ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದಿಂದ ಬಿಜೆಪಿಗೆ ಸ್ವಲ್ಪ ಆತಂಕ: ರಾಹುಲ್​ ಗಾಂಧಿ

ನವದೆಹಲಿ: ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಉತ್ತರ ಪ್ರದೇಶದ ಪೂರ್ವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರಿಂದ ಬಿಜೆಪಿಗೆ ಸ್ವಲ್ಪ ಆತಂಕಕ್ಕೆ ಒಳಗಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಹೇಳಿದರು.

ಪ್ರಿಯಾಂಕಾ ಗಾಂಧಿಯವರ ಸಕ್ರಿಯ ರಾಜಕೀಯ ಪ್ರವೇಶದ ಬಗ್ಗೆ ಅಮೇಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನನ್ನ ಸೋದರಿ ಉತ್ತಮ ಕೆಲಸಗಾರಳು ಹಾಗೂ ಸಮರ್ಥಳು. ಉತ್ತರ ಪ್ರದೇಶ ರಾಜಕೀಯ ಬೆಳವಣಿಗೆಗಳು ನಡೆಯುವ ರಾಜ್ಯ. ಪ್ರಿಯಾಂಕಾ ಅವರನ್ನು ಅಲ್ಲಿನ ಪೂರ್ವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಮೂಲಕ ಅವರಿಗೆ ಒಂದು ಸವಾಲನ್ನು ನೀಡಲಾಗಿದೆ ಎಂದು ಹೇಳಿದರು.

ಪ್ರಿಯಾಂಕಾ ಗಾಂಧಿಯವರು ಇಚ್ಛಿಸಿದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಲಾಗುವುದು. ಉತ್ತರ ಪ್ರದೇಶವಿರಲಿ, ಗುಜರಾತ್​ ಇರಲಿ ಅಥವಾ ಇನ್ಯಾವುದೇ ರಾಜ್ಯವಿರಲಿ ಪ್ರತಿಪಕ್ಷಗಳು ನಮ್ಮ ವಿರುದ್ಧ ತಂತ್ರ ಹೂಡಲು ಬಿಡುವುದಿಲ್ಲ ಎಂದು ಹೇಳಿದರು.

ನನ್ನ ಸಹೋದರಿ ಪ್ರಿಯಾಂಕಾ ಅವರಿಗೆ ಸಾಮರ್ಥ್ಯವಿದೆ. ಅವರು ರಾಜಕೀಯಕ್ಕೆ ಬಂದಿದ್ದು ವೈಯಕ್ತಿಕವಾಗಿ ತುಂಬ ಸಂತೋಷವಾಗಿದೆ. ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಪಶ್ಚಿಮ ಉತ್ತರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಜ್ಯೋತಿರಾದಿತ್ಯ ಅವರು ಕೂಡ ಡೈನಾಮಿಕ್​ ಲೀಡರ್​ ಎಂದರು.

ನಾವು ಉತ್ತರ ಪ್ರದೇಶವನ್ನು ಹೊಸ ಮಾರ್ಗದಲ್ಲಿ ತೆಗೆದುಕೊಂಡು ಹೋಗುತ್ತೇವೆ. ಈಗ ನೇಮಕವಾದ ಯುವ ನಾಯಕರು ರಾಜ್ಯವನ್ನು ನಂ.1 ಸ್ಥಾನಕ್ಕೆ ಏರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

One Reply to “ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದಿಂದ ಬಿಜೆಪಿಗೆ ಸ್ವಲ್ಪ ಆತಂಕ: ರಾಹುಲ್​ ಗಾಂಧಿ”

 1. ಚಿನ್ನದ ಸೂಜಿ ಅಂತ ಕಣ್ಣಿಗೆ ಹೇಗೆ ಚುಚ್ಚಿಕೊಳ್ಳಲು ಸಾಧ್ಯವಿಲ್ಲವೋ ಹಾಗೆ ಪ್ರಿಯಾಂಕಾಳನ್ನು ರಾಜಕೀಯ ನಾಯಕಿಯನ್ನಾಗಿ ಒಪ್ಪಿಕೊಳ್ಳಲು ಸಾಧ್ಯಾವಾಗದು.

