22.5 C
Bangalore
Friday, December 13, 2019

ಕ್ಷೇತ್ರದಲ್ಲಿ ಮುನ್ನಡೆ-ಹಿನ್ನಡೆ ಚರ್ಚೆ ಜೋರು

Latest News

ಅಜ್ಞಾನದ ಕತ್ತಲೆ ಕಳೆಯುವುದೇ ಕಾರ್ತಿಕೋತ್ಸವ

ಶಿರಹಟ್ಟಿ: ಅಂತರಂಗದ (ಅಜ್ಞಾನದ) ಕತ್ತಲೆ ಹೋಗಲಾಡಿಸಿ ಜ್ಞಾನದ ಅರಿವು ಪಡೆಯುವುದೇ ಕಾರ್ತಿಕೋತ್ಸವದ ಮೂಲ ಉದ್ದೇಶವಾಗಿದೆ ಎಂದು ವರವಿ ಮಠದ ಶ್ರೀ ವಿರೂಪಾಕ್ಷ ಸ್ವಾಮಿಗಳು...

ಜಾತ್ರೆಯ ಯಶಸ್ಸಿಗೆ ಸಹಕರಿಸಿ

ಮುಂಡರಗಿ: ಮನುಷ್ಯನು ಬದುಕಿನಲ್ಲಿ ಸೇವಾ ಮನೋಭಾವ ಹೊಂದಿ ಉತ್ತಮ ವಿಚಾರ ಚಿಂತನೆಗಳ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಜಗದ್ಗುರು ಅನ್ನದಾನೀಶ್ವರ...

ಅಧ್ಯಾತ್ಮ ಸಾರ್ವತ್ರಿಕರಣವಾಗಲಿ

ಗದಗ: ಎಲ್ಲರಲ್ಲಿಯೂ ದೇವರಿದ್ದಾನೆ ಜತೆಗೆ ದೈವತ್ವದ ಕಿಡಿ ಇದೆ. ಎಲ್ಲರೂ ಒಂದೇ ಎಂದು ತಿಳಿಯಬೇಕು, ವಿಭಿನ್ನತೆಯಲ್ಲಿ ಏಕತೆ ಕಾಣುವುದೇ ನಿಜವಾದ ಧರ್ಮ. ಅಧ್ಯಾತ್ಮ...

ಮಾನವರು ದ್ವೇಷ, ಅಸೂಯೆ ಬಿಡಲಿ

ಚಾಮರಾಜನಗರ: ಶ್ರೀಕೃಷ್ಣ ಪ್ರತಿಷ್ಠಾನದಿಂದ ಮೊಸರು ಮಡಕೆ ಒಡೆಯುವ ಉತ್ಸವದ ಅಂಗವಾಗಿ ಶುಕ್ರವಾರ ನಗರದ ಚೆನ್ನಿಪುರಮೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹೂ...

ಅರಣ್ಯ ರಕ್ಷಣೆಗೆ ಡ್ರೋನ್ ಕಣ್ಗಾವಲು

ಗುಂಡ್ಲುಪೇಟೆ: ಮುಂದಿನ ಬೇಸಿಗೆಯಲ್ಲಿ ಬಂಡೀಪುರವನ್ನು ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ. ಬೇಸಿಗೆಯಲ್ಲಿ ಬೆಂಕಿ ಹರಡುವುದನ್ನು ಕೂಡಲೇ ಗುರುತಿಸಲು ಇದೇ ಮೊದಲ ಬಾರಿಗೆ...

ಪ್ರಸಾದ್‌ಲಕ್ಕೂರು ಚಾಮರಾಜನಗರ
ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಗುರುವಾರ ಮುಕ್ತಾಯವಾಗಿದ್ದು, ಜಿಲ್ಲೆಯ 4 ಕ್ಷೇತ್ರಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತಗಳು ಬರಲಿವೆ ಮತ್ತು ಹಿನ್ನಡೆಯಾಗಲಿವೆ. ಯಾರು ಗೆಲ್ಲಬಹುದು ಎಂಬ ಲೆಕ್ಕಾಚಾರ ನಡೆದಿದೆ.

