ಷಾಗೆ ಹಂದಿ ಜ್ವರ, ಏಮ್ಸ್​ಗೆ ದಾಖಲು

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಂದಿ ಜ್ವರದಿಂದ ಬಳಲುತ್ತಿದ್ದು, ಏಮ್ಸ್​ಗೆ ದಾಖಲಾಗಿದ್ದಾರೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಅನಾರೋಗ್ಯ ನಿಮಿತ್ತ ಏಮ್ಸ್​ಗೆ ಮಂಗಳವಾರ ದಾಖಲಾಗಿದ್ದರು.

ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕಿಡ್ನಿ ಕಸಿಯ ಹೆಚ್ಚಿನ ಚಿಕಿತ್ಸೆಗೆ ಅಮೆರಿಕಕ್ಕೆ ತೆರಳಿದ್ದಾರೆ. ಈ ಬೆಳವಣಿಗೆಗಳ ಮಧ್ಯೆಯೇ ಬುಧವಾರ ಸಂಜೆ ವೇಳೆಗೆ ಷಾ ಅವರು ಏಮ್ಸ್​ಗೆ ದಾಖಲಾಗಿದ್ದಾರೆ. ಈ ವಿಚಾರವನ್ನು ಖುದ್ದು ಅಮಿತ್ ಷಾ ಬಹಿರಂಗಪಡಿಸಿದ್ದಾರೆ. ಚಿಕಿತ್ಸೆ ನಡೆಯುತ್ತಿದೆ. ದೇವರು ಹಾಗೂ ಜನರ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖನಾಗುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ಜ.20ರಿಂದ ನಡೆಯಬೇಕಿದ್ದ ಪಶ್ಚಿಮಬಂಗಾಳ ಸರಣಿ ಸಾರ್ವಜನಿಕ ಸಭೆ ಮತ್ತೆ ಮುಂದೆ ಹೋಗುವ ಸಾಧ್ಯತೆಯಿದೆ. ಹಾಲಿ ವೇಳಾಪಟ್ಟಿ ಪ್ರಕಾರ ಈ ಸಭೆಯನ್ನು ಷಾ ಉದ್ಘಾಟಿಸಬೇಕಿತ್ತು.