More

    ಬಿಜೆಪಿ ಲೆಕ್ಕಾಚಾರ ತಲೆಕೆಳಗೆ : ಗ್ಯಾರಂಟಿ ಕಾರ್ಡ್ ಕಾಂಗ್ರೆಸ್‌ ಗೆ ವರದಾನ

    ನವೀನ್ ಎಂ.ಬಿ.ದಾವಣಗೆರೆ
    ಮಧ್ಯಕರ್ನಾಟಕದ ದಾವಣಗೆರೆ-ಚಿತ್ರದುರ್ಗ ಅವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಗತ ವೈಭವಕ್ಕೆ ಮರಳಿದೆ. ಆಡಳಿತಾರೂಢ ಬಿಜೆಪಿ ಧೂಳೀಪಟವಾಗಿದೆ. ಜಾತ್ಯತೀತ ಜನತಾದಳ ಅಸ್ತಿತ್ವ ಕಳೆದುಕೊಂಡಿದೆ.

    ಮೀಸಲು ಪ್ರಮಾಣ ಹೆಚ್ಚಳವಾಗಲಿ, ಲಿಂಗಾಯತ ಮತದಾರರು ಕೈ ಹಿಡಿಯುತ್ತಾರೆಂಬ ವಿಶ್ವಾಸ ವಾಗಲಿ ಬಿಜೆಪಿ ಗೆಲುವಿಗೆ ಮುನ್ನುಡಿ ಬರೆಯಲಿಲ್ಲ.

    ಕಾಂಗ್ರೆಸ್ ವಿಜಯ ಪತಾಕೆ

    ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳ 13 ವಿಧಾನಸಭೆ ಕ್ಷೇತ್ರಗಳ ಪೈಕಿ 11ರಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದರೆ, ಕಮಲ ಪಡೆ 2 ಸ್ಥಾನ ಗಳಿಸಲು ಏದುಸಿರು ಬಿಟ್ಟಿದೆ. ಜೆಡಿಎಸ್ ಮತ್ತೆ ಸೊನ್ನೆ ಸುತ್ತಿದೆ.

    ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೇರಿ ಕಣದಲ್ಲಿದ್ದ ಐವರು ಬಿಜೆಪಿ ಶಾಸಕರು ಸೋಲಿನ ಕಹಿ ಉಂಡಿದ್ದಾರೆ.

    ಕಳೆದ ಬಾರಿ 13 ರ ಪೈಕಿ 10 ಸ್ಥಾನಗಳನ್ನು ಕಳೆದುಕೊಂಡಿದ್ದ ಕಾಂಗ್ರೆಸ್ ಈ ಬಾರಿ 11 ರಲ್ಲಿ ವಿಜಯ ದುಂದುಭಿ ಮೊಳಗಿಸುವ ಮೂಲಕ ಬಿಜೆಪಿಗೆ ಲೆಕ್ಕ ಚುಕ್ತಾ ಮಾಡಿದೆ.

    2018ರಲ್ಲಿ ದಾವಣಗೆರೆ ಉತ್ತರದಲ್ಲಿ ಸೋಲಿನ ಕಹಿ ಉಂಡಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ಈ ಬಾರಿ ದೊಡ್ಡ ಗೆಲುವು ದಾಖಲಿಸಿ ತಮ್ಮ ಅಸ್ತಿತ್ವ ಸಾರಿದ್ದಾರೆ.

    92ರ ಹರೆಯದ ಡಾ.ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣದಿಂದ ಅತ್ಯಧಿಕ ಮತಗಳ ಅಂತರದಿಂದ ಗೆದ್ದು 6ನೇ ಬಾರಿ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.

    ದೊಡ್ಡ ಅಂತರದ ಜಯ

    ಟಿಕೆಟ್ ಹಂಚಿಕೆ ಅಸಮಾಧಾನದ ನಡುವೆಯೂ ಮಾಯಕೊಂಡದಲ್ಲಿ ಕಾಂಗ್ರೆಸ್‌ನ ಬಸವಂತಪ್ಪಗೆ ದೊಡ್ಡ ಅಂತರದ ಜಯ ಸಿಕ್ಕಿದೆ. ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದೆ.

    ಹಾವು-ಏಣಿಯಾಟಕ್ಕೆ ಸಾಕ್ಷಿಯಾಗಿದ್ದ ಜಗಳೂರಲ್ಲಿ ಕಾಂಗ್ರೆಸಿನ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ , ಬಿಜೆಪಿಯ ಎಸ್.ವಿ.ರಾಮಚಂದ್ರ ವಿರುದ್ಧ 1470 ಅಲ್ಪ ಮತಗಳ ಅಂತರದ ಜಯ ಪಡೆದಿದ್ದಾರೆ.ಪಕ್ಷೇತರ ಅಭ್ಯರ್ಥಿ ರಾಜೇಶ್ ನಂತರದ ಸ್ಥಾನದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಚಲಾವಣೆಯಾದ ನೋಟಾ ಮತಗಳ ಸಂಖ್ಯೆಯೇ 1908 ಎನ್ನುವುದು ವಿಶೇಷ.

    ಶಾಂತನಗೌಡರಿಗೆ ಆಶೀರ್ವಾದ

    ಬಿಜೆಪಿ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಹೊನ್ನಾಳಿಯಲ್ಲಿ ಮತದಾರರು ರೇಣುಕಾಚಾರ್ಯ ಬದಲು ಕಾಂಗ್ರೆಸಿನ ಡಿ.ಜಿ.ಶಾಂತನಗೌಡರಿಗೆ ಆಶೀರ್ವಾದ ಮಾಡಿದ್ದಾರೆ.

    ಬಿಜೆಪಿ ಲೆಕ್ಕಾಚಾರ ತಲೆಕೆಳಗೆ : ಗ್ಯಾರಂಟಿ ಕಾರ್ಡ್ ಕಾಂಗ್ರೆಸ್‌ ಗೆ ವರದಾನ

    ಹರಿಹರದಲ್ಲಿ ಗೆಲುವಿಗೆ ತೀವ್ರ ಪೈಪೋಟಿ ಒಡ್ಡಿದ್ದ ಕೈ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ವಿರುದ್ಧ ಬಿಜೆಪಿಯ ಬಿ.ಪಿ.ಹರೀಶ್ 4300 ಮತಗಳ ಅಂತರದಲ್ಲಿ ಗೆಲುವಿನ ದಡ ಸೇರಿದ್ದಾರೆ. ಜೆಡಿಎಸ್‌ನ ಶಿವಶಂಕರ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

    ಚನ್ನಗಿರಿಯಲ್ಲಿ ಹೊಸಮುಖ, ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ಶಿವಗಂಗಾ ಮೊದಲ ಯತ್ನದಲ್ಲಿ ತೇರ್ಗಡೆಯಾಗಿ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.

    ಬಿಜೆಪಿ ಟಿಕೆಟ್ ವಂಚಿತ ಪಕ್ಷೇತರ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ್ ಗಣನೀಯ ಮತ ಪಡೆದರೂ ಜಯದ ಏಣಿ ಏರಲು ವಿಫಲರಾಗಿದ್ದಾರೆ. ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts