ಕುತೂಹಲಕ್ಕೆ ಕಾರಣವಾಯ್ತು ಸಚಿವ ಪುಟ್ಟರಾಜು ರೇಣುಕಾಚಾರ್ಯ ಭೇಟಿ! ಏನಿದರ ಗುಟ್ಟು?

ಬೆಂಗಳೂರು: ಸಣ್ಣ ನೀರಾವರಿ ಸಚಿವ ಸಿ.ಎಸ್.​ ಪುಟ್ಟರಾಜು ಮತ್ತು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರಿಬ್ಬರು ಶುಕ್ರವಾರ ಬೆಂಗಳೂರಿನಲ್ಲಿ ಗುಟ್ಟಾಗಿ ಭೇಟಿಯಾಗಿದ್ದಾರೆ.

ಸದ್ಯ ರಾಜ್ಯ ರಾಜಕೀಯದಲ್ಲಿ ಸ್ಥಿತ್ಯಂತರಗಳ ಸಂಭಾವ್ಯತೆ ಇರುವ ಹೊತ್ತಿನಲ್ಲೇ ಇಬ್ಬರೂ ನಾಯಕರ ನಡುವೆ ನಡೆದಿರುವ ಈ ಭೇಟಿ ಕುತೂಹಲ ಮೂಡಿಸಿದೆ. ಸಚಿವ ಪುಟ್ಟರಾಜು ಅವರು ಇತ್ತೀಚೆಗಷ್ಟೇ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಎಚ್​.ಡಿ ಕುಮಾರಸ್ವಾಮಿ ಅವರು ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದ್ದಾಗಲೇ ಚೆನ್ನಾಗಿತ್ತು. ಆಗ ಅವರು ಕೃಷ್ಣದೇವರಾಯನ ಕಾಲದಂಥ ಆಡಳಿತ ನೀಡಿದ್ದರು,” ಎಂದು ಬಿಜೆಪಿಯ ಕುರಿತು ಮೃಧು ಮಾತುಗಳನ್ನಾಡಿದ್ದರು.

ಹೊನ್ನಾಳಿ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಈ ಭೇಟಿ ನಡೆದಿತ್ತು ಎಂದು ರೇಣುಕಾಚಾರ್ಯ ಹೇಳಿಕೊಂಡಿದ್ದಾರಾದರೂ, ಅವರ ಭೇಟಿಯ ಹಿಂದೆ ಬೇರೆಯದ್ದೇ ಉದ್ದೇಶವಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.