  ಎರಡು ಮಕ್ಕಳ ತಾಯಿ, ಮಾಜಿ ಪ್ರಧಾನಿಗಳ ಮರಿಮೊಮ್ಮಗಳು, ಮಾಜಿ ಪ್ರಧಾನಿಗಳ ಮೊಮ್ಮಗಳು, ಮಾಜಿ ಪ್ರಧಾನಿಯ ಮಗಳು,‌ನಾಲ್ಕು ದಶಕಗಳ ಹಿಂದೆ ಸಾಮಾನ್ಯ ಪರಿಚಾರಿಕೆಯಾಗಿ ಇಂದು ಯಾವುದೇ ರೀತಿಯ ವ್ಯವಹಾರ ಮಾಡದೆ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆಯರ ಪೈಕಿಯ ಒಬ್ಭರ ಮಗಳು, ಭಾವೀ ಪ್ರಧಾನಿ ಎಂದು ದಧಕಗಳಿಗಿಂತಲೂ ಹೆಚ್ಚಿನ ಅವಧಿಯಿಂದ ಬೀಗುತ್ತಿರುವವನ ಸಹೋದರಿ, ಈಗಾಗಲೇ ಹಲವಾರು ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಜೈಲು ಸೇರಬೇಕಾಗಿರವವನ ಪತ್ನಿ. ಇದು ಆಕೆಯ ನಿಜವಾದ ಅರ್ಹತೆ.

  ಒಂದು ದಶಕಕ್ಕೂ ಹೆಚ್ಚಿನ ಕಾಲ ಪಪ್ಪೂನನ್ನು ಬೆಳೆಸಲು ನೋಡಿ ಸಾಧ್ಯವಾಗದ ಕಾರಣ ಈಗ ಹತಾಶೆಯಿಂದ ತಮ್ಮ ಬತ್ತಳಿಕೆಯಿಂದ ಈಕೆಯನ್ನು ಬಳೆಸಲಾಗುತ್ತಿದೆ ಅಷ್ಟೇ. ಮಹಾಭಾರತದ ಯುಧ್ಧ ಸಮಯದಲ್ಲಿ ದ್ರೋಣಾಚಾರ್ಯರನ್ನು ಸೋಲಿಸಲು ಆಗದೆ ಶಿಖಂಡಿಯನ್ನು (ಪದ ಪ್ರಯೋಗಕ್ಕೆ ಕ್ಷಮೆಯಿರಲಿ) ಮುಂದಿಟ್ಟುಕೊಂಡು ಯುಧ್ಧ‌ಮಾಡಿದಂತೆ ಇಂದು ಪ್ರಿಯಾಂಕಾಳನ್ನು ಬಲಿಪಶು ಮಾಡಲಾಗುತ್ತಿದೆ ಅಷ್ಟೇ.

  ಇದರಿಂದ ಭಾರತದ ರಾಜಕಾರಣದಲ್ಲಿ ಹೆಚ್ಚೇನು ಬದಲಾಗದು. ಅಬ್ಬಬ್ಬಾ ಎಂದರೆ ಹೆಣ್ಣಿಗಾಗಿ‌ ಜೊಲ್ಲು ಸುರಿಸುವ ಕೆಲವು ಪಡ್ಡೆ ಹುಡುಗರ ಮನಸೆಳೆದು ನಾಲ್ಕಾರು ಹೆಚ್ಚಿನ ಓಟ್ ಪಡೆಯಬಹುದಷ್ಟೇ. ತನ್ನ ಅರ್ಹತೆಗೆ ತಕ್ಕ ಪಾತ್ರವನ್ನು ನಿಭಾಯಿಸಲು ಹೊರಟಿರುವ ಪ್ರಿಯಾಂಕಾಳಿಗೆ ಶುಭವಾಗಲಿ

  ನವಿಲು‌ನೋಡಿ‌ ಕೆಂಭೂತ ಕುಣಿಯಿತಂತೆ ಅನ್ನುವ ಹಾಗೆ ನೋಡಲು ಅಜ್ಜಿ ತರಹ ಇದ್ದಾಳೆ ಅಂತಾ ಮತ್ತೊಂದು ಹೆಮ್ಮಾರಿಯನ್ನು ತಲೆಯ‌ಮೇಲೆ ಕೂರಿಸಿಕೊಳ್ಳಲು ಇಂದು ಯಾರೂ‌ ಸಿದ್ಧರಿಲ್ಲ

  ಏನಂತೀರೀ?

Comments are closed.