ಉತ್ತರ ಪ್ರದೇಶದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿಗೆ 14 ಸೀಟು ನಷ್ಟ; ಆದರೂ ಅತಿದೊಡ್ಡ ಪಕ್ಷ

ಲಖನೌ: ಗರಿಷ್ಠ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಹೆಗ್ಗಳಿಕೆಯ ಉತ್ತರ ಪ್ರದೇಶದಲ್ಲಿ ಬಿಜೆಪಿ 14 ಸೀಟುಗಳನ್ನು ಕಳೆದುಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ಇದುವರೆಗೆ 80 ಲೋಕಸಭಾ ಕ್ಷೇತ್ರಗಳ ಟ್ರೆಂಡ್​ ಲಭ್ಯವಾಗಿದ್ದು ಬಿಜೆಪಿ 57, ಬಿಎಸ್​ಪಿ 12, ಎಸ್​ಪಿ 7, ಅಪ್ನಾ ದಳ 1, ಆರ್​ಎಲ್​ಡಿ 1, ಕಾಂಗ್ರೆಸ್​ 1 ಹಾಗೂ ಪಕ್ಷೇತರರ1 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿಕೊಂಡಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಬಿಎಸ್​ಪಿ ಮತ್ತು ಎಸ್​ಪಿ ಮೈತ್ರಿಕೂಟಕ್ಕೆ ಲಾಭವಾಗಿದೆ. 2014ರ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದ ಬಿಎಸ್​ಪಿ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎಸ್​ಪಿ ಕಳೆದ ಬಾರಿ ಗೆದ್ದಿದ್ದ 5 ಸ್ಥಾನಗಳಿಗೆ 2 ಸ್ಥಾನಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿಕೊಂಡು 7 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಈ ಅರ್ಥದಲ್ಲಿ ಬಿಜೆಪಿಗೆ ಇಲ್ಲಿ 14 ಸ್ಥಾನಗಳು ನಷ್ಟವಾಗುವ ಸಾಧ್ಯತೆ ಇದ್ದು, ಇದನ್ನು ಅದು ಅನ್ಯ ರಾಜ್ಯಗಳಲ್ಲಿ ತುಂಬಿಸಿಕೊಂಡಿದೆ. ಹಾಗೂ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *