Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ಕಾಂಗ್ರೆಸ್ ಕ್ಷಮೆಗೆ ಬಿಜೆಪಿ ಪಟ್ಟು

Wednesday, 18.04.2018, 3:05 AM       No Comments

ನವದೆಹಲಿ: ಹೈದರಾಬಾದ್​ನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ ಬಳಿಕ ಹಿಂದು ಉಗ್ರವಾದ ಎಂಬ ಪದ ಸೃಷ್ಟಿಸಿ ಜಾಗತಿಕವಾಗಿ ಹಿಂದುಗಳನ್ನು ಅವಮಾನಿಸಿದ್ದಕ್ಕೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅಧ್ಯಕ್ಷ ರಾಹುಲ್ ಗಾಂಧಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

11 ವರ್ಷ ಹಿಂದಿನ ಈ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳು ಖುಲಾಸೆಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 2009ರಲ್ಲಿ ರಾಹುಲ್ ಗಾಂಧಿ, ಅಮೆರಿಕ ರಾಯಭಾರಿ ರೊಯ್ಮರ್ ಜತೆಗೆ ನಡೆಸಿದ್ದ ಸಂಭಾಷಣೆಯಲ್ಲಿ ಹಿಂದು ಉಗ್ರವಾದ ಬಗ್ಗೆ ಉಲ್ಲೇಖಿಸಿರುವ ಕುರಿತು ದಾಖಲೆ ನೀಡಿದರು.

ರಾಹುಲ್ ಗಾಂಧಿ ನಡೆಸಿದ್ದ ಸಂಭಾಷಣೆಯನ್ನು ವಿಕಿಲೀಕ್ಸ್ ಕೆಲ ವರ್ಷಗಳ ಹಿಂದೆ ಬಿಡುಗಡೆ ಮಾಡಿತ್ತು. ‘ಹಿಂದು ಉಗ್ರವಾದ ಲಷ್ಕರ್ ಎ-ತೊಯ್ಬಾಗಿಂತ ಅಪಾಯಕಾರಿ ’

ಎಂದು ರಾಹುಲ್ ಹೇಳಿದ್ದಾಗಿ ಬಹಿರಂಗಪಡಿಸಿತ್ತು. ಸನಾತನ ಹಿಂದು ಧರ್ಮವನ್ನು ಅವಮಾನ ಮಾಡಿದ್ದಕ್ಕೆ ಸೋನಿಯಾ ಹಾಗೂ ರಾಹುಲ್ ಕ್ಷಮೆಯಾಚಿಸಬೇಕು ಎಂದು ಪಾತ್ರಾ ಆಗ್ರಹಿಸಿದ್ದಾರೆ. 2009ರ ಆಗಸ್ಟ್​ನಲ್ಲಿ ಹಿಲರಿ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದ್ದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಏರ್ಪಡಿಸಿದ್ದ ಔತಣಕೂಟದಲ್ಲಿ ರಾಯಭಾರಿ ರೊಯ್ಮರ್ ಮತ್ತು ರಾಹುಲ್ ಭೇಟಿ ಮಾಡಿದ್ದರು. 2010ರ ಡಿಸೆಂಬರ್​ನಲ್ಲಿ ಸಂಭಾಷಣೆಯ ವಿವರವನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿತ್ತು.

ಹಿಂದು ಉಗ್ರವಾದ ಪದ ಬಳಸಿಲ್ಲ

ಕಾಂಗ್ರೆಸ್​ನವರು ಹಿಂದು ಉಗ್ರವಾದ ಪದ ಬಳಕೆ ಮಾಡಿಲ್ಲ. ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಆರೋಪ ಮಾಡುವುದು ಸರಿಯಲ್ಲ ಎಂದು ಎಐಸಿಸಿ ವಕ್ತಾರ ಪಿ.ಎಲ್.ಪುನಿಯಾ ಹೇಳಿದ್ದಾರೆ. ರಾಹುಲ್ ಗಾಂಧಿ ಅಥವಾ ಇತರ ಕಾಂಗ್ರೆಸ್ ನಾಯಕರು ಎಲ್ಲಿಯೂ ಹಿಂದು ಉಗ್ರವಾದ ಬಳಕೆ ಮಾಡಿಲ್ಲ. ಆ ರೀತಿಯ ಯಾವುದೇ ಉಗ್ರವಾದ ಇಲ್ಲ ಎಂದು ಅವರು ತಿಳಿಸಿದ್ದಾರೆ. ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಸೋಮವಾರ ಅಸೀಮಾನಂದ ಮತ್ತು ಇತರ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ. ಈ ಪ್ರಕರಣದಲ್ಲಿ ಹಿಂದು ಉಗ್ರವಾದ ಎಂಬ ಪದವನ್ನು ಕಾಂಗ್ರೆಸ್ ಸೃಷ್ಟಿಸಿತ್ತು. ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದು ಧರ್ಮದ ಮೇಲೆ ಕಾಂಗ್ರೆಸ್ ಗೂಬೆ ಕೂರಿಸಿತ್ತು ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪಿ.ಎಲ್.ಪುನಿಯಾ ಸ್ಪಷ್ಟನೆ ನೀಡಿದ್ದಾರೆ.

