ಕೊನೆಗೂ ಸಿಎಂ ಬಿಎಸ್​ವೈ ಕೈ ಸೇರಿದ ಫೈನಲ್​ ಲಿಸ್ಟ್​: 17 ಶಾಸಕರಿಂದ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಬಿಜೆಪಿ ಸಚಿವ ಸಂಪುಟ ರಚನೆಗೆ ಇಂದು ಮುಹೂರ್ತ ಕೂಡಿಬಂದಿದ್ದು, ಕೊನೆಗೂ ಸಚಿವ ಸ್ಥಾನದ ಅಭ್ಯರ್ಥಿಗಳ ಪಟ್ಟಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಕೈ ಸೇರಿದೆ.

ಬಿಜೆಪಿ ಹೈಕಮಾಂಡ್​ ಕಳಿಸಿರುವ ಪಟ್ಟಿಯಂತೆ ಇಂದು 17 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿರುವ ಅಂತಿಮ ಪಟ್ಟಿಯಲ್ಲಿ ಹಲವು ಬದಲಾವಣೆಗಳಾಗಿವೆ. ಇಂದು ಬೆಳಗ್ಗೆ 10.30ರಿಂದ 11.30ರೊಳಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಸಂಪುಟದ 17 ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸೋಮವಾರ ಸಂಜೆಯವರೆಗೂ ಕುತೂಹಲವಾಗಿಯೇ ಉಳಿದಿದ್ದ ನೂತನ ಸಚಿವರ ಪಟ್ಟಿಯನ್ನು ತಡರಾತ್ರಿ ಅಂತಿಮಗೊಳಿಸಿ ಬಿಜೆಪಿ ವರಿಷ್ಠರು ಸಿಎಂ ಯಡಿಯೂರಪ್ಪ ಅವರಿಗೆ ರವಾನಿಸಿದ್ದಾರೆ.

ಬಿಜೆಪಿ ಹೈಕಮಾಂಡ್​ ನೀಡಿರುವ ಪಟ್ಟಿ ಹೀಗಿದೆ…

1. ಗೋವಿಂದ ಕಾರಜೋಳ, ಮುಧೋಳ, ದಲಿತ
2. ಡಾ. ಅಶ್ವತ್ಥ ನಾರಾಯಣ್​ ಸಿ.ಎನ್, ಮಲ್ಲೇಶ್ವರಂ, ಒಕ್ಕಲಿಗ
3. ಲಕ್ಷ್ಮಣ ಸವದಿ, ಅಥಣಿ ಮಾಜಿ ಶಾಸಕ, ಲಿಂಗಾಯತ
4. ಕೆ.ಎಸ್​ ಈಶ್ವರಪ್ಪ, ಶಿವಮೊಗ್ಗ ನಗರ, ಕುರುಬ
5. ಆರ್. ಅಶೋಕ್, ಪದ್ಮನಾಭ ನಗರ, ಒಕ್ಕಲಿಗ
6. ಜಗದೀಶ್​ ಶೆಟ್ಟರ್​, ಹು-ಧಾ ಕೇಂದ್ರ, ಲಿಂಗಾಯತ
7. ಬಿ. ಶ್ರೀರಾಮುಲು, ಮೊಳಕಾಲ್ಮೂರು, ವಾಲ್ಮೀಕಿ
8. ಸುರೇಶ್​ ಕುಮಾರ್​, ರಾಜಾಜಿನಗರ, ಬ್ರಾಹ್ಮಣ
9. ವಿ. ಸೋಮಣ್ಣ, ಗೋವಿಂದರಾಜ ನಗರ, ಲಿಂಗಾಯತ
10. ಸಿ.ಟಿ ರವಿ, ಚಿಕ್ಕಮಗಳೂರು, ಒಕ್ಕಲಿಗ
11. ಬಸವರಾಜ್​ ಬೊಮ್ಮಾಯಿ, ಶಿಗ್ಗಾವಿ, ಲಿಂಗಾಯತ
12. ಕೋಟಾ ಶ್ರೀನಿವಾಸ ಪೂಜಾರಿ, ಎಂಎಲ್​ಸಿ, ಬಿಲ್ಲವ
13. ಜೆ.ಸಿ ಮಾಧುಸ್ವಾಮಿ, ಚಿಕ್ಕನಾಯಕನಹಳ್ಳಿ, ಲಿಂಗಾಯತ
14. ಸಿ.ಸಿ ಪಾಟೀಲ್​, ನರಗುಂದ, ಲಿಂಗಾಯತ
15. ಎಚ್​. ನಾಗೇಶ್, ಮುಳಬಾಗಿಲು, ದಲಿತ
16. ಪ್ರಭು ಚೌಹಾಣ್​, ಔರಾದ್, ಲಂಬಾಣಿ
17. ಶಶಿಕಲಾ ಜೊಲ್ಲೆ, ನಿಪ್ಪಾಣಿ, ಲಿಂಗಾಯತ

17 ಸಚಿವರ ಪ್ರಮಾಣ: ಬಿಎಸ್​ವೈ ಟೀಮ್ ರೆಡಿ, ಹಿರಿ, ಕಿರಿಯರ ಸಮ್ಮಿಶ್ರಣ, ಜೊಲ್ಲೆ, ಸವದಿ, ಚವ್ಹಾಣ್, ಡಾ.ಅಶ್ವತ್ಥಗೆ ಒಲಿದ ಅದೃಷ್ಟ

Leave a Reply

Your email address will not be published. Required fields are marked *