ಗೆಲುವಿಗಾಗಿ ಹಾಲಿ ಸಂಸದ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆರ್.ಧ್ರುವನಾರಾಯಣ ಮತ್ತು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬಿಎಸ್ಪಿ ಅಭ್ಯರ್ಥಿ ಡಾ.ಶಿವಕುಮಾರ್ ಇವರಿಬ್ಬರಿಗೂ ಪೈಪೋಟಿ ಒಡ್ಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಲೆ, ಬಿ.ಎಸ್.ಯಡಿಯೂರಪ್ಪ ವರ್ಚಸ್ಸು, ವಿ.ಶ್ರೀನಿವಾಸಪ್ರಸಾದ್ ಅವರು ಸಂಸದರಾಗಿದ್ದಾಗ ಮಾಡಿದ್ದ ಕೆಲಸಗಳು ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಪೂರಕವಾಗಲಿವೆ ಎಂಬ ವಿಶ್ವಾಸ ಬಿಜೆಪಿ ಮುಖಂಡರದ್ದಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ ಅವರು 10 ವರ್ಷಗಳು ಸಂಸದರಾಗಿದ್ದಾಗ ಕ್ಷೇತ್ರದಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳು, ಅವರು ಎಲ್ಲ ಸಮುದಾಯಗಳ ಜತೆ ಇಟ್ಟುಕೊಂಡಿದ್ದ ಉತ್ತಮ ಒಡನಾಟ, ಸರಳ, ಸಜ್ಜನಿಕೆ ಅವರಿಗೆ ಹ್ಯಾಟ್ರಿಕ್ ಗೆಲುವು ತಂದುಕೊಡಲಿದೆ ಎಂಬುದು ಕಾಂಗ್ರೆಸ್ ಮುಖಂಡರ ವಿಶ್ವಾಸವಾಗಿದೆ.

ಬಿಎಸ್ಪಿ ಅಭ್ಯರ್ಥಿ ಡಾ.ಶಿವಕುಮಾರ್ ಕ್ಷೇತ್ರಾದ್ಯಂತ ಹೆಚ್ಚು ಮತ ಗಳಿಸಿದಷ್ಟೂ ಕಾಂಗ್ರೆಸ್‌ಗೆ ನಷ್ಟವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ತಿಂಗಳ ಕಾಲ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಬಳಲಿರುವ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಅಭ್ಯರ್ಥಿಗಳು ಹಾಗೂ ಮುಖಂಡರು ತಮ್ಮ ಮನೆಗಳಲ್ಲಿ ಶುಕ್ರವಾರ ವಿಶ್ರಾಂತಿ ಪಡೆದರು. ತಮ್ಮನ್ನು ಭೇಟಿ ಮಾಡಿದ ಮುಖಂಡರ ಜತೆ ಸೋಲು, ಗೆಲುವು, ಹಿನ್ನಡೆ ಮತ್ತು ಮುನ್ನಡೆ ಕುರಿತು ಚರ್ಚಿಸಿದರು.

ಇದಲ್ಲದೆ ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ಮತ್ತು ಹನೂರು ಪಟ್ಟಣಗಳು ಹಾಗೂ ಗ್ರಾಮಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಯಾವ ಕ್ಷೇತ್ರಗಳಲ್ಲಿ ಯಾವ ಪಕ್ಷಗಳಿಗೆ ಎಷ್ಟೆಷ್ಟು ಮತದಾನವಾಗಿದೆ ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಜಿಲ್ಲೆಯ ಯಾವ ಸಮುದಾಯ ಯಾವ ಪಕ್ಷಕ್ಕೆ ಹೆಚ್ಚು ಮತ ನೀಡಿದೆ. ಯಾರನ್ನು ಬೆಂಬಲಿಸಿದ್ದಾರೆ. ಎಲ್ಲಿ ಮತದಾರರು ಕೈಕೊಟ್ಟಿದ್ದಾರೆ ಎಂಬ ಕುರಿತು ರಸ್ತೆಗಳ ಬದಿ, ಬಸ್ ನಿಲ್ದಾಣ, ಸಮುದಾಯ ಭವನ, ಪಡಸಾಲೆ, ಅರಳಿಕಟ್ಟೆಗಳಲ್ಲಿ ಲೆಕ್ಕಾಚಾರ ನಡೆದಿದೆ.

