‘ಕುಮಾರಸ್ವಾಮಿಯವರೇ ನಿಮ್ಮ ಈ ಸ್ಥಿತಿಗೆ ರೇವಣ್ಣ ಕಾರಣ’ ಕಿಡಿಕಾರಿದ ಎ ಮಂಜು

ಹಾಸನ: ಜೆಡಿಎಸ್‌ ವಿರುದ್ಧ ಸದಾ ಗುಟುರು ಹಾಕುತ್ತಲೇ ಇರುವ ಮಾಜಿ ಶಾಸಕ ಎ ಮಂಜು ಅವರಿಂದು ಫೇಸ್‌ಬುಕ್‌ನಲ್ಲಿ ಸಚಿವ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮೀಯವರೇ ನಿಮ್ಮ ರಾಜಕೀಯ ಜೀವನದ ಮೊದಲನೇ ವಿಲನ್ ನಿಮ್ಮ ಸಹೋದರ ರೇವಣ್ಣ. ನಿಮ್ಮ ಈ ಸ್ಥಿತಿಗೆ ನಿಮ್ಮ ಸಹೋದರ ರೇವಣ್ಣ ಅವರೇ ಕಾರಣ. ಸಮ್ಮಿಶ್ರ ಸರ್ಕಾರದ ಇಂದಿನ ಸ್ಥಿತಿಗೆ ರೇವಣ್ಣನ ಕೊಡುಗೆ ಅಪಾರವಾಗಿದೆ. ಆತ ಹುಟ್ಟುತ್ತಾ ಸಹೋದರ, ಬೆಳೆಯುತ್ತಾ ದಾಯದಿ ಇದನ್ನು ನೀವು ಮರೆಯಬೇಡಿ. ಈ ಮಾತು ನಿಮಗೆ ಅರ್ಥವಾಗುತ್ತದೆ ಎಂದಿದ್ದಾರೆ.

ನಿಮ್ಮನ್ನು ವ್ಯವಸ್ಥಿತವಾಗಿ, ಹಂತ – ಹಂತವಾಗಿ ಮುಗಿಸುತ್ತಿದ್ದಾನೆ ನಿಮ್ಮ ಸಹೋದರ ರೇವಣ್ಣ. ಇದೆಲ್ಲ ಗೊತ್ತಾಗುವ ಹೊತ್ತಿಗೆ ನಿಮ್ಮನ್ನು ಮುಗಿಸಿ ಬಿಡುತ್ತಾರೆ ರೇವಣ್ಣ. ಈಗಾಲಾದರು ನೀವು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಲೋಕೋಪಯೋಗಿ ಸಚಿವ ರೇವಣ್ಣ ವಿರುದ್ಧ ಹರಿಹಾಯ್ದಿರುವ ಮಾಜಿ ಸಚಿವ ಎ.ಮಂಜು ಸಿಎಂ ಕುಮಾರಸ್ವಾಮಿಯವರಿಗೆ ಎಚ್ಚರಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)