ಸಚಿವರ ಪಟ್ಟಿಗೆ ಬಿಜೆಪಿ ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌, ಸೋಮವಾರ 12 ಗಂಟೆಗೆ ಪ್ರಮಾಣ ವಚನ

ಬೆಂಗಳೂರು: ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 15 ದಿನಗಳೇ ಕಳೆದಿದ್ದರೂ ಇನ್ನು ಸಚಿವ ಸಂಪುಟ ಮಾತ್ರ ರಚನೆಯಾಗಿಲ್ಲ. ಇದೀಗ ಸಚಿವ ಸಂಪುಟ ರಚನೆಗೆ ಹೈಕಮಾಂಡ್‌ ಒಪ್ಪಿಗೆ ಕಾಯುತ್ತಿದ್ದ ಬಿಎಸ್‌ವೈಗೆ ಕೊನೆಗೂ ಗ್ರೀನ್‌ ಸಿಗ್ನಲ್‌ ದೊರಕಿದೆ.

ಸಚಿವರ ಪಟ್ಟಿಗೆ ಬಿಜೆಪಿ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, 16 ಶಾಸಕರು ಸಚಿವರಾಗುವುದು ಶೇ. 100ರಷ್ಟು ಗ್ಯಾರಂಟಿ ಎನ್ನಲಾಗಿದೆ.

ಸಿಎಂ, ಬಿ.ಎಲ್​​.ಸಂತೋಷ್​​ರಿಂದ ಪಟ್ಟಿಗೆ ಫೈನಲ್ ಟಚ್​​​ ನೀಡಲಾಗಿದ್ದು, ಇಬ್ಬರು ನಾಯಕರು ಸಲ್ಲಿಸಿದ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಸೋಮವಾರ 12 ಗಂಟೆಗೆ 16 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಶುಕ್ರವಾರ ತಡ ರಾತ್ರಿ ಅಮಿತ್‌ ಷಾಗೆ ಬಿ.ಎಲ್. ಸಂತೋಷ್ ಪಟ್ಟಿ ಸಲ್ಲಿಸಿದ್ದಾರೆ. ಈ ಕುರಿತು ದೂರವಾಣಿ ಮೂಲಕ ಸಿಎಂಗೆ ಜೆ ಪಿ ನಡ್ಡಾ ಸ್ಪಷ್ಟಪಡಿಸಿದ್ದಾರೆ.

ಇಂದು ಸಂಜೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಿ ಚರ್ಚಿಸಿ ಸಚಿವರ ಲಿಸ್ಟ್​​​ ಫೈನಲ್​​ ಮಾಡಲಿದ್ದಾರೆ. ಅಮಿತ್ ಷಾ ಭೇಟಿ ನಂತರ ಬೆಂಗಳೂರಿಗೆ ವಾಪಸ್‌ ಆಗುವ ಬಿ ಎಸ್‌ ಯಡಿಯೂರಪ್ಪ ಅವರು ನಾಳೆ ರಾಜಭವನಕ್ಕೆ ತೆರಳಿ ಸಚಿವರಾಗುವವರ ಪಟ್ಟಿ ಸಲ್ಲಿಸಲಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *