ಸ್ಟ್ರಾಂಗ್​ ರೂಂಗೆ ತಮ್ಮದೊಂದು ಬೀಗ ಹಾಕಲು ಚುನಾವಣೆ ಆಯೋಗದ ಅನುಮತಿ ಕೇಳಿದ ಬಿಜೆಪಿ ಅಭ್ಯರ್ಥಿ

ಹೈದರಾಬಾದ್​: ಚುನಾವಣೆ ಬರುವವರೆಗೆ ಒಂದು ತರಹದ ಆರೋಪ ಪ್ರತ್ಯಾರೋಪಗಳಾದರೆ ಚುನಾವಣೆ ಮುಗಿದ ಬಳಿಕ ಇವಿಎಂ ಸರಿಯಿಲ್ಲ, ಇವಿಎಂ, ವಿವಿಪ್ಯಾಟ್​ಗಳಿಗೆ ಭದ್ರತೆ ಸಾಕಾಗುತ್ತಿಲ್ಲ ಎಂಬಂತಹ ಆರೋಪ ಕೇಳಿಬರುವುದು ಸಾಮಾನ್ಯವಾಗಿದೆ.

ಈ ಮಧ್ಯೆ ತೆಲಂಗಾಣ ನಿಜಾಮಾಬಾದ್​ನ ಬಿಜೆಪಿ ಅಭ್ಯರ್ಥಿ ಚುನಾವಣಾ ಆಯೋಗಕ್ಕೆ ಪತ್ರ ಬರೆದು ತಾನೊಂದು ಬೀಗ ಕೊಡುತ್ತೇನೆ. ಅದನ್ನು ಸ್ಟ್ರಾಂಗ್​ ರೂಂಗೆ ಹಾಕಲು ಅವಕಾಶ ನೀಡಿ ಎಂದು ಕೇಳಿಕೊಂಡಿದ್ದಾರೆ.

ಮೊದಲ ಹಂತದ ಚುನಾವಣೆಯಲ್ಲೇ ನಿಜಾಮಾಬಾದ್​ನಲ್ಲಿ ಕೂಡ ಮತದಾನವಾಗಿದೆ. ಈಗ ಅಲ್ಲಿನ ಇವಿಎಂ, ವಿವಿಪ್ಯಾಟ್​ಗಳೆಲ್ಲ ಸ್ಟ್ರಾಂಗ್​ ರೂಂ ಸೇರಿದ್ದು ಬಿಜೆಪಿ ಅಭ್ಯರ್ಥಿ ಅರವಿಂದ್​ ಧರ್ಮಪುರಿ ತಾವೂ ಕೂಡ ರೂಂ ಗೆ ಬೀಗಹಾಕಲು ಅವಕಾಶ ಮಾಡಿಕೊಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.