ಕಾಂಗ್ರೆಸ್-ಬಿಜೆಪಿ ನಡುವೆ ಫೈಟ್ : ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಪ್ರತಿನಿಧಿಸುವ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಕೊಡಿಸುವುದು ಅವರಿಗೆ ಪ್ರತಿಷ್ಠೆಯಾಗಿದೆ. ಆದರೆ, ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿಯಿದೆ. ಕ್ಷೇತ್ರದಲ್ಲಿ ಶೇ.77.86 ರಷ್ಟು ಮತದಾನವಾಗಿದೆ.

ಕ್ಷೇತ್ರದ ಬಹುಸಂಖ್ಯಾತ ವೀರಶೈವ-ಲಿಂಗಾಯತರು, ನಾಯಕರು, ಸ್ವಲ್ಪ ಪ್ರಮಾಣದಲ್ಲಿ ದಲಿತರ ಮತಗಳು ಬಿಜೆಪಿಗೆ ಬಂದಿವೆ. ಇದಲ್ಲದೆ ಇತರೆ ಸಣ್ಣ ಪುಟ್ಟ ಸಮುದಾಯಗಳು ಬಿಜೆಪಿ ಬೆಂಬಲಿಸಿದ್ದಾರೆ ಆದ್ದರಿಂದ ಬಿಜೆಪಿಗೆ ಹೆಚ್ಚು ಲೀಡ್ ಬರಲಿದೆ ಎಂಬ ಲೆಕ್ಕಾಚಾರವಿದೆ.

ಕಾಂಗ್ರೆಸ್‌ಗೆ ಹಿಂದುಳಿದ ಉಪ್ಪಾರ ಸಮುದಾಯ, ದಲಿತರು, ಕುರುಬರು, ಮುಸ್ಲಿಂ ಇತರೆ ಸಮುದಾಯದ ಹಾಗೂ ವೀರಶೈವ-ಲಿಂಗಾಯತರ ಸ್ವಲ್ಪ ಮತಗಳು ಚಲಾವಣೆಯಾಗಿವೆ. ಹಾಗಾಗಿ ಕಾಂಗ್ರೆಸ್‌ನ ಆರ್.ಧ್ರುವನಾರಾಯಣ ಅವರಿಗೆ ಹೆಚ್ಚು ಮತಗಳು ಲಭ್ಯವಾಗಿ ಹ್ಯಾಟ್ರಿಕ್ ಗೆಲುವು ಗ್ಯಾರೆಂಟಿ ಎಂದು ಮುಖಂಡ ಬಿ.ಕೆ.ರವಿಕುಮಾರ್ ವಿಶ್ಲೇಷಿಸುತ್ತಾರೆ.

ಬಿಜೆಪಿಗೆ ಲೀಡ್ ? : ಗುಂಡ್ಲುಪೇಟೆ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು (ಶೇ.82.59), ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದು ತಮ್ಮ ಪಕ್ಷದ ಅಭ್ಯರ್ಥಿಗೆ ಲೀಡ್ ಕೊಡಿಸಲಿದ್ದಾರೆ.
ಕಾಂಗ್ರೆಸ್ ಮುಖಂಡರು ಸಾಕಷ್ಟು ಶ್ರಮ ವಹಿಸಿದ್ದಾರೆ. ತಮ್ಮ ಅಭ್ಯರ್ಥಿ ಆರ್.ಧ್ರುವನಾರಾಯಣ ಅವರಿಗೆ ಬಿಜೆಪಿಗೆ ದೊರಕುವಷ್ಟು ಮತ ಬೀಳಲಿವೆ. ಹೆಚ್ಚಿನ ಮತದಾರರಾದ ವೀರಶೈವ-ಲಿಂಗಾಯತರು, ನಾಯಕರು ಬಿಜೆಪಿ ಬೆಂಬಲಿಸಿದ್ದಾರೆ. ದಲಿತ ಮತಗಳು ಸಹ ಆ ಪಕ್ಷಕ್ಕೆ ಬರಲಿವೆ. ದಲಿತ, ಉಪ್ಪಾರ, ಕುರುಬ, ಸ್ವಲ್ಪ ಪ್ರಮಾಣದ ವೀರಶೈವ-ಲಿಂಗಾಯತರ ಹಾಗೂ ಇತರೆ ಸಣ್ಣ ಸಮುದಾಯಗಳ ಮತಗಳು ಕಾಂಗ್ರೆಸ್‌ಗೆ ಬರಲಿವೆ ಎಂದು ಮುಖಂಡರಾದ ಬಿ.ಎಂ.ಮುನಿರಾಜು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಬಿಎಸ್ಪಿಗೆ ಹೆಚ್ಚು ಮತಗಳು ?
ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್ಪಿ ಶಾಸಕರಿದ್ದಾರೆ. ಹಾಗಾಗಿ ಬಿಎಸ್ಪಿ ಅಭ್ಯರ್ಥಿ ಡಾ.ಶಿವಕುಮಾರ್‌ಗೆ ಹೆಚ್ಚು ಮತಗಳು ಬರಲಿವೆ. ಇಲ್ಲಿ ಶೇ. 74.59 ರಷ್ಟು ಮತದಾನವಾಗಿದೆ.

ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಬಿಎಸ್ಪಿ, ಕಾಂಗ್ರೆಸ್, ಬಿಜೆಪಿಗೆ ಮತಗಳು ಹಂಚಿಕೆಯಾಗಲಿವೆ. ಆದರೆ, ಬಿಎಸ್ಪಿಗೆ ಹೆಚ್ಚಾಗಿ ಹೋಗಲಿವೆ. ಉಪ್ಪಾರ, ಕುರುಬ, ಮುಸ್ಲಿಂ ಹಾಗೂ ಇತರೆ ಸಣ್ಣ ಸಮುದಾಯಗಳ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಹೋಗಿವೆ ಎಂದು ಚರ್ಚೆಯಾಗುತ್ತಿದೆ. ದಲಿತ ಮತದಾರರು ಸೇರಿದಂತೆ ವೀರಶೈವ-ಲಿಂಗಾಯತರು, ನಾಯಕರು ಬಿಜೆಪಿ ಬೆಂಬಲಿಸಿದ್ದಾರೆ. ಹಾಗಾಗಿ ಸಾಕಷ್ಟು ಮತಗಳು ಬಿಜೆಪಿಗೂ ಬರಲಿವೆ ಎಂದು ಮುಖಂಡರಾದ ನಾಗರಾಜು ವಿಶ್ಲೇಷಣೆ ಮಾಡುತ್ತಾರೆ.

ಕಾಂಗ್ರೆಸ್‌ಗೆ ಮುನ್ನಡೆ : ಹನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಆರ್.ನರೇಂದ್ರ ಇದ್ದಾರೆ. ಜೆಡಿಎಸ್ ಮುಖಂಡ ಮಂಜುನಾಥ್ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಬರಲಿವೆ. ಕ್ಷೇತ್ರದಲ್ಲಿ ಶೇ.72.03 ರಷ್ಟು ಮತದಾನವಾಗಿದೆ.

ವೀರಶೈವ-ಲಿಂಗಾಯತರು, ನಾಯಕರು, ದಲಿತರು ಸಹ ಬಿಜೆಪಿ ಬೆಂಬಲಿಸಿದ್ದಾರೆ. ಮುಖಂಡ ದತ್ತೇಶ್‌ಕುಮಾರ್ ಮತ್ತು ದಿ.ಎಚ್.ನಾಗಪ್ಪ ಪತ್ನಿ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಮತ್ತು ಅವರ ಮಗ ಪ್ರೀತನ್‌ನಾಗಪ್ಪ ಬಿಜೆಪಿ ಬೆಂಬಲಿಸಿದ್ದು ಬಿಜೆಪಿಗೂ ಸಾಕಷ್ಟು ಮತಗಳು ಬರಲಿವೆ.
ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಗ್ರಾಮಗಳು ಮೂಲ ಸೌಕರ್ಯ ವಂಚಿತವಾಗಿದ್ದು ಆ ಗ್ರಾಮಗಳ ಮತಗಳು ಹಾಲಿ ಶಾಸಕರ ವಿರೋಧಿಯಾಗಿ ಚಲಾವಣೆಗೊಂಡಿವೆ ಎಂದು ಮಲೆ ಮಹದೇಶ್ವರ ಬೆಟ್ಟದ ಕೆ.ವಿ.ಮಾದೇಶ್ ಹೇಳುತ್ತಾರೆ.

ಬಿಜೆಪಿ ಅಭ್ಯರ್ಥಿಗೆ ಪ್ರತಿಷ್ಠೆ : ನಂಜನಗೂಡು ಕ್ಷೇತ್ರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಪ್ರತಿಷ್ಠೆಯಾಗಿದೆ. ಅವರ ಅಳಿಯ ಮತ್ತು ಶಾಸಕ ಬಿ.ಹರ್ಷವರ್ಧನ್ ಬಿಜೆಪಿ ಶಾಸಕರಾಗಿದ್ದು ಹೆಚ್ಚಿನ ಮತಗಳನ್ನು ತಂದು ಕೊಡಲಿದ್ದಾರೆ ಎಂಬ ವಿಶ್ವಾಸ ಬಿಜೆಪಿ ಮುಖಂಡರದು.
ದಲಿತರು ಹಾಗೂ ವೀರಶೈವ- ಲಿಂಗಾಯತರು ಸಮ ಪ್ರಮಾಣದಲ್ಲಿದ್ದು ಬಿಜೆಪಿಗೆ ಮತ ಹೋಗಲಿವೆ. ಇನ್ನು ದಲಿತರ ಮತಗಳು ಹಿಂದೆಗಿಂತ ಈ ಬಾರಿ ಬಿಜೆಪಿ ಕೈಬಲಪಡಿಸಿರುವುದು ವರದಾನವಾಗಿದೆ.
ಇನ್ನು ಕಾಂಗ್ರೆಸ್ ನೆಚ್ಚಿಕೊಂಡಿರುವ ಸಾಂಪ್ರದಾಯಿಕ ಮತಗಳನ್ನು ಆರ್.ಧ್ರುವನಾರಾಯಣ ಅವರು ವಿಭಜನೆಯಾಗದಂತೆ ತಮ್ಮತ್ತ ಸೆಳೆದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈಕೊಟ್ಟಿದ್ದ ಉಪ್ಪಾರ ಹಾಗೂ ಪರಿಶಿಷ್ಟ ಪಂಗಡ ಸಮುದಾಯ ಮತಗಳ ಮೇಲೆ ಕೇಂದ್ರೀಕರಿಸಿ ಶೇಕಡವಾರು ಮತ ಗಳಿಸುವಲ್ಲಿ ಶಕ್ತರಾಗಿದ್ದಾರೆ. ಉಳಿದಂತೆ ಮುಸ್ಲಿಂ ಮತಬ್ಯಾಂಕ್ ಕೈಕೋಟೆಯನ್ನು ಬಲಗೊಳಿಸಿದೆ. ಜತೆಗೆ ಜೆಡಿಎಸ್ ಸಾಂಪ್ರದಾಯಿಕ ಒಕ್ಕಲಿಗ ಮತಗಳು ಕೈ ಪಾಳಯಕ್ಕೆ ಆಸರೆಯಾಗಿವೆ.

ಮಾಜಿ ಸಿಎಂ ಪ್ರತಿಷ್ಠೆ ಪಣಕ್ಕೆ : ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸಿದ್ದ ಹಾಗೂ ಅವರ ಪುತ್ರ ಡಾ.ಯತೀಂದ್ರ ಶಾಸಕರಾಗಿರುವ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಳ್ಳುವುದು ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆ ಆಗಿದೆ. ಹಾಗಾಗಿ ಅಪ್ಪ-ಮಗ ಇಬ್ಬರೂ ವಿಶೇಷ ಕಾಳಜಿ ತೋರಿದ್ದಾರೆ.
ಲಿಂಗಾಯತ ವೀರಶೈವ, ದಲಿತರು, ಕುರುಬರು, ಉಪ್ಪಾರ, ಎಸ್ಟಿ ಪ್ರಾಬಲ್ಯವಿರುವ ಈ ಕ್ಷೇತ್ರ ಆರಂಭದಿಂದಲೂ ಕಾಂಗ್ರೆಸ್ ಭದ್ರಕೋಟೆ. ಈ ಕ್ಷೇತ್ರದಲ್ಲಿ ಬಿಜೆಪಿ ಸಮರ್ಥ ಮೇಟಿ ಇಲ್ಲದಿರುವುದು ಕೈ ಪಾಳಯಕ್ಕೆ ಪ್ಲಸ್ ಪಾಯಿಂಟ್. ಈ ಚುನಾವಣೆಯಲ್ಲಿ ಬಹುಪಾಲು ವೀರಶೈವ-ಲಿಂಗಾಯತರು ಬಿಜೆಪಿ ಕೈಹಿಡಿದಿದ್ದಾರೆ. ದಲಿತರು ಮೂರನೇ ಒಂದು ಭಾಗ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಅಲ್ಪ ಪ್ರಮಾಣದಲ್ಲಿ ದಲಿತರ ಮತ ಬಿಎಸ್ಪಿ ಪಾಲಾಗಿದೆ.

ಬಿಜೆಪಿ ಬೆಂಬಲಿಸಲಿದೆಯೇ ಕೋಟೆ ? : ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಮತ್ತು ಮಾಜಿ ಶಾಸಕ ಜೆಡಿಎಸ್ ಮುಖಂಡ ಚಿಕ್ಕಣ್ಣ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆರ್.ಧ್ರುವನಾರಾಯಣ ಅವರಿಗೆ ಹೆಚ್ಚು ಮತಗಳನ್ನು ತಂದು ಕೊಡಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ವಿಶ್ವಾಸ ಹೊಂದಿದ್ದಾರೆ. ಆದರೆ, ಶಾಸಕರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ಮತ್ತು ಮಾಜಿ ಶಾಸಕ ಚಿಕ್ಕಣ್ಣ ಅವರು ಧ್ರುವನಾರಾಯಣ ಅವರ ಜತೆ ಅಷ್ಟಕಷ್ಟೇ ಎಂಬ ಮಾತುಗಳು ಕೇಳಿಬಂದಿವೆ. ಪರಿವಾರ ಮತ್ತು ತಳವಾರ ಪದಗಳು ಎಸ್ಟಿ ಪಟ್ಟಿಗೆ ಸೇರದೆ ಗೊಂದಲವಾಗಿದೆ. ಇದರಿಂದ ನಾಯಕ ಸಮುದಾಯದ ಹೆಚ್ಚು ಮತಗಳು ಬಿಜೆಪಿಗೆ ಹೋಗಿವೆ. ಕ್ಷೇತ್ರದಲ್ಲಿ ವಿ.ಶ್ರೀನಿವಾಸಪ್ರಸಾದ್ ಅಭಿಮಾನಿಗಳು ಹೆಚ್ಚಾಗಿದ್ದು ದಲಿತರ ಮತಗಳ ಅವರತ್ತ ಹೋಗಿವೆ. ಒಕ್ಕಲಿಗರ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್ ಮುಂದಾಗಲಿಲ್ಲ ಎಂದು ಹೇಳಲಾಗುತ್ತಿದೆ. ಬಿಎಸ್ಪಿ ಅಭ್ಯರ್ಥಿ ಕೂಡ ಹೆಚ್ಚು ಮತಗಳನ್ನು ಸೆಳೆಯಲಿದ್ದು ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್, ಬಿಜೆಪಿಗೆ ಹಂಚಿಕೆ : ತಿ.ನರಸೀಪುರ ಕ್ಷೇತ್ರದಲ್ಲಿ ಅತಿ ಕಡಿಮೆ 68.94 ರಷ್ಟು ಮತದಾನವಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಸಮ ಪ್ರಮಾಣದಲ್ಲಿ ಮತಗಳಿಸಲಿದ್ದಾರೆ. ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಮತ್ತು ಜೆಡಿಎಸ್ ಶಾಸಕ ಅಶ್ವಿನ್‌ಕುಮಾರ್ ಅವರು ಶ್ರಮ ವಹಿಸಿ ಕಾಂಗ್ರೆಸ್ ಪರ ದುಡಿದಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಕ್ಷೇತ್ರದಲ್ಲಿ ಮೋದಿ ಅಲೆ ಮತ್ತು ಶ್ರೀನಿವಾಸಪ್ರಸಾದ್ ಅಭಿಮಾನ ಬಿಜೆಪಿ ಪರ ಕೆಲಸ ಮಾಡಿದೆ. ಧ್ರುವ ಅವರ ಅಭಿವೃದ್ಧಿ ಕೆಲಸಗಳನ್ನು ಮನ್ನಿಸಿ ಕ್ಷೇತ್ರದ ಜನರು ಮತ ಹಾಕಿದ್ದಾರೆ. ಒಕ್ಕಲಿಗರು ಸಹ ಮೈತ್ರಿ ಅಭ್ಯರ್ಥಿಗೆ ಜೈ ಎಂದಿದ್ದಾರೆ ಎನ್ನಲಾಗುತ್ತಿದೆ.

ಅಸಮಾಧಾನಿತರ ಒಳೇಟು : ಜಿಲ್ಲೆಯ 4 ಕ್ಷೇತ್ರಗಳಲ್ಲಿರುವ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಪಕ್ಷಗಳಲ್ಲಿ ಅಸಮಾಧಾನಿತರು ಇದ್ದಾರೆ. ಕೆಲವು ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಇವರು ಒಳೇಟು ನೀಡುವ ಸಾಧ್ಯತೆಗಳಿವೆ.

ಚಾಮರಾಜನಗರ ಕ್ಷೇತ್ರದಲ್ಲಿ ಮುಖಂಡರಾದ ಉಡಿಗಾಲ ಕುಮಾರಸ್ವಾಮಿ, ಕೋಡಿಮೋಳೆ ರಾಜಶೇಖರ್, ಎಚ್.ಎನ್.ಬಸವರಾಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಕೊಳ್ಳೇಗಾಲ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಕಿನಕಹಳ್ಳಿ ರಾಚಯ್ಯ ಮತ್ತು ಡಿ.ಎನ್.ನಟರಾಜು ಬಿಜೆಪಿಗೆ ಸೇರಿದ್ದಾರೆ. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರಾದ ಕೊಡಸೋಗೆ ಶಿವಬಸಪ್ಪ ಬಿಜೆಪಿ ಸೇರಿದ್ದರು. ಪಕ್ಷಾಂತರಿಗಳು ಮತ್ತು ಆಯಾ ಪಕ್ಷಗಳ ಅಸಮಾಧಾನಿತರು ಒಳೇಟು ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Stay connected

278,748FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....