ಸಿನಿಮಾ

ನನ್ನ ವಿರುದ್ಧ ಬಿಜೆಪಿ ಕುತಂತ್ರ- ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ

ಕೊಪ್ಪಳ: ಕಾಂಗ್ರೆಸ್‌ನಿಂದ ಮಾತ್ರ ಜನ ಕಲ್ಯಾಣ ಸಾಧ್ಯ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಬೆಂಬಲಿಸಬೇಕು. ಕೊಪ್ಪಳದಲ್ಲಿ ರಾಘವೇಂದ್ರ ಹಿಟ್ನಾಳ್‌ಗೆ ಮತ ಹಾಕಿ ಗೆಲ್ಲಿಸಬೇಕೆಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಮನವಿ ಮಾಡಿದರು.

ಇದನ್ನೂ ಓದಿ: ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ: ಕಾಂಗ್ರೆಸ್ ಸಮಾವೇಶದಲ್ಲಿ ಜಗದೀಶ ಶೆಟ್ಟರ್

ಬಿಜೆಪಿಯಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆ

ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ನನಗೆ ಮಾಡಿದ ಅನ್ಯಾಯದಿಂದ ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ಕಾಂಗ್ರೆಸ್ ಸೇರಿರುವೆ. ಆರು ಬಾರಿ 25 ಸಾವಿರ ಮತಗಳ ಅಂತರದಿಂದ ಶಾಸಕನಾಗಿದ್ದೇನೆ. ಯಾವುದೇ ಕಾರಣಗಳಿಲ್ಲದೆ ನನಗೆ ಟಿಕೆಟ್ ತಪ್ಪಿಸಲಾಯಿತು.

ಗೌರವದಿಂದ ನಡೆಸಿಕೊಂಡರೆ ಸಾಕೆಂಬ ಷರತ್ತಿನ ಮೇಲೆ ಕಾಂಗ್ರೆಸ್ಗೆ

ನಾನೊಬ್ಬ ಪ್ರಭಾವಿ ಲಿಂಗಾಯತ ನಾಯಕ. ಗೆದ್ದರೆ ಸಿಎಂ ಸ್ಥಾನ ಕೇಳುವೆ ಎಂಬ ಕುತಂತ್ರದಿಂದ ಹೀಗೆ ಮಾಡಿದ್ದಾರೆ. ನಾನೇನು ಯಾವುದೇ ಅಧಿಕಾರ ಕೇಳಿರಲಿಲ್ಲ. ಬದಲಿಗೆ ಶಾಸಕನಾಗಿ ನನ್ನ ಕ್ಷೇತ್ರದ ಜನರ ಸೇವೆ ಮಾಡುವೆ ಎಂದರೂ ನಿರಾಕರಿಸಿದರು. ನನ್ನನ್ನು ಗೌರವದಿಂದ ನಡೆಸಿಕೊಂಡರೆ ಸಾಕೆಂಬ ಷರತ್ತಿನ ಮೇಲೆ ಕಾಂಗ್ರೆಸ್ ಸೇರಿರುವೆ ಎಂದರು.

ಮಹೇಂದ್ರ ಚೋಪ್ರಾ, ಸೈಯದ್ ಜುಲ್ಲು ಖಾದ್ರಿ, ರಾಜಶೇಖರ್ ಹಿಟ್ನಾಳ್, ಸುರೇಶ ದೇಸಾಯಿ, ಕೃಷ್ಣಾ ಇಟ್ಟಂಗಿ, ಇಂದಿರಾ ಬಾವಿಕಟ್ಟಿ, ಶಕುಂತಲಾ ಹುಡೇಜಾಲಿ, ರೇಷ್ಮಾ ಖಾಜಾವಲಿ, ಲತಾ ಗವಿಸಿದ್ದಪ್ಪ ಚಿನ್ನೂರು, ಹನುಮರಡ್ಡಿ ಹಂಗನಕಟ್ಟಿ, ನವೊದಯ ವಿರುಪಣ್ಣ ಇತರರಿದ್ದರು.

Latest Posts

ಲೈಫ್‌ಸ್ಟೈಲ್