More

  ಯುವಕರನ್ನು ಪಕ್ಷಕ್ಕೆ ಸೆಳೆಯುವ ಕೆಲಸವಾಗಲಿ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಹೇಳಿಕೆ

  ಮಂಡ್ಯ: ದೇಶವನ್ನು ಯುವಜನರೇ ಸಮರ್ಥವಾಗಿ ಮುನ್ನಡೆಸಬೇಕು ಎಂಬುದು ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಆಶಯವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ತಿಳಿಸಿದರು.
  ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ವಿವಿಧ ಪಕ್ಷದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಯಾರಿಗೆ ಬಲ ಇಲ್ಲವೋ ಅಂತಹ ಯುವ ಶಕ್ತಿಯನ್ನು ಪಕ್ಷಕ್ಕೆ ಸೆಳೆಯುವ ಕೆಲಸ ಮಾಡಬೇಕು ಎಂದು ಹೇಳಿದರು.
  ಲೋಕಸಭಾ ಚುನಾವಣಾ ಸಂಚಾಲಕ ಸಿ.ಪಿ.ಉಮೇಶ್ ಮಾತನಾಡಿ, ಪಕ್ಷದ ಸಿದ್ದಾಂತವನ್ನು ಒಪ್ಪಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಗರದಲ್ಲೇ ಯುವಜನರು ಸೇರ್ಪಡೆಯಾಗಿರುವುದು ಮೆಚ್ಚುಗೆ ವಿಷಯ. ಭಾರತಾಂಬೆಯ ಸೇವೆ ಮಾಡಲು ಒಪ್ಪಿ ಬಂದಿರುವ ಎಲ್ಲರಲ್ಲೂ ಶಿಸ್ತು ಇರಬೇಕು. ಅದನ್ನು ಪಾಲಿಸಿ ಮತ್ತಷ್ಟು ಬೆಳವಣಿಗೆಗೆ ಎಲ್ಲ ತಾಲೂಕಲ್ಲೂ ಇಂತಹ ಕಾರ್ಯಕ್ರಮಗಳು ನಡೆಯುವಂತಾಗಬೇಕು ಎಂದು ಹೇಳಿದರು.
  ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ನಗರಾಧ್ಯಕ್ಷ ವಸಂತ್, ಪ್ರಧಾನ ಕಾರ್ಯದರ್ಶಿ ನವನೀತ್‌ಗೌಡ, ಮುಖಂಡರಾದ ವಿವೇಕ್, ಶ್ರೀಧರ, ಚಂದ್ರು, ಸಿ.ಟಿ.ಮಂಜುನಾಥ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts