ಮಾನಸಿಕ ಸ್ಥಿಮಿತ ಕಳೆದುಕೊಂಡ ಖೂಬಾ

ವಿಜಯವಾಣಿ ಸುದ್ದಿಜಾಲ ಬೀದರ್
ಸೋಲಿನ ಭೀತಿಯಿಂದಾಗಿ ಸಂಸದ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾನಸಿಕ ಸ್ಥಿಮಿತ ಕಳೆದುಕೊಂಡು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಖೂಬಾ ಅವರ ಸುಳ್ಳಿನ ಮಾತು, ಅಸಂಬದ್ಧ ಆರೋಪಗಳಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಹೇಳಿದರು. ರ್ಥಿ

ದಿನ ಬೆಳಗಾದರೆ ನನ್ನ ಮತ್ತು ನನ್ನ ಪರಿವಾರದ ವಿರುದ್ಧ ಖೂಬಾ ತಲೆಬುಡವಿಲ್ಲದ ಆರೋಪ ಮಾಡುತ್ತಿದ್ದಾರೆ. ಬೀದರ್ ಅಭಿವೃದ್ಧಿಗೆ ಖಂಡ್ರೆ ಪರಿವಾರದ ಕೊಡುಗೆ ಏನೆಂದು ಪ್ರಶ್ನಿಸುತ್ತಿದ್ದಾರೆ. ಸ್ವಾತಂತ್ರೃ ಚಳವಳಿ, ಹೈಕ ವಿಮೋಚನೆ ಆಂದೋಲನ ಹಿಡಿದು ಈವರೆಗೆ ಜಿಲ್ಲೆಯ ವಿಕಾಸಕ್ಕೆ ಖಂಡ್ರೆ ಪರಿವಾರ ಭದ್ರ ಬುನಾದಿ ಹಾಕಿದ್ದು ಐತಿಹಾಸಿಕ ದಾಖಲೆ. ಖಂಡ್ರೆ ಪರಿವಾರ ವಿರುದ್ಧ ಮಾತನಾಡುವ ನೈತಿಕತೆ ಸಹ ಖೂಬಾ ಅವರಿಗಿಲ್ಲ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತೀಕ್ಷ್ಣ ತಿರುಗೇಟು ನೀಡಿದರು.

ಭೀಮಣ್ಣ ಖಂಡ್ರೆ ಅವರಿಂದ ಆರಂಭವಾಗಿರುವ ಪ್ರಗತಿ ಪರ್ವ ಇನ್ನೂ ಮುಂದುವರಿದಿದೆ. ಜಿಲ್ಲೆಯ ಸಾಮಾಜಿಕ, ಶೈಕ್ಷಣಿಕ, ಧಾಮರ್ಿಕ, ಆಥರ್ಿಕ ಅಭಿವೃದ್ಧಿಗೆ ಖಂಡ್ರೆ ಪರಿವಾರ ನೀಡಿದ ಕೊಡುಗೆಗಳು ಏನೇನಿವೆ ಎಂಬ ದಾಖಲೆಗಳು ನನ್ನ ಹತ್ತಿರ ಇವೆ. ಏನೂ ಕೆಲಸ ಮಾಡದ ನೀವು ನಮ್ಮ ಬಗ್ಗೆ ಸುಳ್ಳು ಹೇಳಿದರೆ ಜನತೆ ನಂಬಲ್ಲ. ನಿಮ್ಮ ಸುಳ್ಳಿನ ಆಟ ಈಗ ನಡೆಯದು. ನಾವೇನು ಮಾಡಿದ್ದೇವೆ ಎಂಬ ಬಗ್ಗೆ ಮಾಹಿತಿ ಬೇಕಿದ್ದರೆ ಚಚರ್ೆಗೆ ಬನ್ನಿ. ಎಲ್ಲವನ್ನೂ ದಾಖಲೆ, ಆಧಾರಸಹಿತ ತೋರಿಸುವೆ ಎಂದು ಸವಾಲು ಹಾಕಿದರು.

2017-18ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ 186 ಕೋಟಿ ರೂ. ಹೇರಾಫೇರಿ ನಡೆದಿದೆ. ರೈತರ ಹಣವೆಲ್ಲ ಗುಜರಾತ್ ಉದ್ಯಮಿ ಅದಾನಿ ಕಂಪನಿ ಪಾಲಾಗಿದೆ. ಮೈ ಭೀ ಚೌಕಿದಾರ್ ಎಂದು ಬಡಾಯಿಕೊಚ್ಚಿಕೊಳ್ಳುವವರು ಈ ವಿಷಯದಲ್ಲಿ ಏಕೆ ಮೌನರಾಗಿದ್ದಾರೆ ಎಂದು ಪ್ರಶ್ನಿಸಿದರು. ನಾನು ಸಚಿವನಿದ್ದಾಗ ಬ್ರಿಮ್ಸ್ ಇತರೆಡೆ ಅಕ್ರಮ ನಡೆದಿವೆ ಎಂಬ ಖೂಬಾ ಆರೋಪ ಅರ್ಥಹೀನ. ಒಂದೇ ಅವ್ಯವಹಾರ ನಾನು ಮಾಡಿಲ್ಲ. ಇದೆಲ್ಲವೂ ಖೂಬಾ ಮತ್ತು ಅವರ ಸಂಬಂಧಿಗಳೇ ಮಾಡಿದ್ದಾರೆ. ನನ್ನ ಮೇಲಿನ ಒಂದೇ ಅಕ್ರಮ ಸಾಬೀತುಪಡಿಸಿದರೆ ರಾಜೀನಾಮೆ ನೀಡಲು ಸಿದ್ಧ ಎಂದರು.

ಕ್ರೀಡಾ ಸಚಿವ ರಹೀಮ್ ಖಾನ್, ಶಾಸಕ ಬಿ.ನಾರಾಯಣರಾವ, ಮಾಜಿ ಶಾಸಕ ಎಂ.ಜಿ. ಮುಳೆ, ಪ್ರಮುಖರಾದ ಮುರಳೀಧರ ಕಾಳೆ, ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬಶಿರುದ್ದೀನ್ ಹಾಲಹಿಪ್ಪಗರ್ಾ, ಅರುಣ ಪಾಟೀಲ್, ದಿಗಂಬರರಾವ ಚಾಂದೋರಿ, ತೇಜೇರಾವ ಮುಳೆ, ಸವಿತಾ ಪಾಟೀಲ್, ಅಶೋಕ ಸೋನಜಿ, ರಘುನಾಥರಾವ ಜಾಧವ್, ಮಾರುತಿರಾವ ಮಗರ್, ಆನಂದ ಚವ್ಹಾಣ್, ಅಣ್ಣಾರಾವ ಪಾಟೀಲ್ ಇತರರಿದ್ದರು.