ಹುಣಸೂರಿನಲ್ಲಿ ಸಿಮೆಂಟ್ ಮಾರುತ್ತಿದ್ದ ವಿಜಯ ಶಂಕರ್​ರನ್ನು ಮಂತ್ರಿ ಮಾಡಿದ್ದು ಯಡಿಯೂರಪ್ಪ: ಪ್ರತಾಪ್​ ಸಿಂಹ ವಾಗ್ದಾಳಿ

ಮೈಸೂರು: ಹುಣಸೂರಿನಲ್ಲಿ ಸಿಮೆಂಟ್ ಮಾರುತ್ತಿದ್ದ ವಿಜಯ ಶಂಕರ್ ಅವರನ್ನು ಮಂತ್ರಿ ಮಾಡಿದ್ದು ಯಡಿಯೂರಪ್ಪನವರು. ಆದರೆ, ಈಗ ಬಿಜೆಪಿಯನ್ನೇ ಕೋಮುವಾದಿ ಪಕ್ಷ ಅಂತೀರಾ? ಎಂದು ಸಂಸದ ಪ್ರತಾಪ್​ ಸಿಂಹ ಮೈತ್ರಿ ಅಭ್ಯರ್ಥಿ ವಿಜಯ್​ ಶಂಕರ್ ವಿರುದ್ಧ​ ವಾಗ್ದಾಳಿ ನಡೆಸಿದರು.

ಮಂಗಳವಾರ ಮೈಸೂರಿನಲ್ಲಿ ನಡೆದ ಬಿಜೆಪಿ ಬೃಹತ್​ ಸಮಾವೇಶದಲ್ಲಿ ಮಾತನಾಡಿದ ಅವರು ನಾನು ಕಾಗೆ ಹಾರಿಸುವ ಡುಬಾಕ್ ಪಾಲಿಟಿಕ್ಸ್ ಮಾಡಿಲ್ಲ. ನಾನು ಗೆದ್ದು ಬಂದಾಗ ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ಒಂದು ಹಬ್ಬ, ಜಾತ್ರೆ, ತಿಥಿಯಲ್ಲಿ ಪಾಲ್ಗೊಂಡು ಸಾಂಪ್ರದಾಯಿಕ ರಾಜಕಾರಣ ಮಾಡುವುದು. ಮತ್ತೊಂದು ಮೋದಿ ನಾಯಕತ್ವದಲ್ಲಿ ಅಭಿವೃದ್ಧಿ ರಾಜಕಾರಣ ಮಾಡುವುದು. ನಾನು ಪ್ರಾಮಾಣಿಕವಾಗಿ ಅಭಿವೃದ್ಧಿ ರಾಜಕಾರಣ ಮಾಡಿದ್ದೇನೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ 28 ಸಂಸದರು ಇದ್ದಾರೆ. ಯಾವೊಬ್ಬ ಸಂಸದನಿಗೂ 2 ಟ್ರೈನ್ ತರಲು ಸಾಧ್ಯವಾಗಲಿಲ್ಲ. ಆದರೆ, ನಾನು 6 ಟ್ರೈನ್ ತಂದಿದ್ದೇನೆ ಎಂದು ಭಾಷಣದ ಬರದಲ್ಲಿ ಬಿಜೆಪಿ ಸಂಸದರನ್ನೂ ಅಣಕಿಸಿ ಪೇಚಿಗೆ ಸಿಲುಕಿದ ಪ್ರತಾಪ್ ಸಿಂಹ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ, ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಐದು ಪೈಸೆ ಕೊಡಲಿಲ್ಲ. ಕ್ಷೇತ್ರದ ಜನರಿಗೆ ಕುಡಿಯುವ ನೀರು ಕೊಡೋಕೆ ಆಗಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಮಾಡಿದ ಅನ್ಯಾಯವನ್ನು ಬಾದಾಮಿ ಕ್ಷೇತ್ರದ ಮತದಾರರಿಗೆ ಮಾಡಬೇಡಿ. ಅಲ್ಲಿ ಹೋಗಿ ಕೆಲಸ ಮಾಡಿ ಎಂದು ಜರಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *