More

    ಬಿಸರಹಳ್ಳಿಯಲ್ಲಿ ಅರವಟಿಗೆ ಸ್ಥಾಪನೆ, ಜನರ ದಾಹ ನೀಗಿಸಿದ ರಾಮಣ್ಣ

    ಅಳವಂಡಿ: ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನ ಪರಿತಪಿಸುತ್ತಾರೆ. ಇದನ್ನು ಮನಗಂಡ ರೈತ ರಾಮಣ್ಣ ಬಿಸರಹಳ್ಳಿ ಗ್ರಾಮದಲ್ಲಿ ಬಸ್ ನಿಲ್ದಾಣದ ಬಳಿ ಅರವಟಿಗೆ ಸ್ಥಾಪಿಸಿ ಜನರ ನೀರಿನ ದಾಹವನ್ನು ನೀಗಿಸುತ್ತಿದ್ದಾರೆ.

    ಇದನ್ನೂ ಓದಿ: ಬೇಸಿಗೆಯಲ್ಲಿ ಅರವಟಿಗೆ ಸೇವೆ ಶ್ಲಾಘನೀಯ ಕಾರ್ಯ

    ಮಸಾರಿ ಭಾಗ ಹೊಂದಿದ ಗ್ರಾಮಗಳಲ್ಲಿ ಕೆರೆಗಳಿಲ್ಲದೇ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಹೀಗಾಗಿ ಬೇಸಿಗೆ ಸಂದರ್ಭದಲ್ಲಿ ನೀರಿನ ಬವಣೆ ತೀರಿಸಲು ಅನೇಕ ಸಂಘ, ಸಂಸ್ಥೆ ಹಾಗೂ ಸಮಾಜ ಸೇವಕರು ಜನನಿಬಿಡ ಪ್ರದೇಶದಲ್ಲಿ ಅರವಟಿಗೆ ಸ್ಥಾಪಿಸಲು ಮುಂದಾಗುತ್ತಾರೆ. ಈ ಹಾದಿಯಲ್ಲಿ ರಾಮಣ್ಣ ಸಾಗುತ್ತಿದ್ದಾರೆ.

    ರೈತ ರಾಮಣ್ಣ ದೊಡ್ಡಹನುಮಪ್ಪ ಹುಲ್ಲೂರು ಮೂರು ವರ್ಷಗಳಿಂದ ನೀರಿನ ಅರವಟಿಗೆ ಸ್ಥಾಪಿಸುತ್ತಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ 9 ದಿನಗಳ ಕಾಲ ನಡೆದ ಗ್ರಾಮದ ಆರಾಧ್ಯ ದೇವತೆ ಶ್ರೀದ್ಯಾಮವ್ವ ಜಾತ್ರೆ ಸಂದರ್ಭದಲ್ಲಿ ಭಕ್ತರಿಗೆ ಕುಡಿಯುವ ನೀರು ಒದಗಿಸಿದ್ದರು.

    ಬಿಸರಹಳ್ಳಿಯಲ್ಲಿ ಅರವಟಿಗೆ ಸ್ಥಾಪನೆ, ಜನರ ದಾಹ ನೀಗಿಸಿದ ರಾಮಣ್ಣ

    ರಾಮಣ್ಣ ಅವರು ನೀರಿನ ಅರವಟಿಗೆ ಸ್ಥಾಪಿಸಿ ಪ್ರಯಾಣಿಕರಿಗೆ ಹಾಗೂ ಗ್ರಾಮಸ್ಥರಿಗೆ ನೀರಿನ ದಾಹ ನೀಗಿಸುತ್ತಿದ್ದಾರೆ. ಅವರು ಎಲ್ಲರಿಗೂ ಮಾದರಿಯಾಗಿದೆ.
    | ಭರಮನಗೌಡ ಮಾಲಿಪಾಟೀಲ, ಗ್ರಾಮಸ್ಥ. ಬಿಸರಳ್ಳಿ

    ಬಿಸರಹಳ್ಳಿಯಲ್ಲಿ ಅರವಟಿಗೆ ಸ್ಥಾಪನೆ, ಜನರ ದಾಹ ನೀಗಿಸಿದ ರಾಮಣ್ಣ

    ಕುಡಿಯುವ ನೀರಿನ ಸಮಸ್ಯೆ ಅರಿತುಕೊಂಡು ಅರಿವಟಿಗೆ ಸ್ಥಾಪಿಸಲು ಯೋಚನೆ ಮಾಡಿದೆ. ಈ ಸಮಾಜಿಕ ಕಾರ್ಯಕ್ಕೆ ಗ್ರಾಮಸ್ಥರ ಸಹಕಾರ ಇದೆ.
    | ರಾಮಣ್ಣ ದೊಡ್ಡಹನುಮಪ್ಪ ಹುಲ್ಲೂರು, ಬಿಸರಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts