು ಮಾರಾಟ ನಿಲ್ಲಿಸಿದ್ದಾರೆ. ರಾಜಕೀಯ ಪ್ರೇರಿತವಾಗಿ ಮರಳು ಕ್ವಾರಿ ರದ್ದು ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ನಾಯಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ.

ಹೊಸನಗರದಲ್ಲಿ ಮಾತನಾಡಿದ ಅವರು, ಸಾಗರ ಶಾಸಕ ಹರತಾಳು ಹಾಲಪ್ಪ ದುಡ್ಡು ಸಿಕ್ಕಿಲ್ಲ ಎಂದು ರಾಜಕೀಯ ಪ್ರೇರಿತವಾಗಿ ಮರಳು ಕ್ವಾರಿ ರದ್ದು ಮಾಡಲು ಹೊರಟಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಇದೆ. ಮಂಗನ ಕಾಯಲೆಯಿಂದ ಜನ ಸಾಯುತ್ತಿದ್ದಾರೆ. ಅದನ್ನು ಬಿಟ್ಟು ಇಲ್ಲಿ ದುಡ್ಡು ಮಾಡಲು ಬಂದಿದ್ದಾರೆ. ಥರ್ಡ್ ಕ್ಲಾಸ್ ಎಂಎಲ್ ಎ ಹರತಾಳು ಹಾಲಪ್ಪ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಾಗರ ಕ್ಷೇತ್ರಕ್ಕೆ ಮಂಗನ ಕಾಯಿಲೆ ತಂದಿದ್ದು ಇದೇ ಶಾಸಕ. ಮರಳು ನಿಲ್ಲಿಸಿ. ಜನಸಾಮಾನ್ಯರಿಗೆ ತೊಂದರೆಯಾಗುವಂತೆ ಮಾಡಿದ್ದಾರೆ. ಅವರ ಕಡೆಯವರಿಗೆ ತಿಂಗಳಿಗೆ ನೂರು ಲೋಡ್ ಮರಳು ಬೇಕಂತೆ. ಎಲ್ಲಿಂದ ಬರುತ್ತೆ ನೂರು ಲೋಡ್? ಮೇ 23ರ ನಂತರ ಸಿಎಂ ಬಳಿ ಹೋಗಿ ಪ್ರತಿಭಟನೆ ಮಾಡುತ್ತೇವೆ ಎಂದರು.

ಬೇಳೂರು ಬಚ್ಚಾ ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇವತ್ತು ಮೋದಿಯವರು ಬೇಳೂರ್ ಬಗ್ಗೆ ಮಾತನಾಡುತ್ತಾರೆ ಎಂದರೆ ನಾನು ಬಚ್ಚಾ ಅಲ್ಲ. ಶೋಭಾ ಕರಂದ್ಲಾಜೆ ಬಚ್ಚೀ. ಮಾಟ ಮಂತ್ರ ಮಾಡಿಸುತ್ತಾರೆ ಅಷ್ಟೇ. ಯಾರೇ ನಾಯಕರಾದರೂ ಅವರ ವಿರುದ್ಧ ಮಾಟ ಮಂತ್ರ ಮಾಡಿದುವುದಷ್ಟೇ ಶೋಭಾ ಕರಂದ್ಲಾಜೆ ಅವರ ಕೆಲಸ. ಅಮಾವಾಸ್ಯೆ ಬಂದರೆ ಸಾಕು ಯಡಿಯೂರಪ್ಪ ಜತೆಗೆ ಮಂಗಳೂರು ಕಡೆ ಹೋಗಿ ಮಾಟ ಮಾಡಿಸುತ್ತಾರೆ ಎಂದು ಟೀಕಿಸಿದರು.

ಮರಳಿಗಾಗಿ ಹೊಸನಗರದಲ್ಲಿ ಪ್ರತಿಭಟನೆ

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲೆಯ ಬಿಜೆಪಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಜನರಿಗೆ, ರೈತರಿಗೆ ಮರಳು ಸಿಗದಂತೆ ಶಾಸಕರು ತೊಂದರೆ ಮಾಡಿದ್ದಾರೆಂದು ಆರೋಪಿಸಿದರು. ಹೊಸನಗರ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *