ಗೋಕಾಕ: ಗೋಕಾಕ ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲಿ ಕನಿಷ್ಠ 300ಕ್ಕೂ ಅಧಿಕ ಬಿಜೆಪಿಗೆ ಸದಸ್ಯತ್ವ ಮಾಡಿಸಲು ಕಾರ್ಯಕರ್ತರು ಶ್ರಮಿಸುವಂತೆ ಬಿಜೆಪಿ ಗೋಕಾಕ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು.
ನಗರದ ಎಂಜೆ ಗಾರ್ಡನ್ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಚಾರ ಸಾಮಗ್ರಿ ಬಿಡುಗಡೆ ಕಾರ್ಯಕ್ರಮಲ್ಲಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸುವ ಮೂಲಕ ಹೊಸ ಸದಸ್ಯರನ್ನು ಮಾಡಲು ಕಾರ್ಯಪ್ರವತ್ತರಾಗಬೇಕು. ಮೋದಿಜಿ ಜನ್ಮದಿನದಂದೇ ಸಂಕಲ್ಪ ಮಾಡುವ ಮೂಲಕ ಗೋಕಾಕ ಕ್ಷೇತ್ರದಲ್ಲಿ ಹೆಚ್ಚಿನ ಸದಸ್ಯರನ್ನು ದಾಖಲಿಸುವ ಮೂಲಕ ಶಾಸಕ ರಮೇಶ ಜಾರಕಿಹೊಳಿ ಅವರ ಕೈಬಲಪಡಿಸೋಣ ಎಂದರು.
ಶಾಸಕರ ಆಪ್ತ ಸಹಾಯಕ ಭೀಮಗೌಡ ಪೊಲೀಸಗೌಡರ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಕೊಣ್ಣೂರ ಪುರಸಭೆ ಅಧ್ಯಕ್ಷ ವಿನೋದ ಕರನಿಂಗ, ಬಿಜೆಪಿ ಮುಖಂಡರಾದ ಸುರೇಶ ಸನದಿ, ಮಲ್ಲಿಕಾರ್ಜುನ ಕೊಲಿನವರ, ಪುಂಡಲೀಕ ವಣ್ಣೂರ, ಪರಶುರಾಮ ಗೋಡಿ, ಜಯಾನಂದ ಹುಣಚ್ಯಾಳಿ, ಬಾಳೇಶ ಗಿಡ್ಡನವರ ಇದ್ದರು.