ಬಿಜೆಪಿ ಮಾಜಿ ಶಾಸಕನಿಂದ ಸರ್ಕಾರಿ ಭೂಮಿ ಗುಳುಂ

ಬೆಂಗಳೂರು: ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಮುನಿರಾಜು ಸರ್ಕಾರಿ ಜಾಗ ಕಬಳಿಸಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು ‘ದಿಗ್ವಿಜಯ ನ್ಯೂಸ್​’ಗೆ ಲಭ್ಯವಾಗಿವೆ.

ಮಲ್ಲಸಂದ್ರದ ಸರ್ವೆ ನಂ.16ರಲ್ಲಿರುವ 2 ಗುಂಟೆ ಸರ್ಕಾರಿ ಜಾಗವನ್ನು 2007ರಲ್ಲಿ ಚಿಕ್ಕವೀರಮ್ಮ ಅವರಿಂದ ಖರೀದಿಸಿರುವುದಾಗಿ ದಾಖಲೆ ಸೃಷ್ಟಿ ಮಾಡಿರುವ ಶಾಸಕ ಮುನಿರಾಜು, ನಂತರ ಅದರ ಸರ್ವೆ ನಂಬರ್​ ಬದಲಿಸಿ ಅಲ್ಲಿ 2 ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ಅದೂ ಉದ್ಯಾನಕ್ಕೆ ಹೊಂದಿಕೊಂಡಂತೇ ಅವರು ಕಟ್ಟಡ ನಿರ್ಮಿಸಿದ್ದಾರೆ ಎಂಬುದು ಆರೋಪ.

ಸರ್ವೆ ನಂಬರ್​ 16 ಆಗಿದ್ದ ಭೂಮಿಯನ್ನು ವಸತಿ ಉದ್ದೇಶಕ್ಕಾಗಿ ಸರ್ವೆ ನಂ.97ಎಂದು ಉಲ್ಲೇಖಿಸಿ ಮುನಿರಾಜು ಅಕ್ರಮ ಖಾತೆ ಮಾಡಿಸಿಕೊಂಡಿದ್ದಾರೆ. ಅಲ್ಲದೆ, ಬಿಬಿಎಂಪಿಗೆ ತೆರಿಗೆಯನ್ನೂ ಪಾವತಿ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಆರೋಪದ ಈ ಕುರಿತು ಮಾತನಾಡಿರುವ ಮಾಜಿ ಶಾಸಕ ಮುನಿರಾಜು, “ಕಾನೂನಿನ ಪ್ರಕಾರ ನಾನು ಜಾಗ ಖರೀದಿ ಮಾಡಿದ್ದೇನೆ. ಅದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಗೆ ತೆರಿಗೆ ಪಾವತಿಸಿದ್ದೇನೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಅಕ್ರಮವಿದ್ದರೆ ಸಂಬಂಧಿಸಿದವರು ಕಾನೂನಿನ ರಿತ್ಯ ಕ್ರಮ ಕೈಗೊಳ್ಳಲಿ,” ಎಂದು ತಿಳಿಸಿದ್ದಾರೆ.

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