ಚುನಾವಣೆ ಖರ್ಚಿಗಾಗಿ ಆಸ್ತಿಯನ್ನು ಒತ್ತೆಯಿಟ್ಟ ಕೊಪ್ಪಳ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ

ಕೊಪ್ಪಳ: ಚುನಾವಣೆಯ ಖರ್ಚಿಗಾಗಿ ಸ್ಥಿರ ಹಾಗೂ ಚರಾಸ್ತಿಯನ್ನು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಅವರು ಒತ್ತೆಯಿಟ್ಟಿದ್ದಾರೆ.

ತಮ್ಮ ಬಳಿ ಇರುವ ಬಂಗಾರ, ವಾಸವಿರುವ ಮನೆ, ಇತರೆ ಆಸ್ತಿಯನ್ನು ಅಡವಿಟ್ಟಿರುವ ಕರಡಿ ಸಂಗಣ್ಣ, ಈ ಕುರಿತು ಕೊಪ್ಪಳ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದಾರೆ.

ಹೊಸಪೇಟೆ ಮೂಲದವರಿಗೆ 39 ಲಕ್ಷ ರೂಪಾಯಿಗಳಿಗೆ ಆಸ್ತಿಯನ್ನು ಒತ್ತೆಯಿಟ್ಟಿರುವ ಕರಡಿ ಸಂಗಣ್ಣ, ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ನಿರ್ಧರಿಸಿ ಆಸ್ತಿಯನ್ನು ಒತ್ತೆಯಿಟ್ಟಿದ್ದಾರೆ.(ದಿಗ್ವಿಜಯ ನ್ಯೂಸ್​)