ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ 17 ಸ್ಥಾನಗಳಲ್ಲಿ ಸ್ಪರ್ಧೆ: ಎಲ್​ಜೆಪಿಗೆ 6 ಸ್ಥಾನಗಳಲ್ಲಿ ಸ್ಪರ್ಧೆ ಭಾಗ್ಯ

ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ 17 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ. ಉಳಿದ 6 ಸ್ಥಾನಗಳಲ್ಲಿ ಎನ್​ಡಿಎ ಮೈತ್ರಿಕೂಟದ ಮಿತ್ರಪಕ್ಷವಾದ ಎಲ್​ಜೆಪಿ ಸ್ಪರ್ಧಿಸಲಿದೆ.

ಪೂರ್ವ ಚಂಪಾರಣ್​, ಪಶ್ಚಿಮ ಚಂಪಾರಣ್​, ಶೆಹೋಹರ್​, ಮಧುಬನಿ, ಪಟನಾ ಸಾಹೀಬ್​, ಪಾಟ್ಲಿಪುತ್ರ, ಅರಾ, ಔರಂಗಾಬಾದ್​, ಬೇಗುಸರೈ, ಸರನ್​, ಉಜಿಯಾರ್​ಪುರ್​, ಬಕ್ಸರ್​, ಅರಾರಿಯಾ, ಸಸಾರಾಮ್​, ದರ್ಭಾಂಗಾ, ಮುಜಾಫರಾಪುರ್​ ಮತ್ತು ಮೆಹರ್​ಗಂಜ್​ ಜೆಡಿಯು ಸ್ಪರ್ಧಿಸಲಿರುವ 17 ಸ್ಥಾನಗಳಾಗಿವೆ.

ವಾಲ್ಮೀಕಿ ನಗರ್​, ಸೀತಾಮಾರ್ಹಿ, ಜಂಜಾರ್​ಪುರ್​, ಸುಪಾಲ್​, ಕಿಶನ್​ಗಂಜ್​, ಕಟಿಯಾರ್​, ಪೂರ್ನಿಯಾ, ಮಾಧೇಪುರ, ಗೋಪಾಲ್​ಗಂಜ್​ (ಎಸ್​ಸಿ), ಸಿವಾನ್​, ಭಾಗಲ್ಪುರ್​, ಬಂಕಾ, ಮುಂಗೇರ್​, ನಲಂದಾ, ಕಾರಾಕಟ್​, ಜೆಹನಾಬಾದ್​ ಮತ್ತು ಗಯಾದಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

ಖಗಾರಿಯಾ, ಜಮುಯಿ, ನಾವಡಾ, ಸಮಷ್ಟಿಪುರ್​, ವೈಶಾಲಿ ಮತ್ತು ಹಾಜಿಪುರ್​ ಎಲ್​ಜೆಪಿ ಸ್ಪರ್ಧಿಸಲಿರುವ 6 ಸ್ಥಾನಗಳಾಗಿವೆ. (ಏಜೆನ್ಸೀಸ್​)