ಅಥಣಿ: ಕಳೆದ ಹಲವಾರು ವರ್ಷಗಳಿಂದ ಹದಗೆಟ್ಟು ಹೋಗಿರುವ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಎಸ್.ಸಿ.ಪಿ. ಯೋಜನೆಯಡಿಯಲ್ಲಿ 3.25 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಬಾಕಿ ಉಳಿದ ಗ್ರಾಮೀಣ ರಸ್ತೆಗಳನ್ನು ಹಂತಹಂತವಾಗಿ ಡಾಂಬರೀಕರಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಅವರು ಭಾನುವಾರ ಜತ್ತ ಜಾಂಬೋಟಿ ರಸ್ತೆಯಿಂದ ಪಟ್ಟಣದ ಕೃಷ್ಣಾ ಬಡಾವಣೆಯವರೆಗೆ 1.25 ಕೋಟಿ ರೂ. ವೆಚ್ಚದ 1. ಕಿ.ಮೀ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ಬರುವ ದಿನಮಾನಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹೆಚ್ಚು ನುದಾನ ತಂದು ಜಿಲ್ಲೆ ಹಾಗೂ ರಾಜ್ಯವನ್ನು ಅಭಿವೃದ್ಧಿ ಮಾಡುವ ಗುರಿ ಹೊಂದಿದ್ದೇವೆ ಎಂದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಜಿ. ಎಸ್. ಸೂರ್ಯವಂಶಿ, ಸಹಾಯಕ ಅಭಿಯಂತ ಎ.ಜಿ. ಮುಲ್ಲಾ, ಗೌಡಪ್ಪ ಗೂಳಪ್ಪನವರ, ಶೇಖರ ಕರಬಸಪ್ಪಗೋಳ, ಆರ್.ಪಿ. ಅವತಾಡೆ ಇತರರು ಪಾಲ್ಗೊಂಡಿದ್ದರು.
ಸಂಬರಗಿ ವರದಿ: ಸಮೀಪದ ತಂಗಡಿ-ಮುರಗುಂಡಿ 1.07 ಕಿ.ಮೀ. ರಸ್ತೆ ಕಾಮಗಾರಿಗೆ ಡಿಸಿಎಂ ಲಕ್ಷ್ಮಣ ಸವದಿ ಚಾಲನೆ ನೀಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕಾಮಗಾರಿಗೆ ಹೆಚ್ಚು ಒತ್ತು ನೀಡಿದ್ದು, ರೈತಪರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು. ಶಿವು ದಿವಾನಮಳ, ಶ್ರೀಶೈಲ ನಾಯಿಕ, ಜಿ.ಎಸ್. ಸೂರ್ಯವಂಶಿ, ಅರುಣ ಬಾಸಿಂಗೆ, ಪಿಂಟು ಶಿಂಧೆ, ಅಥಣಿ ಶುಗರ್ಸ್ ನಿರ್ದೇಶಕ ಅಶೋಕ ಪಾಟೀಲ, ಅಶೋಕ ಘೂಳಪ್ಪನವರ, ಗೌಡಪ್ಪ ಘೂಳಪ್ಪನವರ, ಶೇಖರ ಕರಬಸಪ್ಪನವರ, ಶ್ರೀಕಾಂತ ಪಾಟೀಲ, ರಾಜಾರಾಮ ಪಾಟೀಲ, ಬಾಬಾಸಾಹೇಬ ಮಗದುಮ್ಮ, ಸುಧಾಕರ ಸಾವಂತ, ಬಾಬಾಸಾಬ ಮೋರೆ, ರಾಮಚಂದ್ರ ಪಾಟೀಲ, ಪಿಡಿಒ ಜಿ.ವೈ. ಮಸಳಿ ಇತರರು ಇದ್ದರು.