ಹುಬ್ಬಳ್ಳಿ: ಇಲ್ಲಿಯ ಬ್ಯೂರೋ ಆಫ್ ಇಂಡಿಯನ್ ಸ್ಟಾ್ಯಂಡರ್ಡ್ಸ್ (ಬಿಐಎಸ್) ಶಾಖೆ ವತಿಯಿಂದ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಕ್ವಾಲಿಟಿ ವಾಕ್ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು.
ಇಲ್ಲಿಯ ಭೈರಿದೇವರಕೊಪ್ಪ ಬಳಿಯ ಸನಾ ಗ್ರುಪ್ ಆಫ್ ಇನ್ಸ್ಟಿಟ್ಯೂಟ್ ಸಹಯೋಗದಲ್ಲಿ ಆಯೋಜಿಸಿದ್ದ ವಾಕಥಾನ್ನಲ್ಲಿ 650ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಸುಮಾರು ನಾಲ್ಕು ಕಿ.ಮೀ. ವರೆಗೆ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.
ರ್ವ್ಡಲ ಸ್ಟಾ್ಯಂಡರ್ಡ್ಸ್ ಡೇ ಆಚರಣೆ ಅಂಗವಾಗಿ ಉತ್ಪಾದಕರು ಹಾಗೂ ಗ್ರಾಹಕರಲ್ಲಿ ಗುಣಮಟ್ಟದ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಿತ್ಯ ಬಳಕೆ ವಸ್ತುಗಳು ಗುಣಮಟ್ಟದಿಂದ ಕೂಡಿರಬೇಕು, ಗ್ರಾಹಕರು ಸದಾ ಜಾಗೃತರಾಗಿರಬೇಕು ಎಂಬುದು ಸೇರಿದಂತೆ ವಿವಿಧ ಫಲಕಗಳನ್ನು ಹಿಡಿದುಕೊಂಡು ವಿದ್ಯಾರ್ಥಿಗಳು ಘೊಷಣೆ ಮೊಳಗಿಸಿದರು.
ಸನಾ ಕಾಲೇಜಿನಿಂದ ಆರಂಭವಾದ ವಾಕಥಾನ್ಗೆ ಬಿಐಎಸ್ ಶಾಖೆಯ ಉಪನಿರ್ದೇಶಕ ಎಂ. ಪ್ರದೀಪಕುಮಾರ, ಸನಾ ಗ್ರುಪ್ನ ಟ್ರಸ್ಟಿ ಅಶ್ರಫ್ ಅಲಿ ಅವರು ಚಾಲನೆ ನೀಡಿದರು. ಉಣಕಲ್ಲ ಉದ್ಯಾನದವರೆಗೆ ಸಾಗಿದ ಜಾಥಾದಲ್ಲಿ ಅಧಿಕಾರಿಗಳು, ಅಧ್ಯಾಪಕರು ಭಾಗವಹಿಸಿದ್ದರು.