ದಲಿತ ಪರ ಮೋದಿ ಸರ್ಕಾರ

ವಿಜಯವಾಣಿ ಸುದ್ದಿಜಾಲ ಬಸವಕಲ್ಯಾಣ
ಮೋದಿ ಸರ್ಕಾರ ದೇಶದ ಅಭಿವೃದ್ಧಿಗೆ ಆದ್ಯತೆ ನೀಡಿದೆ. ದಲಿತರ ಪರ ಹಲವು ಯೋಜನೆ ಜಾರಿಗೊಳಿಸಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ದೀಪಕ್ ಗಾಯಕವಾಡ ಹೇಳಿದರು.

ಪತರ್ಾಪುರ, ತಳಭೋಗ, ಮೋರ್ಖಂಡಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಪ್ರಮುಖರೊಂದಿಗೆ ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿ, ಬಿಜೆಪಿ ದಲಿತ ವಿರೋಧಿ ಎಂದು ವಿರೋಧ ಪಕ್ಷದವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ದಲಿತರ ನಿಜವಾದಿ ವಿರೋಧಿ ಕಾಂಗ್ರೆಸ್ ಆಗಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೂರ್ಯಕಾಂತ ಚಿಲ್ಲಾಬಟ್ಟೆ, ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿಜಯಕುಮಾರ ಮಂಠಾಳೆ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲಿಸಬೇಕು ಎಂದು ಹೇಳಿದರು.

ನಗರ ಘಟಕ ಅಧ್ಯಕ್ಷ ಶಿವಪುತ್ರ ಗೌರ, ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ಅರವಿಂದ ಮುತ್ಯೆ, ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಚಂದ್ರಪ್ಪ ಪರ್ತಾಪುರೆ, ಪ್ರಮುಖರಾದ ಸುಭಾಷ ಕುದರೆ, ಉಜ್ವಲ ಶಾಸ್ತ್ರಿ, ಉಲ್ಕಾವತಿ ಬಿರಾದಾರ, ಚೆನ್ನಪ್ಪ ರಾಜಾಪುರೆ, ಪ್ರದೀಪ ಗಡವಂತಿ, ಪಕ್ಷದ ಕಾರ್ಯಕರ್ತರು ಇದ್ದರು.