ಉಡುಪಿಯಲ್ಲಿ ಮುಂದುವರಿದ ಬಿಜೆಪಿ ದಂಡಯಾತ್ರೆ

ಉಡುಪಿ: ಜಿಲ್ಲೆಯಲ್ಲಿ ಗ್ರಾಪಂ, ತಾಪಂ, ಜಿಪಂ, ನಗರ ಸ್ಥಳೀಯ ಸಂಸ್ಥೆ ಚುನಾವಣೆ, ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿಯು ಜಯಭೇರಿ ಬಾರಿಸುವ ಮೂಲಕ ಬಿಜೆಪಿ ದಂಡಯಾತ್ರೆ ಮುಂದುವರಿಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಐದು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಕ್ಲೀನ್ ಸ್ವೀಪ್ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. ಈಗ ಭಾರಿ ಅಂತರಗಳ ಜಯ ಬಿಜೆಪಿಗೆ ಸಿಕ್ಕಿರುವುದು ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಜಜ್ಜರಿತಗೊಳಿಸಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಶೃಂಗೇರಿಯಲ್ಲಿ ಮಾತ್ರ ಕಾಂಗ್ರೆಸ್ ಸದಸ್ಯರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಆ ಕ್ಷೇತ್ರದಲ್ಲೂ ದಾಖಲೆ ಪ್ರಮಾಣದ ಮುನ್ನಡೆ ಬಿಜೆಪಿಗೆ ಲಭಿಸಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿ 81,110 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ 53,644 ಮತ ಗಳಿಸಿತ್ತು. ಈ ಬಾರಿ ಕಾಂಗ್ರೆಸ್‌ಗೆ ಸಿಕ್ಕಿದ್ದು 35,779 ಮತ ಮಾತ್ರ. ಬಿಜೆಪಿ 1,12,975 ಮತ ಪಡೆದಿದೆ. 31,466 ಇದ್ದ ಲೀಡ್ 77,196 ಮತಗಳಿಗೆ ವಿಸ್ತರಣೆಯಾಗಿದೆ.

ಉಡುಪಿ ಕ್ಷೇತ್ರದಲ್ಲಿ 2014ರಲ್ಲಿ ಬಿಜೆಪಿ 87,585, ಕಾಂಗ್ರೆಸ್ 54,911 ಮತ ಗಳಿಸಿ ಬಿಜೆಪಿ 32,674 ಲೀಡ್ ಪಡೆದಿತ್ತು. ಈ ಬಾರಿ ಲೀಡ್ 44,261ಕ್ಕೆ ಏರಿಕೆಯಾಗಿದ್ದು, ಬಿಜೆಪಿ 1,01,507, ಕಾಂಗ್ರೆಸ್ 57,246 ಮತ ಪಡೆದಿದೆ.

ಕಾಪು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ 2014ರಲ್ಲಿ 74,899, ಜಯಪ್ರಕಾಶ್ ಹೆಗ್ಡೆ 47,098 ಮತ ಗಳಿಸಿದ್ದರು. 27,801 ಅಂತರ ದಾಖಲಾಗಿತ್ತು. ಈ ಬಾರಿ ಅದು 44,667ಕ್ಕೆ ಏರಿದೆ. ಪ್ರಮೋದ್ 46,430, ಶೋಭಾ 91,097 ಮತ ಗಳಿಸಿದ್ದಾರೆ.

2014ರಲ್ಲಿ ಕಾರ್ಕಳದಲ್ಲಿ ಕಾಂಗ್ರೆಸ್ 48,579, ಬಿಜೆಪಿ 80,030 ಮತಗಳೊಂದಿಗೆ 31,451 ಮತಗಳ ಅಂತರವಿತ್ತು. ಈ ಬಾರಿ ಪ್ರಮೋದ್ 38,895, ಶೋಭಾ 97,442 ಮತ ಪಡೆದು ಅಂತರ 58,547ಕ್ಕೆ ಹೆಚ್ಚಳವಾಗಿದೆ.

ಶೃಂಗೇರಿಯಲ್ಲಿ 47448 ಕಾಂಗ್ರೆಸ್, 64192 ಬಿಜೆಪಿ ಮತ ಗಳಿಸಿ ಅಂತರ 16,744 ದಾಖಲಾಗಿತ್ತು. ಈ ಬಾರಿ ಅಂತರ 28,970ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ 47159, ಬಿಜೆಪಿ 76,129 ಮತ ಗಳಿಸಿದೆ.

2014ರಲ್ಲಿ ಮೂಡಿಗೆರೆಯಲ್ಲಿ ಕಾಂಗ್ರೆಸ್ 41152, ಬಿಜೆಪಿ 58128 ಮತ ಪಡೆದು ಅಂತರ 16,976ರಲ್ಲಿತ್ತು. ಈ ಬಾರಿ ಪ್ರಮೋದ್ 43800, ಶೋಭಾ 70512 ಮತ ಪಡೆದು ಅಂತರ 26712ಕ್ಕೇರಿದೆ.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 2014ರಲ್ಲಿ ಕಾಂಗ್ರೆಸ್ ಪಡೆದ ಮತ 55143, ಬಿಜೆಪಿ 69728 ಮತ ಗಳಿಸಿತ್ತು. ಈ ಬಾರಿ ಬಿಜೆಪಿ 87635, ಕಾಂಗ್ರೆಸ್ 54490 ಮತ ಪಡೆದು ಅಂತರವನ್ನು 14585ರಿಂದ 33,145ಕ್ಕೆ ಕಮಲ ಪಕ್ಷ ಏರಿಸಿಕೊಂಡಿದೆ.

2014ರಲ್ಲಿ ತರೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ 51,241, ಬಿಜೆಪಿ 60,778 ಮತ ಗಳಿಸಿ ಅಂತರ 9537 ದಾಖಲಿಸಿತ್ತು. ಈ ಬಾರಿ ಪ್ರಮೋದ್ 45133, ಶೋಭಾ 80185 ಮತ ಪಡೆದಿದ್ದು, ಅಂತರ 35052ಕ್ಕೆ ವಿಸ್ತರಣೆಯಾಗಿದೆ.

Leave a Reply

Your email address will not be published. Required fields are marked *