ಡಾ.ಜಿ.ಪರಮೇಶ್ವರ್ ಮಾತಿನ ಮಲ್ಲ

ಸಾವಳಗಿ: ರಾಜ್ಯದ ಸಮ್ಮಿಶ್ರ ಸರ್ಕಾರದಿಂದ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಅಲ್ಪ ಸಮಯದಲ್ಲಿಯೇ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್​ನವರು ಕೇವಲ ಮಾತಿನ ಮಲ್ಲರಾಗಿದ್ದು, ಅವರಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.

ಗ್ರಾಮದಲ್ಲಿ ನಡೆದ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಕಾಂಗ್ರೆಸ್ ಗೆಲ್ಲಿಸಿದರೆ ಸಾವಳಗಿ- ಜಂಬಗಿ ರಸ್ತೆ ಮಾಡುತ್ತೇನೆ ಎಂದು ಹೇಳಿರುವುದು ಖಂಡನೀಯ. ಅವರದೇ ಸರ್ಕಾರ ಕಳೆದ 6 ವರ್ಷಗಳಿಂದ ಇದ್ದರೂ ಇತ್ತ ಕಡೆ ಗಮನ ಹರಿಸಿಲ್ಲ. ರಸ್ತೆಗಳು ಹಾಳಾಗಿದ್ದು, ಮೂಲಸೌಲಭ್ಯಗಳಿಲ್ಲದೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. 6 ವರ್ಷಗಳಿಂದ ಇಲ್ಲದ ಕಾಳಜಿ ದಿಢೀರನೆ ಚುನಾವಣೆ

ಬಂದಾಗ ನೆನಪಾಗಿದೆ. ಪೊಳ್ಳು ಭರವಸೆ ನೀಡಿ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ. ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಮುಖಂಡ ಬಿ.ಎಸ್. ಸಿಂಧೂರ ಮಾತನಾಡಿದರು. ಎಂಎಲ್​ಸಿ ರಘುನಾಥ ವಲ್ಯಾಪುರೆ, ಶಿವಾನಂದ ಪಾಟೀಲ, ಬಸವರಾಜ ಮಾಳಿ, ಸತಗೌಡ ನ್ಯಾಮಗೌಡ, ರಾಜು ಹಿರೇಮಠ, ಸುರೇಶ ಮಾಳಿ, ಸುಜಿತಗೌಡ ಪಾಟೀಲ, ಮಾದೇವ ಮಾಳಿ, ಕಾಶಿನಾಥ ಹಟ್ಟಿ, ರಾಜು ಪಾಟೀಲ, ಭರತೇಶ ಜಮಖಂಡಿ, ಶಂಕರ ಮಾಳಿ, ಭೀಮು ಜಾಧವ, ಮಹಾವೀರ ಜಮಖಂಡಿ, ರಾಮು ಜಾಧವ ಇನ್ನಿತರರು ಇದ್ದರು.