ಕುಂದಗೋಳ, ಚಿಂಚೋಳಿ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ

ಬೆಂಗಳೂರು: ಕುಂದಗೋಳ ಮತ್ತು ಚಿಂಚೋಳಿ ವಿಧಾಸಭೆ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ಭಾನುವಾರ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಟ್ಟಿಯನ್ನು ಪ್ರಕಟಿಸಿದೆ. ಉಮೇಶ್​ ಜಾಧವ್​ ಅವರ ರಾಜೀನಾಮೆಯಿಂದ ತೆರವಾಗಿದ್ದ ಚಿಂಚೋಳಿ ವಿಧಾನಸಭೆ ಕ್ಷೇತ್ರಕ್ಕೆ ಅವರ ಪುತ್ರ ಅವಿನಾಶ್​ ಜಾಧವ್​ ಹೆಸರನ್ನು ಅಂತಿಮಗೊಳಿಸಲಾಗಿದೆ.

ಕುಂದಗೋಳ ಕ್ಷೇತ್ರದಿಂದ ಎಸ್​ಐ ಚಿಕ್ಕನಗೌಡರ್​ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಇದೇ ಜತೆಯಲ್ಲೇ ಗೋವಾದ ಮಾಜಿ ಸಿಎಂ ಮನೋಹರ್​ ಪರಿಕ್ಕರ್​ ಅವರ ನಿಧನದಿಂದ ತೆರವಾಗಿದ್ದ ಪಣಜಿ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯ ಹೆಸರು ಘೋಷಿಸಲಾಗಿದೆ. ಪರಿಕ್ಕರ್​ ಅವರ ಪುತ್ರ ಉತ್ಪಲ್​ ಪರಕ್ಕರ್​ ಅವರಿಗೆ ಟಿಕೆಟ್​ ನಿರಾಕರಿಸಿದ್ದು ಸಿದ್ಧಾರ್ಥ್ ಕುನ್ಸಿಲೆನ್ಕರ್​ಗೆ ಟಿಕೆಟ್​ ನೀಡಲಾಗಿದೆ.