ಹಿಂದು ಉಗ್ರವಾದದ ಬಣ್ಣ

ಭಯೋತ್ಪಾದನೆ ಸಂಬಂಧಿತ ಪ್ರಕರಣಗಳನ್ನು ಹಿಂದಿನ ಯುಪಿಎ ಸರ್ಕಾರ ಎನ್​ಐಎಗೆ ಹಸ್ತಾಂತರಿಸಿತು. ನಾನು ಸ್ವಯಂ ನಿವೃತ್ತಿ ಘೋಷಿಸಿದ ಬಳಿಕ ಎನ್​ಎಐ, ಈ ಪ್ರಕರಣಗಳಿಗೆ ಹಿಂದು ಉಗ್ರವಾದದ ಬಣ್ಣ ಬಳಿಯಿತು ಎಂದು ಗೃಹ ಸಚಿವಾಲಯ ಮಾಜಿ ಕಾರ್ಯದರ್ಶಿ ಆರ್.ವಿ.ಎಸ್. ಮಣಿ ಆರೋಪಿಸಿದ್ದಾರೆ. ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಸಿಬಿಐ ಕಲೆಹಾಕಿದ್ದ ಸಾಕ್ಷ್ಯಗಳು ಕೂಡ ಕಣ್ಮರೆಯಾದವು. ಕೇವಲ ಹಿಂದು ಉಗ್ರವಾದ ಎಂದು ಆರೋಪಿಸಲಾದ ಪ್ರಕರಣಗಳನ್ನೇ ಹೆಚ್ಚು ತನಿಖೆ ನಡೆಸಲಾಯಿತು ಎಂದಿದ್ದಾರೆ.

ಕಾಂಗ್ರೆಸ್ ಮುಖಂಡರಿಂದ ಕೇಸರಿ ಉಗ್ರವಾದ ಬಳಕೆ

  • ಮಾಜಿ ಗೃಹ ಸಚಿವ ಪಿ.ಚಿದಂಬರಂ (2010ರಲ್ಲಿ ಡಿಜಿಪಿ/ಐಜಿಪಿ ಸಮ್ಮೇಳನ )
  • ದೇಶದಲ್ಲಿ ಯುವಕರನ್ನು ತೀವ್ರವಾದದ ಕಡೆಗೆ ಸೆಳೆಯಲಾಗುತ್ತಿದೆ. ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಕೇಸರಿ ಭಯೋತ್ಪಾದನೆ ಬಹಿರಂಗಗೊಳ್ಳುತ್ತಿದೆ.
  • ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ( 2013ರ ಎಐಸಿಸಿ ಅಧಿವೇಶನ) – ಉಗ್ರವಾದ ವಿಸ್ತರಿಸಲು ಆರ್​ಎಸ್​ಎಸ್ ಮತ್ತು ಬಿಜೆಪಿ ತರಬೇತಿ ನೀಡುತ್ತಿವೆ. ನಾವು ಈ ವಿಚಾರ ಗಂಭೀರವಾಗಿ ಪರಿಗಣಿಸಿದ್ದೇವೆ.
  • ಸಂಝೋತಾ ಎಕ್ಸ್​ಪ್ರೆಸ್, ಮಾಲೇಗಾಂವ್ ಹಾಗೂ ಮೆಕ್ಕಾ ಮಸೀದಿ ಸ್ಪೋಟದ ಹಿಂದೆ ಇವರ ಕೈವಾಡವಿದೆ.
  • ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ (2013ರ ಕಾಂಗ್ರೆಸ್ ಮಹಾಸಮ್ಮೇಳನ) – ಬಂಧಿತ ಎಲ್ಲ ಹಿಂದು ಭಯೋತ್ಪಾದಕರಿಗೆ ಆರ್​ಎಸ್​ಎಸ್ ಜತೆಗೆ ಸಂಪರ್ಕ ಇದೆ ಎಂದು ಹೇಳಲು ನಾನು ಹಿಂಜರಿಯುವುದಿಲ್ಲ.

Leave a Reply

Your email address will not be published. Required fields are marked *

Back To Top